ಜೆ.ಎಲ್.ಲೀಲಾಮಹೇಶ್ವರ ಹಸಿರೇ ಉಸಿರು

ಕಾವ್ಯ ಸಂಗಾತಿ

ಜೆ.ಎಲ್.ಲೀಲಾಮಹೇಶ್ವರ

ಹಸಿರೇ ಉಸಿರು

ಧರೆಯು ಸುಂದರಗೊಳ್ಳಲು ಕಾರಣವೇ
ಪ್ರಕೃತಿಯ ಹಸಿರು.
ಜೀವಸಂಕುಲ ಬದುಕಿರಲು ಬೇಕಿದೆ
ಹಸಿರೇ ಉಸಿರು.

ಪರಿಸರವ ನಾಶ ಮಾಡಿದರೆ
ಅದುವೇ ಪಾಪ,
ಮುಂದಿದೆ ಜಗಕೆ ಆಮ್ಲಜನಕ
ಕೊರತೆಯ ಶಾಪ.

ಜಾತಿ ಧರ್ಮ, ಬೇಧ ಭಾವವ ಮರೆತು
ಬೆಳೆದು ನಿಂತಿವೆ ಗಿಡ ಮರ,
ನಿರ್ಲಕ್ಷಿಸಿ ಗಿಡ ಮರ ಕಡಿದರೆ ಕಾದಿದೆ
ಮುಂದೆ ಘನಘೋರ ಬರ.

ಸೃಷ್ಟಿಯ ವೈವಿದ್ಯತೆಗಳಲಿ ಪ್ರಕೃತಿ
ಸೊಬಗೇ ಅದ್ಭುತ,
ಗಿಡಮರ ಕಡಿದರೇ ಕಾದಿದೆ ಭುವಿಗೆ
ಸುಡುವ ಬರಡು,

ಈ ಜಲ,ಈ ಕಾಡು,ಈ ವಾಯು
ಎಲ್ಲವೂ ಪ್ರಕೃತಿಯ ವರ,
ಅರಿತು ನಿಸ್ವಾರ್ಥದಿ ರಕ್ಷಿಸದಿದ್ದರೆ
ಪರಿತಪಿಸಬೇಕಿದೆ ನರ.

—————–

ಜೆ.ಎಲ್.ಲೀಲಾಮಹೇಶ್ವರ

Leave a Reply

Back To Top