ಕಾವ್ದ ಸಂಗಾತಿ
ಉತ್ತಮ ಎ. ದೊಡ್ಮನಿ
ಚಂಚಲೆ
ಅಂತಸ್ತುಗಳೂ, ಅಂತರಂಗದ ಕದಾ ತಟ್ಟದೇ
ಬಂಧನವ ದಾಟಿ ಬರಲು ನಿಂತ್ತಿವೆ
ಪಂಜರದ ಗಿಳಿಯಂತೆ ಕಾಯುತ್ತಾ
ಆ! ವಯಸ್ಸು ಹಾಗೇನೆ
ಗೊತ್ತು-ಗುರಿ ಇಲ್ಲದೆ, ಬದುಕನ್ನು ದಾಟಿ
ಹಸಿರು ಕಂಡರೆ ಬಾಯಿ ಹಾಕುವ ಮರಿಗಳಂತೆ
ಆಕರ್ಷಣೆಗೆ ಒಳಗಾಗುವ ಮನಸುಗಳು
ಕತ್ತಲು ದೊಡ್ಡದಾಗಿ, ಕಾಡುವುದು ಕಣ್ಣಿಗೆ
ಮಲಗಿದ್ದ ಹಾಸಿಗೆ-ದಿಂಬು ಎತ್ತಿ ಬಿಸಾಕಿದಂತೆ
ಮೋಡವ ಭೇದಿಸಿ ಬರುವ ಸೂರ್ಯನ ಅಪ್ಪುಗೆಗೆ ಹಾತೊರೆಯುವ ಮೊಗ್ಗಿನಂತೆ
ಭೂಮಿಗೆ ಬಿದ್ದ ಬೀಜ, ಮೊಗ್ಗಾಗಿ, ಸಸಿಯಾಗಿ,ಮರವಾಗುವಂತೆ
ದಾಟಿ ಬಂದವರೇ ಇಲ್ಲೆಲ್ಲ,
ನಾವಿಕನಂತೆ ದಡಾ ಸೆರಬೇಕು
ಇರುವಿಕೆಗಾಗಿ, ಎಲ್ಲವೂ ಮೆಟ್ಟಿ
ಸರಿ-ತಪ್ಪು, ಪದಗಳ ಅರ್ಥ
ಹುಡುಕಲು ಸೋತ ಮನ
ನಡೆದಿದ್ದೆ ದಾರಿ,ಮಾಡಿದ್ದೆ ಸರಿ
ಎನ್ನುವ ಹೊಂಬತನ
ಎಲ್ಲವೂ, ಎಲ್ಲರಿಂದ ಬಯಸುವುದು
ಸ್ಮಶಾನ ಮೌನ
ಮನಸ್ಸು ಚಂಚಲೆ, ಹಿಡಿತಕ್ಕೆ ಸಿಗದು
ಗೊಂದಲಗಳ ಗೂಡೂ
ಉತ್ತಮ ಎ. ದೊಡ್ಮನಿ
ಅದ್ಭುತವಾದ ಕವಿತೆ