ಕಾವ್ಯ ಸಂಗಾತಿ
ಮಾರುತೇಶ್ ಮೆದಿಕಿನಾಳ
ಎಲ್ಲಿರುವೆ ದೇವರೇ?
ಎಲ್ಲಿರುವೆ ದೇವರೇ ಹೇಳು ಯಾರು ನೀನು
ನೀನು ಮಾಡುವ ಕೆಲಸವಾದರೂ ಏನು
ಇಲ್ಲಿವರೆಗೆ ಯಾರಿಗೆ ಕಂಡಿರುವೆ ಹೇಳಬಾರದೇನು
ಎಲ್ಲವೂ ಬಲ್ಲೆಯೇನು ತಿಳಿದಿರುವೆ ಏನೇನು!
ಜಗದಲ್ಲಿ ಮೊದಲು ಹುಟ್ಟಿದವರು ಯಾರೋ
ಮಾನವನೋ ದೇವರೋ ಮತ್ತಿನ್ಯಾರೋ
ದೇವರೆಂದರೆ ಯಾಕೆ ಎಲ್ಲರೂ ಹೆದರುವರೋ
ಜನಾರ್ಧನನೆಂದರೆ ಜನ ಕೈಮುಗಿದು ಬಗ್ಗುವರೋ!
ನೀ ಕಣ್ಣಿಗೆ ಕಂಡಿಲ್ಲ ನಿನ್ನ ಹುಟ್ಟಿಸಿದವರ್ಯಾರೋ
ನೂರೆಂಟು ನಾನಾತರದ ರೂಪ ಯಾರು ಕೊಟ್ಟರೋ
ಕಲ್ಲ ಕಟೆದು ಅದರೊಳಗೆ ನಿನ್ನ ಹೇಗೆ ಇಟ್ಟರೋ
ಭಯ ಭಕ್ತಿಯಿಂದ ಪೂಜಿಸುವ ಸರ್ವ ಭಕ್ತರೋ!
ನೂರೆಂಟು ಅವತಾರಗಳು ಯಾಕೇನೋ ನಿನಗೆ
ಕುಂತಿರುವೆ ಗುಡಿಚರ್ಚು ಮಂದಿರ ಮಸೀದಿಯೊಳಗೆ
ಕಾಯಿಕರ್ಪೂರ ದೀಪ ಧೂಪ ಹೊಗೆ ನಿನಗೆ
ಶರಣರು ಸಾಧು ಸಂತರು ಶರಣಾದರು ಅದು ಹೇಗೆ!?
————————————————
ಮಾರುತೇಶ್ ಮೆದಿಕಿನಾಳ