ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ದೇವರು ಮಾತಾಡಲೆ ಇಲ್ಲ
[ದೇವರು ಮಾತಾಡಲೆ ಇಲ್ಲ
ಹೊರಗಡೆ ಬಿಕ್ಷುಕ
ದೇವರಿಗೆ ಬೇಡುತ್ತಲೆ ಇದ್ದಾನೆ,
ಒಂದೊತ್ತಿನ ಊಟಕ್ಕೆ
ಕೈಮುಗಿದು ಚರಣಕ್ಕೆ ಶಿರಬಾಗಿದ್ದರೂ
ದೇವರು ಮಾತಾಡಲೆ ಇಲ್ಲ..
ಅಲ್ಲೊಬ್ಬ ಪುಗ್ಗೆ ಮಾರುವವ
ದೇಗುಲದ ಗಂಟೆಬಾರಿಸಿ ಅಡ್ಡ
ಬೀಳುತ್ತಿದ್ದಾನೆ,
ದೇವರೆ..ಇಂದಿನ ಕಲೆಕ್ಷನ
ಜೋರಾಗಿ ಆಗಲಿ, ಆಗಲೂ
ದೇವರು ಮಾತಾಡಲೆ ಇಲ್ಲ…
ದೇವಸ್ಥಾನದ ಮುಂದಿಟ್ಟ ಹೂಕಾಯಿಯ
ಮಾರಾಟಗಾರ ಮಾರಾಟಮಾಡುತ್ತ
ನನ್ನ ಗಲ್ಲಾ ಪೆಟ್ಟಿಗೆ
ತುಂಬಲೆಂದು ಗೊಣಗುತ್ತಿದ್ದಾನೆ..
ಒಳಗಿದ್ದ
ದೇವರು ಮಾತಾಡಲೆ ಇಲ್ಲ,,
ಮದುವೆಯಾದ ವಧುವೊಬ್ಬಳು
ಗೋಗರೆಯುತ್ತಿದ್ದಾಳೆ,
ಕಳೆದ ಸಲ ಫಲಕೊಟ್ಟೆ ಮತ್ತೆ
ಈಗಲಾದರೂ ಮಾತಾಡೆಂದಾಗ
ದೇವರು ಮಾತಾಡಲೆ ಇಲ್ಲ…
ಕೊನೆಗೆ ದೇವರು ಮುಗುಳ್ನಗಕ್ಕ
ನಿಮ್ಮ ಶ್ರಮದೊಳಗೆ ನಾನಿರುವೆ
ನಿಮ್ಮ ಕಾಯಕದೊಳಗೆ ನಾನಿರುವೆ
ನಿನ್ನ ಶ್ರದ್ದೆಯೊಳಗೆ ನಾನಿರುವೆ
ಎಂದಾಗ
ಎದುರಿಗಿದ್ದವರು ಮಾತಾಡಲೆ ಇಲ್ಲ…!
———–
ಶಂಕರಾನಂದ ಹೆಬ್ಬಾಳ
Super sir devarillada kade hudukuva namage devaru sikkanadaru hege super sir super