ಕಾವ್ಯ ಸಂಗಾತಿ
ಲಕ್ಷ್ಮಿ ದೇವಿ ಪತ್ತಾರ
ಕ್ರಾಂತಿಯಿಂದ ಸಂಕ್ರಾಂತಿಯೆಡೆಗೆ
ನೀನು ನೀನಾಗಿರಲು
ಅಸಹನೀಯವಾದದನ್ನು
ಸಹಿಸಿಕೊಂಡಿರುವದನ್ನು ಬಿಟ್ಟು ಬೀಡು
ಒಂದೇ ಕೈಯಿಂದ ಚಪ್ಪಾಳೆ ಎಂದು ಆಗದು
ಹಣೆ ಬಡೆದುಕೊಂಡಿರಬೇಕಷ್ಟೆ
ಹೊಂದಾಣಿಕೆ ಎಂಬುದು ಅತ್ತ-ಇತ್ತ ಎರಡೂ ಕಡೆಯೂ ಇರಬೇಕು
ಒಗ್ಗದ,ಅಗ್ಗದ ಅಡುಗೆ ಒತ್ತಾಯಕ್ಕೆ ಉಂಡು
ಅಜೀರ್ಣವಾಗಿ ವಾಂತಿಭೇದಿಯಾಗಿ ಹಾಸಿಗೆ ಹಿಡಿದು ನರಳುವ ಬದಲು
ಒಲ್ಲೆ ಎನ್ನುವುದ ಕಲಿಯಬೇಕು
ಹೊಟ್ಟೆ ಗಟ್ಟಿಯಾಗಿರಲು
ಮನಸು ಸೊಗಸಾಗಿರಲು
ಮುಳ್ಳು ಚುಚ್ಚಿದ ಮೆಟ್ಟು ಎಷ್ಟು ದಿನ ಅಂತ ಮೆಟ್ಟುವೆ ಹೆಣ್ಣೆ
ದಿನ ದಿನ ಚುಚ್ಚಿಸಿಕೊಂಡು ನೋಯುವ ಬದಲು ಬಿಟ್ಟಾಕಿ
ಬರಗಾಲಲ್ಲಾದರೂ ಬದುಕು
ನೀನು ನೀನಾಗಿರಲು
ನಿನಗಿಷ್ಟವಾದುದನ್ನು ಮಾಡು
ನಿನ್ನಿಷ್ಟ, ಕಷ್ಟ ಕೇಳುವರೂಂದಿಗೆ ಬದುಕು ದೂಡು
ತಾಳಿ ಬಾಳುವುದರಲ್ಲೆ ಹಲವರ ಹಿತವೆಂದಾದರೆ ಒಂದು ಕ್ಷಣ ಯೋಚಿಸಿ ನೋಡು
ಮತ್ತೆ ಮಾಡಿದ್ದೆ ಮಾಡೊದು
ದಿನ ದಿನ
ಕ್ರಾಂತಿ ಒಂದೇ ಸಲ!
ಕಡ್ಡಿ ಮುರಿದಂತೆ
ಪರಿಣಾಮ ಜೀವಮಾನ
ತಯಾರಾಗು, ಮುನ್ನುಗ್ಗು
ಮಾಡು ಹೋಸ ಕ್ರಾಂತಿ
ಅಳಿದು ಹೋಗಲಿ ಭ್ರಾಂತಿ
ನೀನಿಟ್ಟ ಹೆಜ್ಜೆಯ ಸದ್ದು
ಅಸಹಾಯಕ, ದುರ್ಬಲರ ನೋವಿಗಾಗಲಿ ಮದ್ದು
ಲಕ್ಷ್ಮಿ ದೇವಿ ಪತ್ತಾರ
ಸುಂದರ
ಎರಡನೆಯ ಮತ್ತು ಮೂರನೆಯ ಪ್ಯಾರಾ ಭಾಳ ತೀಕ್ಷ್ಣವಾಗಿ ಮನದ ಮಾತನ್ನು ಹೇಳಿವೆ.
ಮಾರ್ಮಿಕ ನುಡಿಗಳು.