ಗೊರೂರು ಅನಂತರಾಜು ಅವರ ಕೃತಿ ‘ಸೇವೆಯ ಹಾದಿಯಲ್ಲಿ’ ಅವಲೋಕನ ಸಾವಿತ್ರಮ್ಮಓಂ ಅರಸೀಕೆರೆ

ಪುಸ್ತಕ ಸಂಗಾತಿ

ಗೊರೂರು ಅನಂತರಾಜು

‘ಸೇವೆಯ ಹಾದಿಯಲ್ಲಿ’

ಸಾವಿತ್ರಮ್ಮಓಂ ಅರಸೀಕೆರೆ

ಶ್ರೀಯುತ ಗೊರೂರು ಅನಂತರಾಜು‌ ರವರು ರಚಿಸಿದ ೫೦ ಕೃತಿಗಳಲ್ಲಿ ಸೇವೆಯ ಹಾದಿಯಲ್ಲಿ ಎಂಬುದು ಬಹಳ ಜನರ ಮೆಚ್ಚುಗೆ ಪಡೆದ ಕೃತಿಯಾಗಿದೆ. ಈ ಕೃತಿಯಲ್ಲಿ ಲೇಖಕರು ಅನೇಕರ ಸಾಧಕರ ಬಹುಮುಖ್ಯ‌ ವಿಚಾರಗಳನ್ನು ಪ್ರಸ್ತುತ ಪಡಿಸಿದ್ದಾರೆ.

ಭತ್ತದ ಸಂಕರಣ ತಳಿಯ ಹರಿಕಾರ ಎಂಬ ಶೀರ್ಷಿಕೆಯಡಿಯಲ್ಲಿ ಚಾಮರಾಜನಗರ ಜಿಲ್ಲೆಯ ಮಾದಾಪುರ ಗ್ರಾಮದಲ್ಲಿ ೪ನೇ ಆಗಸ್ಟ ೧೯೩೭ ರಲ್ಲಿ ಜನಿಸಿದ ಡಾ. ಎಂ.ಮಹದೇವಪ್ಪನವರು ಅಂದಿನಿಂದ ಇಂದಿನವರೆಗೂ ನಡೆದು ಬಂದ ದಾರಿ ವರ್ಣಮಯ.
1970ರಲ್ಲಿ ಹೆಬ್ಬಾಳಿನ ಕೃಷಿ ಕಾಲೇಜಿನಲ್ಲಿ ಪದವಿ. ಕೊಯಮತ್ತೂರಿನ ಕೃಷಿ ಕಾಲೇಜಿನಲ್ಲಿ ಪ್ರಥಮ ಸ್ಥಾನದಲ್ಲಿ ಮಾಸ್ಟರ್ ಮತ್ತು ಡಾಕ್ಟರೇಟ್ ಪದವಿ. ೪೦ ವರ್ಷಗಳವರೆಗೆ ಸತತ ಆಧ್ಯಯನ, ಬೋಧನೆ, ಸಂಶೋಧನೆ ವಿಸ್ತರಣೆ ಮತ್ತು ಆಡಳಿತ ಪ್ರಕ್ರಿಯೆಯಲ್ಲಿ ಅಪೂರ್ವ ಸಾಧನೆಗೈದು ಅನುಭವದ ಸಾಕಾರಮೂರ್ತಿಯಾಗಿದ್ದಾರೆ.
ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಪ್ರಥಮವಾಗಿ ಎರಡು ಬಾರಿ ಕುಲಪತಿಗಳಾಗಿ ಅಮೋಘ ಸೇವೆ ಸಲ್ಲಿಸಿ ರಾಷ್ಟ್ರದಲ್ಲೆ ಅತ್ಯುತ್ತಮ ಕೃಷಿ ವಿಶ್ವವಿದ್ಯಾಲಯ ಎಂಬ ಪದಕ ದೊರಕಿಸಿಕೊಟ್ಟರು. ೪೦ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಿಸಿ ೧೬ ಸಂಶೋಧಕರಿಗೆ ಡಾಕ್ಟರೇಟ್ ಮಾರ್ಗದರ್ಶನ ನೀಡಿ ವಿದ್ಯಾರ್ಥಿ ಗಳಿಗೆ ಜವಾಹರಲಾಲ್ ನೆಹರು ಪದಕ ದೊರಕಿಸಿಕೊಟ್ಚರು. ಇವರ ಸಂಶೋಧನೆಯಿಂದ ಕೃಷಿಕರಿಗೆ ನೀಡಿದ ಭತ್ತದ ತಳಿಗಳೆಂದರೆ ಮಧು,ಮಂಗಳ, ಪುಷ್ಪ,ಪ್ರಗತಿ,‌ವಿಕ್ರಮ, ಮುಕ್ತಿ ಮುಂತಾದವು, ಅತಿ ಅಪಾಯಕಾರಿ ಕಳೆ ಪಾರ್ಥೇನಿಯಂ ಹಾಗೂ ಅದರ ನಿಯಂತ್ರಣದ ಬಗ್ಗೆ ವಿಶ್ವದಲ್ಲಿರುವ ಏಕೈಕ ಇಂಗ್ಲೀಷ್ ಮತ್ತು ಕನ್ನಡ ಪುಸ್ತಕಕ್ಕೆ ಇವರೇ ಲೇಖಕರು. ಅಂತಾರಾಷ್ಟ್ರೀಯ ವಾಟುಮಲ್ ಹಾಗೂ ಹುಕ್ಕರ್ ಆವಾಡ್೯ ನಿಂದ ಮೊದಲುಗೊಂಡು ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿವರೆಗೆ ಇವರಿಗೆ‌ ಸಂದ ಪುರಸ್ಕಾರಗಳ ವ್ಯಾಪ್ತಿ ಬಹು ವಿಶಾಲವಾದದ್ದು. ಮೈಸೂರಿನ ಜೆ.ಎಸ್.ಎಸ್ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಲಹೆಗಾ಼ರರಾಗಿರುವ ಇವರು ತೊಡಗಿಸಿಕೊಂಡಿರುವ ಕ್ಷೇತ್ರಗಳು ಹತ್ತು ಹಲವು.

 ಜಲದ ಸೆಲೆ ಗುರುತಿಸಬಲ್ಲ ನವಿಲುಮಾರನಹಳ್ಳಿ ಎನ್. ಎನ್. ರಾಮೇಗೌಡ

  ಅಂಗೈ ಮೇಲೆ ಸಿಪ್ಪೆ ಸುಲಿದ ತೆಂಗಿನಕಾಯಿ ಹಿಡಿದು  ಭೂಮಿಯಲ್ಲಿ ಜಲದ ಸೆಲೆ ಪತ್ತೆ ಮಾಡುತ್ತಿರುವ ಸಾಂಪ್ರದಾಯಕ ಜಲ ತಜ್ಞ

ಎನ್ .ಎನ್. ರಾಮೇಗೌಡ ತಮ್ಮಲ್ಲಿರುವ ವಿಶೇಷ ಸಾಮರ್ಥ್ಯದ ಮೂಲಕ ಕೃಷಿ ಭೂಮಿಯಲ್ಲಿ ಜಲದ ಸೆಲೆಯನ್ನು ಪತ್ತೆ ಹಚ್ಚಬಲ್ಲ ಪತ್ತೇದಾರರು. ಇವರು. ಹಾಸನ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ
ಚಾಮರಾಜನಗರ, ಬೆಂಗಳೂರು ನಗರ ಗ್ರಾಮಾಂತರ ಜಿಲ್ಲೆಗಳಲ್ಲಿ
ಕೃಷಿ ಜಮೀನಿನ ನೂತನ ಕೊಳವೆ ಬಾವಿಗಳನ್ನು ಕೊರೆಸಲು ಜಲದ ಸೆಲೆಗಳನ್ನು ಗುರುತಿಸಿ ಕೊಟ್ಟಿದ್ದಾರೆ.

*ಗುಲಾಬಿ ಕೃಷಿಯ ಖುಷಿ ಹೇಮಾ

ಹಾಸನ ದುದ್ದ ಮಾರ್ಗದಲ್ಲಿ ಹೊಸೂರು ಗೇಟ್ ಗೌರಿಪುರದ ಬಳಿ ೨೩ ‌ಎಕರೆ ಕೃಷಿ ಭೂಮಿಯಲ್ಲಿ ಕೆಂಬಣ್ಣದ ಗುಲಾಬಿ ಹೂಗಳು ಅರಳಿ ಕಣ್ಮನ ಸೆಳೆಯುತ್ತವೆ. ಈ ಹೂಗಳ ಒಡತಿ ಹಾಸನ‌ ನಗರದ‌ ಹೇಮ‍ ಅನಂತರಾಜ್ ಇತರರಿಗೆ ಮಾದರಿಯಾಗಿದ್ದಾರೆ. ಚನ್ನಪಟ್ಚಣದಿಂದ ಗುಲಾಬಿ ಸಸಿ ತಂದು ಬೆಳೆದಿರುವ ಇವರು ಪ್ರತಿದಿನ‌ ಮೂರ್ನಾಲ್ಕು ಸಾವಿರಕ್ಕೂ ಹೆಚ್ಚು ಗುಲಾಬಿ ಮಾರಾಟ ಮಾಡುತ್ತಾರೆ. ಚಿಕ್ಕಮಗಳೂರು ಮೈಸೂರು ಮಂಗಳೂರಿನಿಂದಲೂ ಬೇಡಿಕೆ‌ ಇದೆ.

ಕನ್ನಡ ಸಂಸ್ಕ್ರತ ಭಾಷಾ ಬಾಂಧವ್ಯದ ಪ್ರೋ. ಸಿ.ಜಿ.ಪುರುಷೋತ್ತಮ್
ಹಾಸನ ನಗರದ ಹೃದಯ ಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು‌ ಸಾಹಿತ್ಯ ಭವನ ಪ್ರವೇಶಿಸಿದರೆ ಭವನ ನಿರ್ಮಾಣಕ್ಕೆ ೫೧ ಸಾವಿರ ದೇಣಿಗೆ ನೀಡಿದ ಪ್ರೋ. ಸಿ.ಜಿ ‌‌ಪುರುಷೋತ್ತಮ ಅವರ ಹೆಸರು ‌ಶಿಲಾನ್ಯಾಸ ಕಲ್ಲಿನಲ್ಲಿ ಕಂಡು ಬರುತ್ತದೆ. ೩೬ ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಪುರುಷೋತ್ತಮ ರವರಿಗೆ ಸಂಸ್ಕ್ರುತ, ಹಿಂದಿ ಕನ್ನಡ ಇಂಗ್ಲೀಷ್ ಭಾಷೆಯಲ್ಲಿ ಆಳವಾದ ಪಾಂಡಿತ್ಯವಿದೆ.

ಸಿಂಗನಹಳ್ಳಿ ಸ್ವಾಮಿಗೌಡರ ಜಾನಪದ ಕಾಳಜಿ.
ಕೆ.ಆರ್.ಪೇಟೆ ತಾ. ಅಕ್ಕಿಹೆಬ್ಬಾಳು ಹೋಬಳಿ ಸಿಂಗನಹಳ್ಳಿ ಒಣ ಭೂಮಿಯ ಹಳ್ಳಿಯಾದರೂ ಜಾನಪದ ಕಲೆಗಳಿಗೆ ಹೆಸರಾಗಿದೆ. ಇಲ್ಲಿ ಹುಟ್ಟಿ ಬೆಳೆದ ಸ್ವಾಮಿಗೌಡರು ಭೂಗೋಳದಲ್ಲಿ ಸ್ನಾತಕೋತ್ತರ ಪದವಿ ಪಡೆದು ಹಳ್ಳಿಗರ ನಡುವೆಯೇ ಬಾಳ್ವೆ ನಡೆಸಿ, ಸಿಂಗನಹಳ್ಳಿ ಸುತ್ತಮುತ್ತ ಜಾನಪದ ಕಲಾವಿದರ ನಿಕಟ ಸಂಪರ್ಕವನ್ನು ಹೊಂದಿದ್ದಾರೆ.ಇವರು ಅನೇಕ ಜಾನಪದ ಕಲಾವಿದರಿಗೆ ಸರ್ಕಾರದಿಂದ ಪ್ರಶಸ್ತಿ‌ ಮತ್ತು ಮಾಸಾಶನಗಳನ್ನು ಮಾಡಿಸಿ ಕೊಟ್ಟಿದ್ದಾರೆ. ಗ್ರಾಮ ದೇವತೆ ಹಬ್ಬದಲ್ಲಿ ಗ್ರಾಮದ ಗಂಡು ಕಲೆಗಳಾದ ಮೂಡಲಪಾಯ, ಯಕ್ಷಗಾನ, ಹುಲಿವೇಷ, ಪಾಳೇಗಾರಿಕೆ, ದೊಡ್ಡ ವರಸೆ, ಜರಿಯುವ ಪದಗಳು, ಮರಗಾಲು ಕುಣಿತ, ಬೆಂಕಿ ಭರಾಟೆ, ಬಿಜಲಿವರಸೆ, ಕೋಲಾಟ, ನಾಟ್ಯ ವಾದ್ಯಗಳ ಪ್ರದರ್ಶಿಸಲ್ಪಡುವ ಉತ್ಸವಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾ ಬಂದಿರುವ ಇವರು, ಗ್ರಾಮದ ಕಲಾವಿದನನ್ನು ಸಂಘಟಿಸಿ, ಹೊರಗೆ ಕರೆದೋಯ್ದು ಪ್ರದರ್ಶನ ಕೊಡಿಸಿ ಪ್ರೋತ್ಸಾಹಿಸುತ್ತಾ ಇದ್ದ ಇವರು ಇಂದು ನಮ್ಮನ್ನಗಲಿದ್ದಾರೆ. .

ಗ್ರಾಮೀಣ ಸೇವೆಯ ರಾಮಕುಮಾರ್

ಭೇರ್ಯದ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಕಳೆದ 3೦‌ ವರ್ಷಗಳಿಂದ ಸಾಹಿತ್ಯ ಸಾಂಸ್ಕ್ರುತಿಕ ಚಟುವಟಿಕೆಗಳಿಂದ ಕ್ರಿಯಾ ಶೀಲವಾಗಿದೆ. ಇದರ ಸ್ಥಾಪಕ ಅಧ್ಯಕ್ಷರಾದ ಭೇರ್ಯ ರಾಮಕುಮಾರ್ ಉತ್ತಮ ಸಂಘಟಕರಾಗಿದ್ದಾರೆ. ಗ್ರಾಮಾಂತರ ಪ್ರದೇಶದ ಎಲೆಮರೆ ಕಾಯಿಯಂತಿರುವ ಕವಿ ಕಲಾವಿದರನ್ನು ಬೆಳಕಿಗೆ ತರುವ ಗಣ್ಯರುಗಳನ್ನು ಸನ್ಮಾನಿಸುವ ದಿಶೆಯಲ್ಲಿ ತಮ್ಮ ಬಳಗದ ವತಿಯಿಂದ ೧೫೦ ಕ್ಕೂ ಹೆಚ್ಚು ಕವಿಗೋಷ್ಠಿಗಳು, ಸಾಹಿತ್ಯ ಗೋಷ್ಠಿಗಳು, ಜಾನಪದ ಕಲಾಮೇಳಗಳು, ಯುವಜನ‌ ಜಾಗೃತಿ ಶಿಬಿರಗಳು, ಬೀದಿ ನಾಟಕಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ.

ದೇ‌ಶವಿದೇಶಗಳ ಅಪೂರ್ವ ನಾಣ್ಯ-ನೋಟುಗಳ ಪ್ರದರ್ಶನ

  ಬಗೆ ಬಗೆಯ ದೇಶ ವಿದೇಶಗಳ ನೋಟುಗಳು, ಇತಿಹಾಸ ಸಾರುವ‌ ನಾಣ್ಯಗಳು, ಒಂದಲ್ಲ ಎರಡಲ್ಲ ಎಣಿಸುತ್ತಾ ಹೋದಲ್ಲಿ ಸಮಯ ಜಾರಿದ್ದೆ‌ ಅರಿವಾಗುವುದಿಲ್ಲ . ಹುಬ್ಬಳ್ಳಿಯ ಡಾ.ಕೆ.ಎಸ್. ಶರ್ಮಾರವರ ವಿಶ್ವ ಶ್ರಮ ಚೇತನದ ಕಲ್ಯಾಣ ಮಂಟಪದಲ್ಲಿ ಹುಣಸೂರಿನ ದೂರವಾಣಿ ಉದ್ಯೋಗಿ ಪಿ.ಕೆ ಕೇಶವಮೂರ್ತಿ ಅವರ‌ ಅಪೂರ್ವ‌ ನಾಣ್ಯ ಮತ್ತು ನೋಟುಗಳ ೬೮ನೇ ಪ್ರದರ್ಶನ ಇಮ ನಡೆದ ಬಗ್ಗೆ ‌ಬರೆದಿದ್ದಾರೆ.

ಪರಿಸರ ಕಾಳಜಿಯ ಉಪನ್ಯಾಸಕ ಡಾ. ಕೆ.ಎಸ್. ರವಿಕುಮಾರ್

   ಹಾಸನದ ಎ.ವಿ.ಕೆ ಕಾಲೇಜು ವಿದ್ಯಾರ್ಥಿನಿಯರು ರಾಷ್ಟ್ರೀಯ‌ ಸೇವಾ ಯೋಜನೆಯಡಿ ಸ್ವಯಂ ಸೇವಾ ಕೆಲಸಗಳಲ್ಲಿ ನಿರತರಾಗಿ ಹಾಸನದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ನಡೆಸಿಕೊಟ್ಟ ಯಶಸ್ವಿ ಶಿಬಿರಗಳು ಮಾದರಿಯಾಗಿವೆ. ಪರಿಸರ ವಿಜ್ಞಾನ ವಿಭಾಗದಲ್ಲಿ ಡಾ..ಇ. ಟಿ.ಪುಟ್ಟಯ್ಯನವರ. ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿ ಪಿ.ಹೆಚ್.ಡಿ. ಪದವಿ ಪಡೆದ‌ ಎ.ವಿ.ಕೆ ಕಾಲೇಜಿನ ಸಸ್ಯ ಶಾಸ್ತ್ರಉಪನ್ಯಾಸಕರು ಡಾ. ಬಿ.ಎಸ್.ರವಿಕುಮಾರ್ ರವರ ಬಗ್ಗೆ ಬರೆದಿದ್ದಾರೆ.

ಗ್ರಾಮಾಭಿವೃದ್ಧಿಯಲ್ಲಿ ಶ್ರಮದಾನ ಶಿಬಿರ
ಡಾ. ಬಿ.ಎಸ್ ರವಿಕುಮಾರ್ ೬ ವರ್ಷ ಕಾಲೇಜು‌ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ತಮ್ಮ ಕ್ರಿಯಾಶೀಲ ಚಟುವಟಿಕೆಗಳಿಂದ ವಿದ್ಯಾರ್ಥಿನಿಯರಿಂದ ಸ್ವಯಂ ಸೇವಾ ನೆಲೆಯಲ್ಲಿ ತೊಡಗಿಸಿ, ಹಾಸನದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಶಸ್ವಿ ಶಿಬಿರಗಳನ್ನು ಪ್ರಗತಿಪರ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದಾರೆ. ಹತ್ತು ದಿನಗಳ ವಿಶೇಷ ಎನ್ ಎಸ್ ಎಸ್ ಕ್ಯಾಂಪಿನಲ್ಲಿ ಗ್ರಾಮಗಳ ನೈರ್ಮಲೀಕರಣ, ರಸ್ತೆ ನಿರ್ಮಾಣ, ಪ್ಲಾಂಟೇಷನ್ ಗಿಡಮರಗಳನ್ನು ಬೆಳೆಸುವುದು ಹೀಗೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ‌

ಇಪ್ಪತ್ತನೇ ಶತಮಾನದ ಅದ್ವಿತೀಯ ಕನ್ನಡಿಗ
ಇಂಗ್ಲೇಂಡಿನ ಆಕ್ಸಫರ್ಡ್ ನಲ್ಲಿರುವ ಇಂಟರ್ ನ್ಯಾಷನಲ್ ಬಯೋಗ್ರಾಫಿಕಲ್ ಸೆಂಟರ್ ಪ್ರಕಟಿಸಿರುವ ಇಪ್ಫತ್ತನೇ ಶತಮಾನದ ಅದ್ವಿತೀಯ ವ್ಯಕ್ತಿಗಳ (outstanding people of 20th century) ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ವ್ಯಕ್ತಿ ಮೈಸೂರಿನ ಡಾ. ಎ.ಟಿ. ಈಶ್ವರ್ ಹಾಸನದ ಮಲ್ನಾಡ್ ಇಂಜನಿಯರಿಂಗ್ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿದ್ದ ಇವರು, ಅನ್ವಯಕ ಗಣಿತ ಶಾಸ್ತ್ರದಲ್ಲಿ ಫ್ರೋ. ಗಿರೀಶ್ವರ್ ನಾಥರವರ ಮಾರ್ಗದರ್ಶನದಲ್ಲಿ numerical investigation of unsteady incompressible laminar Boundary layer Flous ” ಎಂಬ ಸಂಶೋಧಿತ ಅದ್ಯಯನ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.ವಿಶ್ವದಲ್ಲೇ ಪ್ರಿಮೀಯರ್ ಸಂಶೋಧನಾ ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಡಾಕ್ಟರೇಟ್ ಪದವಿ ನೀಡಿದೆ.
ಉಪನ್ಯಾಸದಲ್ಲಿ ರಾಷ್ಟ್ರೀಯ ಲಿಮ್ಕಾ ದಾಖಲೆ
ಹಾಸನ ಜಿಲ್ಲೆ ಸಕಲೇಶಪುರದಲ್ಲಿ ರಾಷ್ಟ್ರೀಯ ದಾಖಲೆಗೆ ಸೇರ್ಪಡೆಯಾಗುವಂತಹ ೨೪ ಗಂಟೆಗಳ ಕಾಲ ಉಪನ್ಯಾಸ ನೀಡಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದವರು ಸ್ಥಳೀಯ ಬಿ‌.ಎಡ್.ಕಾಲೇಜಿನ ಉಪನ್ಯಾಸದ ಓಬಳೇಶ್ ಘಟ್ಟಿಯವರು.
ಕನಸುಗಾರ ಕ್ಷೇತ್ರ ಶಿಕ್ಷಣಾಧಿಕಾರಿಯ ನೆನಸುವ ಕಾರ್ಯ
ಹಾಸನದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಕೆ. ಶಿವೇಗೌಡರಿಗೆ ಹಲವಾರು ಕನಸುಗಳಿದ್ದವು. ಶಾಲೆಯ ಹೊರಗೆ ಒಳಗೆ ಸುಂದರಗೊಳಿಸಲು ಚಿಣ್ಣರ ಗಂಗೋತ್ರಿ ಕಾರ್ಯಕ್ರಮ ಶುರು ಮಾಡಿ ಶಾಲಾ ಆವರಣದಲ್ಲಿ ಅಂದ ಚೆಂದದ ಗಿಡ ಬೆಳೆಸುವಲ್ಲಿ ತಮ್ಮದೇ ಪಾತ್ರ ನಿವ೯ಹಿಸಿದರು.
ಹನ್ಯಾಳು ಶಾಲೆಯ ಪ್ರಗತಿ ಕಥೆ
ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿ ಹನ್ಯಾಳು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಸಿರು ಪರಿಸರ ದಿಂದ ‍ಕಂಗೊಳಿಸುತ್ತಿದೆ. ಶಾಲೆಗೆ ಸೇರಿದ ಒಂದೂವರೆ ಎಕರೆ ಭೂಮಿಯಲ್ಲಿ ತೆಂಗು ,ಬೀಟೆ , ತೇಗ,ಸರ್ವೆ, ಮರಗಳು, ಮಾವು, ದಾಳಿಂಬೆ, ಸೀಬೆ, ಸೀತಾಫಲ ಮುಂತಾದ ಹಣ್ಣಿನ ಗಿಡಗಳು, ಹೂವಿನ ಗಿಡಗಳ ರಕ್ಷಣೆಗಾಗಿ, ತಂತಿಬೇಲಿ ಎಲ್ಲವನ್ನು ಯುವ ಶಿಕ್ಷಕ ಟಿ. ಮಲ್ಲೇಶ್ ರವರಿಂದ ಸಾಧ್ಯವಾಗಿದೆ.

ಜನಮೆಚ್ಚಿದ ಶಿಕ್ಷಕನ ಸೀಗೂರು ಮಾದರಿ ಶಾಲೆ
ಹದಿಮೂರು ವರ್ಷ ಸುeೂರು ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕ ಭದ್ರೇಗೌಡರು ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಗೊರೂರು ಪ್ರೌಢಶಾಲೆಯ ಜನ ಮೆಚ್ಚಿದ ಶಿಕ್ಷಕ ಹಾಲ್ ಸಿದ್ದಪ್ಪ
ಚೈತನ್ಯ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಶಾಲೆಯ ಗ್ರಂಥಾಲಯ ಪುಸ್ತಕ ಬಳಸಿ ಮಕ್ಕಳಿಗೆ ಅತ್ಯುತ್ತಮ ಬೋಧನೆ ಮಾಡುವ ಹಾಲಸಿದ್ದಪ್ಪನವರು ಆದಶ೯ ಶಿಕ್ಷಕರು.

ಯೋಗದಿಂದ ಆರೋಗ್ಯ ದೀಕ್ಷೆ
ಮಲ್ಲಾಡಿಹಳ್ಳಿಯ ರಾಘವೆಂದ್ರಸ್ವಾಮಿಯ ತತ್ವಾದರ್ಶಗಳಲ್ಲಿ ನಂಬಿಕೆ ಇರಿಸಿ. ಸ್ವಯಂ ಸೇವಾ ನೆಲೆಯಲ್ಲಿ ೧೨ ವರ್ಷ ಹಾಸನದ ಬಿ.ಎನ್. ಮನೋಜ್ ಇವರು ಯೋಗದಿಂದ ಆರೋಗ್ಯ ವೃದ್ಧಿಯ ಪಾಠ ತೋರಿಸಿ ಕೊಟ್ಟಿದ್ದಾರೆ.
ಸಮಾಜ ಸೇವಾಸಕ್ತ ಪ್ರಾಚಾರ್ಯ ಬಿ.ಎನ್.ರಾಮಸ್ವಾಮಿ
ಹಾಸನ ಸಂತೇಪೇಟೆ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಿ.ಎಸ್. ರಾಮಸ್ವಾಮಿಯವರು ಸಾಹಿತ್ಯ, ಸಮಾಜಸೇವೆ, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಹಾಸನ ಜಿಲ್ಲಾ ಕ. ಸಾ. ಪ. ಅಧ್ಯಕ್ಷರಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿದ್ದರು.
ರಾಜ್ಯ ಯುವ ಪ್ರಶಸ್ತಿ ಪಡೆದ ರಕ್ತದಾನಿ
ಮಲ್ನಾಡ್ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಜಿ. ಮಂಜುನಾಥ ತಮ್ಮ ಮೂವತ್ತನೇ ವಯಸ್ಸಿನಲ್ಲಿ ಹದಿನಾರು ಬಾರಿ ರಕ್ತದಾನ ಮಾಡಿ ಅನೇಕ ಜೀವ ಉಳಿಸಿದ್ದಾರೆ. ನಾಲ್ಕು ಗಂಟೆಗಳಲ್ಲಿ ೪೦೦ ಬಾಟಲ್ ರಕ್ತ ಸಂಗ್ರಹಿಸಿ ಕೊಟ್ಟಿದ್ದಾರೆ.
ಪತ್ರಕರ್ತ ಶಾಂತಿಗ್ರಾಮ ಪೂಚಣ್ಣ
ಹಾಸನ ಜಿಲ್ಲಾರಾಜ್ಯೋತ್ಸವ ಪುರಸ್ಕಾರ ಪಡೆದ ಶಾಂತಿಗ್ರಾಮದ ಪೂಚಣ್ಣನವರದು ಪತ್ರಿಕೋದ್ಯಮದಲ್ಲಿ ನಿಸ್ವಾರ್ಥ ಸಾರ್ಥಕ ಸೇವೆ‌
ಉದಯೋನ್ಮುಖ ಕವಿ ಮಂಜುನಾಥ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಕೆರೆ ಎಂಬ ಹಳ್ಳಿಯವರು. ಕಡು ಬಡವರಾದರೂ ಕಾವ್ಯದಲ್ಲಿ ಸಿರಿತನ ಕಂಡುಕೊಂಡವರು .
*ಸಮಾಜ ಸೇವಾಸಕ್ತ ಕೆ.ಜಿ. ವೆಂಕಟರಮಣಪ್ಪ ಕೆಲವು ಪ್ರವಾಸಿ ಪುಸ್ತಕ ಬರೆದಿರುವರು.
ಹಲ್ಮಿಡಿ ಶಾಸನವಿರುವ ಹಲ್ಮಿಡಿ ಗ್ರಾಮದಲ್ಲಿರುವ ವೀರಭದ್ರೇಶ್ವರ ದೇವಾಲಯಕ್ಕೆ ಪುನಶ್ಚೇತನ ಮಾಡಿದಂತವರು ಗ್ರಾಮದ ಹೆಚ್. ಪಿ. ಚನ್ನೇಗೌಡರು.
*ಹಾಸನ ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಹೆಚ್. ಕೆ.ಗೋಪಾಲಕೃಷ್ಣ ಜಿಲ್ಲಾ ದೇವಾಂಗ ಸಂಘ ಬೆಳೆಸಿದವರು.
ಬಸವನಹಳ್ಳಿ ಶಾಲೆಗೆ ಹೊಸ ರಂಗು ತಂದವರು ಜನಮೆಚ್ಚಿದ ಶಿಕ್ಷಕ ಕೆ.ಎಲ್ ರಮೇಶ್ ಕುಮಾರ್ ಅವರು.
ಸಾಕ್ಷರತಾ ಚಳುವಳಿಗೆ ಗೋಡೆ ಬರಹ ಬಳುವಳಿ ನೀಡಿದವರು ಯಾಕೂಬ್ ಅವರು.
ಚಾಮರಾಜನಗರ ಜಿಲ್ಲೆ ಯಳಂದೂರಿನ ಯ. ಮ. ಹೇಮಂತ್ ಕುಮಾರ್ ಸೇವೆ ಸ್ಮರಣೀಯ.
ಮದ್ಯವ್ಯಸನಿ ಮುಕ್ತಿ ಕೇಂದ್ರದಲ್ಲೊಂದು ಸುತ್ತು
ಗಾಂಧೀವಾದಿ ಶಿವಣ್ಣ ಅವರ ಕಿರು ಪರಿಚಯ
ಕೆರೆಯ ನೀರನು ಕೆರೆಗೆ ಚೆಲ್ಲಿದ ಆದರ್ಶ ವಿದ್ಯಾದಾನಿ ಎ. ಎನ್. ವರದರಾಜುಲು
ವರದ ಸೇವಾ ಪ್ರತಿಷ್ಠಾನದ ಸದ್ದಿಲ್ಲದ ಸೇವೆ
ಅರಕಲಗೂಡು ವಾಸವಿ ಸೇವಾಕ್ಷೇತ್ರ
ಸಮಾಜ ಸೇವೆಯಲ್ಲಿ ಬದುಕಿನ ಸಾರ್ಥಕತೆ ಕಂಡ ಸರೋಜಮ್ಮ
*ನಿಟ್ಟೂರು ಶ್ರೀನಿವಾಸರಾವ್ ಸೇವಾ ಸಂಸ್ಥೆಯ ಗಿರೀಶ್ ಜೊತೆ ಲೇಖಕರು
ದೇವಾಂಗ ಸಮಾಜದ ಸೇವಾಸಕ್ತ ಲೇಖಕ ಗೊರೂರು ಸೋಮಶೇಖರ್
ಯುವ ಪ್ರಶಸ್ತಿ ವಿಜೇತ ಸಮಾಜ ಸೇವಾಸಕ್ತ ಜಿ. ಹೆಚ್. ಮಂಜುನಾಥ
*ಎರಡು ಹಳ್ಳಿ ಶಾಲೆಗಳ ಅಭಿವೃದ್ಧಿಯಲ್ಲಿ ಜನಮೆಚ್ಚಿದ ಶಿಕ್ಷಕನ ಕ್ರಿಯಾಶೀಲ ಸೇವೆ-ಎಚ್.ಟಿ.ಅಣ್ಣಾಜಿಗೌಡರು ನಟರು ಹೌದು. ರಾಜ್ಯಮಟ್ಟದ ಸಾಕ್ಷರತಾ ಕಾರ್ಯಕ್ರಮದಲ್ಲಿ ಗಾಯಕರಾಗಿ ಜನಜಾಗೃತಿ ಮೂಡಿಸುವಲ್ಲಿ ಕಾಳಾಬೋವಿಯವರು ಒಬ್ಬರು.
ಹಾಸನದ ಸಕಾ೯ರಿ ಪ್ರೌಢಶಾಲೆಯಲ್ಲಿನ ಜಿಮ್ನಾಷಿಯಂ
ಶಾಲೆಯ ಯಶೋಗಾಥೆಯಲ್ಲಿ ದೈಹಿಕ ಶಿಕ್ಷಕರಾದ ಎಸ್.ಎಂ.ನಾಗೇಂದ್ರರ ತರಬೇತಿ ಪ್ರಮುಖವಾದುದು. .ಶತಮಾನ ಕಂಡ ಅನಾಥಾಶ್ರಮದ ಆವರಣದಲ್ಲಿ ನೆಲೆಯಾಗಿರುವ ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿ ಪ್ರೇಮದ ಸಾಕಾಣಿಕೆ, ಮೈಸೂರು ವರುಣ ಶಾಲೆಯ ಪ್ರಗತಿಗಾಥೆಯಲ್ಲಿ ಮುಖ್ಯ ಶಿಕ್ಷಕ ತಿ. ರಾಮಕೃಷ್ಣಯ್ಯ ನವರ ಮುಖ್ಯ ಪಾತ್ರ ಹೀಗೆ ಶಿಕ್ಷಕರ ಶೈಕ್ಷಣಿಕ ಸಾಧನೆಯ ಹಾದಿಯಲ್ಲಿ ಸಾಗಿ ಬಂದಿರುವುದನ್ನು ಗುರುತಿಸಿದ್ದಾರೆ. ಹೌದು ರಂಗಪ್ರೇಮಿ ಆರ್. ಡಿ. ಗೌಡರು ರಾಸುಪ್ರೇಮಿಯೂ ಹೌದೆಂಬುದನ್ನು
ನಿರೂಪಿಸಿದ್ದಾರೆ ಮತ್ತೊಂದು ಸೊಗಸಾದ ಬರಹದಲ್ಲಿ. ಕತ್ತಲಿಂದ ಬೆಳಕಿಗೆ ಎಚ್ಚರ ಎಂಬ ಕವನ ಸಂಕಲನದ ಕವಿ ಡಾ. ಕೆ. ಎಸ್. ಶಮಾ೯ರವರ ಹೋರಾಟದ ಬದುಕಿನಲ್ಲಿ ಅರವತ್ತು ಸಾವಿರ
ಕ್ಕೂ ಹೆಚ್ಚಿನ ದಿನಗೂಲಿ ನೌಕರರು ಖಾಯಂಗೊಂಡು ದಿನಗೂಲಿ ದಿನಕರರಾದ ಮಾನವತಾವಾದಿಯ ಲೈಫ್ ಸ್ಟೋರಿ ವಿಶ್ವ ಶ್ರಮ ಚೇತನದ ಚೈತನ್ಯಗಾಥೆಯೂ ರೋಚಕವಾದುದು. ಕೃಷಿಯಿಂದ ಕೈಗಾರಿಕೋದ್ಯಮಿಯಾಗಿ ಬೆಳೆದ ಜೆ. ಓ. ಮಹಾಂತಪ್ಪರವರ ಬೆಳವಣಿಗೆಯನ್ನು ಹತ್ತಿರದಿಂದ ಕಂಡಿರುವ ಲೇಖಕರು ಬಹುದಿನಗಳ
ಹಿಂದೆಯೇ ಅವರು ತಮ್ಮ ಸಾಮಾಜಿಕ ಸಾಂಸ್ಕೃತಿಕ ಸೇವೆಯಿಂದ ರಾಜ್ಯ ಸಕಾ೯ರದ ಗಮನ ಸೆಳೆಯುವ ದಿಶೆಯಲ್ಲಿ ಈ ಲೇಖನವು ಲೇಖಕರ ದೂರದೃಷ್ಟಿ
ಚಿಂತನೆ ಸಖೇದಾಶ್ಚಯ೯ ತರುತ್ತದೆ. ಏಕೆಂದರೆ ಈ ವಿಮಶೆ೯ ಬರೆಯುವ ಹೊತ್ತಿನಲ್ಲಿ ಜೆ. ಓ. ಮಹಾಂತಪ್ಪ ಅವರಿಗೆ ಸಮಾಜ ಸೇವೆಗೆ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ.
ಗೊರೂರು ಅನಂತರಾಜು ಸಾಹಿತಿಗಳಷ್ಟೇ ಅಲ್ಲಾ ನಟ ನಾಟಕಕಾರರು ಹೌದು. ರಂಗಭೂಮಿ ಕ್ಷೇತ್ರದಲ್ಲಿ ಇವರ ಪಾತ್ರವನ್ನು ಸಕಾ೯ರ ಇನ್ನಾದರೂ ಗಮನಿಸಬೇಕಾಗಿದೆ. ಇದು ನನ್ನೊಬ್ಬಳ ಆಶೆಯಲ್ಲಾ. ಜಿಲ್ಲೆಯ ರಾಜ್ಯದ ಕಲಾವಿದರ ಆಶಯವೂ. ಏಕೆಂದರೆ ಅಷ್ಟಿದೆ ಗೊರೂರು ಅನಂತರಾಜು ಅವರ ರಂಗ ಸೇವೆ.
ಇಂತಹ ಕಲಾವಿದರು ತಮ್ಮನ್ನು ರಂಗಭೂಮಿಗೆ ತಂದ ರಂಗ ಗುರು ಜಿ. ಎಸ್. ಪ್ರಕಾಶ್‌ ಅವರಿಗೆ ನುಡಿ ನಮನದ ರಂಗ ಸಲಾಂ ಅಪಿ೯ಸುತ್ತಾರೆ. ಅವರ ಮೊದಲ ರಂಗ ಪ್ರವೇಶದ ಸರಿದ ತೆರೆ ನಾಟಕ ಹರಿದ ತೆರೆಯಾಗಿ ಮಾತು ಮರೆತ ಅನಂತು ತಬ್ಬಿಬ್ಬಾಗಿ ನಿಂತು ನಾಟಕ ಅಧ೯ಕ್ಕೆ ನಿಂತಿದ್ದು ತಮಾಷೆಯಾಗಿದೆ. ಅಂತಹವರು ಇಂದು ಬೆಳೆದು ನಿಂತ ಬಗೆಯೂ ಪರಿಶ್ರಮದಿಂದ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದೆಂದು ನಿರೂಪಿಸುವ ಆತ್ಮಾವಲೋಕನವೇ ಸರಿ.
ಅರಕಲಗೂಡು ತಾಲೂಕಿನ ರುದ್ರಪಟ್ಟಣ ಸಂಗೀತ ಗ್ರಾಮ ಎಂದು ಹೆಸರು ಪಡೆದಿದೆ. ಏಕೆಂದರೆ ಇಲ್ಲಿಯ ನೆಲ ಮೂಲದ ಅನೇಕ ಸಂಗೀತ ವಿದ್ವಾಂಸರು ನಾಡಿನಲ್ಲಿ ಹೆಸರಾಗಿದ್ದಾರೆ. ಶ್ರೀ ಆರ್. ಕೆ. ಪದ್ಮನಾಭ ಅವರ ಸಂಗೀತ ಸಾಧನೆಯೂ ಅನನ್ಯ. ಅಷ್ಟೇ ಅಲ್ಲಾ
ಗ್ರಾಮಾಭಿವೃದ್ಧಿಯಲ್ಲೂ ಶ್ರೀಯುತರ ಕೊಡುಗೆಯೂ ಗಮನಾರ್ಹವೂ ಹೌದು. ಇಂತಹ ಆರ್. ಕೆ. ಪದ್ಮನಾಭರ ಪರಿಚಯ ಬರಹ ಒಂದೇ ಟೇಕ್ ಗೆ ಓಕೆ.
ವಿಶ್ವ ಕಂಡ ಮಹಾ ಮಾನವರಲ್ಲಿ ಒಬ್ಬರೆನಿಸಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಜೀವನ ದರ್ಶನ ಅನನ್ಯವಾದುದು. ಸ್ವಯಂ ಪರಂಜ್ಯೋತಿ ಸ್ವರೂಪವಾದ ಮಹಾಂತರು. ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ 350 ಕೃತಿಗಳಿಂದ ಹೆಸರಾಗಿರುವ ಮಂಡ್ಯದ ವೈದ್ಯರು ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು ಶ್ರೀ ಸಿದ್ಧಗಂಗಾ ಮಠ ಮತ್ತು ಶ್ರೀ ಶಿವಕುಮಾರಸ್ವಾಮಿಗಳ ಸಾಧನೆ ಸಿದ್ಧಿ ಅವರು ಜನಸಾಮಾನ್ಯರ ಬಗ್ಗೆ ಇಟ್ಟುಕೊಂಡಿದ್ದ ಕಾಳಜಿ ಮತ್ತು ಅವರ ಬದುಕಿನ ದಶ೯ನವನ್ನು ಮುಕ್ತ ಛಂದಸ್ಸಿನ ಸರಳ ರಗಳೆಯಲ್ಲಿ ಪರಂಜ್ಯೋತಿ ಮಹಾಕಾವ್ಯ ರಚಿಸಿದ್ದು ಈ ಕೃತಿಯನ್ನು ಅನಂತರಾಜ್ ಸರ್ ಅತ್ಯಂತ ಆಪ್ತತೆಯಲ್ಲಿ ಪರಿಚಯಿಸುತ್ತಾರೆ.
ರಾಜ್ಯ ಮಟ್ಟದ ಸಾಂಸ್ಕೃತಿಕ ಸಂಘಟನೆಯಲ್ಲಿ ಮೂರು ದಶಕಗಳನ್ನೇ ಕಳೆದಿರುವ ರಮೇಶ್ ಸುವೆ೯ ಲೇಖಕರು ನಟರು ಪತ್ರಕತ೯ರು. ಇವರ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯನ್ನು ಕಿರಿದಾಗಿ ಅವಲೋಕಿಸಿದ್ದಾರೆ. ಡಾ. ಎಂಜಿಆರ್ ಅರಸ್ ಆವರದು ಚುಟುಕು ಸಾಹಿತ್ಯ ಪ್ರಕಾರಕ್ಕೆ ತಮ್ಮದೇ ಚುಟುಕು ಸಾಹಿತ್ಯ ಕಾಣಿಕೆ ನೀಡಿದವರು. ರಾಜ್ಯ ಚುಟುಕು ಸಾಹಿತ್ಯ ಪರಿಷತ್ತು ಸಂಸ್ಥಾಪಕರು. ಇವರ ವೈದ್ಯ ವಾತಾ೯ ಪ್ರಕಾಶನದ 138ನೇ ಕೃತಿ ಚುಟುಕು ಯುಗಾಚಾಯ೯ ಪರಿಚಯಿಸುತ್ತಲೇ ಚುಟುಕು ಕವಿಯನ್ನು ಪರಿಚಯಿಸಿದ್ದಾರೆ. ಹಳ್ಳಿ ಶಾಲೆಯನ್ನು ಮುನ್ನಡೆಸಿ ರಾಜ್ಯ ಪ್ರಶಸ್ತಿಗೆ ಭಾಜನರಾದ ಶ್ರವಣಬೆಳಗೊಳದ ಕಹೀಂ ಪಾಷ, ಸಾಲು ಮರದ ತಿಮ್ಮಕ್ಕನ ಪ್ರೇರಣೆಯಲ್ಲಿ ಹಳ್ಳಿಗಾಡಿಯಲ್ಲಿ ಗಿಡ ಮರ ನೆಟ್ಟ ಸಾಲು ಮರದ ಪೊಲೀಸ್ ವೈ. ಬಿ. ಕಾಂಗ್ರೆಸ್ ಚೊಚ್ಚಲ ಕವನ ಸಂಕಲನ ಸಿರಿಸಮೃದ್ದಿ ಸಂಕಲನದ ಕಡೆಯ ಲೇಖನ. ಹೀಗೆ ಸಾಕಷ್ಟು ಸಮೃದ್ಧಿಯಿಂದ ಕೃತಿಯು
ಅನೇಕ ಸಾಧಕರನ್ನು ಶ್ರೀಯುತ ಗೊರೂರು ಅನಂತರಾಜು ಸರ್ ರವರು ಪರಿಚಯ ಮಾಡಿಕೊಟ್ಟಿರುವ ಪುಸ್ತಕವೇ ಈ ಸೇವೆಯ ಹಾದಿಯಲ್ಲಿ ಪು‌ಸ್ತಕ. ಒಟ್ಟಾರೆ ಅದ್ಭುತವಾದ ಕ್ರೋಢಿಕರಣವಾಗಿದೆ.
————————–

ಸಾವಿತ್ರಮ್ಮಓಂ ಅರಸೀಕೆರೆ

Leave a Reply

Back To Top