ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯ ಸಾರ್ವಬೌಮತ್ವ ಕ್ಕಾಗಿ ಅಗತ್ಯ ಕ್ರಮಕ್ಕೆ ಮನವಿ

ಕನ್ನಡ ಸಂಗಾತಿ

ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯ ಸಾರ್ವಬೌಮತ್ವ ಕ್ಕಾಗಿ ಅಗತ್ಯ ಕ್ರಮಕ್ಕೆ ಮನವಿ

ರವರಿಗೆ

ಸನ್ಮಾನ್ಯ ಸಿದ್ದರಾಮಯ್ಯ ಅವರು
ಮಾನ್ಯ ಮುಖ್ಯಮಂತ್ರಿ ಗಳು
ಕರ್ನಾಟಕ ಸರ್ಕಾರ
ಬೆಂಗಳೂರು

ಇಂದ

ಭೇರ್ಯ  ರಾಮಕುಮಾರ್
ಕನ್ನಡ ಸಾಹಿತ್ಯ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಪತ್ರಕರ್ತರು
ಕೆ. ಅರ್. ನಗರ
ಮೈಸೂರು ಜಿಲ್ಲೆ
ಮೊಬೈಲ್ :9449680583
                  63631 72368

ಮಾನ್ಯರೆ

ವಿಷಯ : ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ  ಕರ್ನಾಟಕ  ರಾಜ್ಯದಲ್ಲಿ ಕನ್ನಡ ಭಾಷೆಯ ಸಾರ್ವಬೌಮತ್ವ ಕ್ಕಾಗಿ ಅಗತ್ಯ ಕ್ರಮಕ್ಕೆ ಮನವಿ

     ನಮ್ಮ ರಾಜ್ಯಕ್ಕೆ 1974 ರಲ್ಲಿ ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದವರು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸ್ ಅವರು. ಅವರೂ ಸಹ ಮೈಸೂರು ಜಿಲ್ಲೆಗೆ  ಸೇರಿದವರು. ಇದೀಗ ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಮಹೋತ್ಸವ  ವರ್ಷ. ಈ ಶುಭಾಚರಣೆಯ ಸಂದರ್ಭದಲ್ಲೂ ಮೈಸೂರು ಜಿಲ್ಲೆಯ ನೀವು  ರಾಜ್ಯದ ಮುಖ್ಯಮಂತ್ರಿಗಳಾಗಿರುವುದು  ನಮಗೆ ಸಂತೋಷದ  ವಿಷಯ.

 ಕರ್ನಾಟಕ ರಾಜ್ಯದ  ನಾಮಕರಣದ ಸುವರ್ಣಮಹೋತ್ಸವದ ಸಂದರ್ಭದಲ್ಲಿ   ಕರ್ನಾಟಕದ ಎಲ್ಲಾ ಮೂಲೆ ಮೂಲೆಗಳಲ್ಲೂ ಕನ್ನಡ ಭಾಷೆ ಮೊಳಗಬೇಕು. ಕರ್ನಾಟಕದಲ್ಲಿ ವಾಸಿಸುವವರೆಲ್ಲರೂ ಕನ್ನ್ನಡಿಗರೇ. ಕನ್ನಡ ಅವರ ಹೃದಯದ, ಜೀವನದ ಭಾಷೆ ಆಗಬೇಕು. ಅದಕ್ಕಾಗಿ ರಾಜ್ಯ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕ್ಯೆಗೊಳ್ಳಬೇಕಿದೆ.

1)  ಕರ್ನಾಟಕದಲ್ಲಿ ಇರುವ ರೈಲ್ವೆ ನಿಲ್ದಾಣಗಳಲ್ಲಿ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಭಾಷೆ  ಕಡ್ಡಾಯವಾಗಿ ಬಳಕೆ  ಮಾಡುವಂತೆ ಕ್ರಮ ಕ್ಯೆಗೊಳ್ಳಬೇಕು.ರಾಜ್ಯದ ಒಳಗೆ ಇರುವ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕ  ಹಾಕಬೇಕು. ಅಲ್ಲಿನ ಸೂಚನಾ ಫಲಕ ಗಳಲ್ಲಿಯೂ ಕನ್ನಡ ಭಾಷೆಯ  ಸೂಚನಾ ಪತ್ರ ಹಾಕಬೇಕು.

  ಮೈಸೂರು ರೈಲ್ವೆ ನಿಲ್ದಾಣದಲ್ಲಿ ವೆಲ್ಕಮ್ ಟು ಮೈಸೂರು ಎಂಬಂತೆ ಆಂಗ್ಲ ಸೆಲ್ಫಿ ಪಾಯಿಂಟ್ ಇದೆ. ಇಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡಲಾಗಿದೆ. ಕೂಡಲೇ ಈ ನಾಮಫಲಕದ ಜೊತೆ ಮೈಸೂರು ನಗರಕ್ಕೆ ಸುಸ್ವಾಗತ ಎಂಬ ಕನ್ನಡ ಭಾಷೆಯ ಅಕ್ಷರಗಳನ್ನು ಅಳವಡಿಸುವಂತೆ  ಸೂಚಿಸಬೇಕು.

    ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕನ್ನಡ ಫಲಕಗಳ ಕೊರತೆ ಇಂದಾಗಿ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಅಲ್ಲಿ ಕನ್ನಡ ನಾಮಫಲಕ  ಹಾಗೂ ಕನ್ನಡ ಭಾಷೆಯಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುವಂತೆ ಸೂಚಿಸಬೇಕು.

2) ರಾಜ್ಯದಲ್ಲಿ ಇರುವ ಬಹುತೇಕ ಬ್ಯಾಂಕ್ ಸಿಬ್ಬಂದಿಗಳಿಗೆ ಕನ್ನಡ ಭಾಷೆಯೇ ಬರುವುದಿಲ್ಲ. ಬ್ಯಾಂಕ್ ಆಯ್ಕೆಗೆ ನಡೆಯುವ ಪರೀಕ್ಷೆಗಳು ರಾಷ್ಟ್ರೀಯ ಮಟ್ಟದಾಗಿವೆ. ಈ ಪರೀಕ್ಷೆಯಲ್ಲಿ ಆಯ್ಕೆಯಾಗುವ ಬ್ಯಾಂಕ್ ಸಿಬ್ಬಂದಿಗಳು ತಾವು ನೇಮಕಾವಾಗುವ ರಾಜ್ಯದ ಭಾಷೆಯನ್ನು   ಆರು ತಿಂಗಳಲ್ಲಿ ಕಡ್ಡಾಯವಾಗಿ ಕಲಿಯಬೇಕು ಎಂಬಂತೆ ನಿಯಮವಿದೆ. ಈ ಬಗ್ಗೆ  ಲಿಖಿತವಾಗಿ ನೀಡುವ ಬ್ಯಾಂಕ್ ಸಿಬ್ಬಂದಿ ನಂತರ ಕನ್ನಡ ಭಾಷೆ ಕಲಿಕೆ ಬಗ್ಗೆ ನಿರ್ಲಕ್ಷ ತೋರಿಸುತ್ತಾರೆ. ಇದರಿಂದಾಗಿ  ಗ್ರಾಮೀಣ ರೈತರಿಗೆ, ಮಹಿಳಾ ಸಂಘಗಳ ಮಹಿಳೆಯರಿಗೆ, ಗ್ರಾಮೀಣ ಜನರಿಗೆ ಅಪಾರ  ಸಮಸ್ಯೆ ಉಂಟಾಗುತ್ತಿದೆ. ಕನ್ನಡ ಬಾರದ ಸಿಬ್ಬಂದಿಗಳು ಒಂದು ಕಡೆ, ಕನ್ನಡ ಭಾಷೆ ಇಲ್ಲದಿರುವ ಬ್ಯಾಂಕ್  ಧಾಖಲೆ ಪತ್ರಗಳು.. ಜನರಿಗೆ ನೋವು, ಆತಂಕ  ಉಂಟು ಮಾಡುತ್ತಿವೆ. ಕರ್ನಾಟಕ ರಾಜ್ಯದ ವ್ಯಾಪ್ತಿಯ ಎಲ್ಲಾ ಬ್ಯಾಂಕ್ ಗಳ  ಸಿಬ್ಬಂದಿಗಳೂ   ಕನ್ನಡ ಕಡ್ಡಾಯವಾಗಿ ಬಳಸಬೇಕು.

3) ಕರ್ನಾಟಕ ರಾಜ್ಯದಲ್ಲಿ ಇರುವ ಬಹುತೇಕ ಗ್ರಾಮೀಣ ಶಾಲೆಗಳು ಕನ್ನಡ ಶಾಲೆಗಳಾಗಿವೆ. ಬಹುತೇಕ ಶಾಲೆಗಳು ಪ್ರಾಚೀನಾ ಕಟ್ಟಡ ಹೊಂದಿದ್ದು, ಯಾವುದೇ ಕ್ಸಣದಲ್ಲಿಯಾದರೂ ಮುರಿದುಬೀಳುವ ಹಂತದಲ್ಲಿ ಇವೆ. ಇಂತ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮಕ್ಜಳು ಆತಂಕ ದೊಡನೆಯೀ ಕಾಲ ಕಳೆಯುತ್ತಿದ್ದಾರೆ. ತಾವು ಕೂಡಲೀ ಇಂತ ಶಾಲೆಗಳ ದುರಸ್ತಿ ಅಥವಾ ಪುನರನಿರ್ಮಾಣಕ್ಕೆ ಅಗತ್ಯ ಕ್ರಮ ಕ್ಯೆಗೊಳ್ಳಬೇಕು.

4) ರಾಜ್ಯದಲ್ಲಿ  ಮಾತೃಭಾಷೆ ಕನ್ನಡ ಕಲಿತ ಯುವಜನತೆ ನಿರುದ್ಯೋಗದ ಸಮಸ್ಯೆಗೆ ಸಿಲುಕಿದ್ದಾರೆ. ಆಂಗ್ಲ ಮಾದ್ಯಮದಲ್ಲಿ ಶಿಕ್ಷಣ  ಪಡೆದ ಯುವಕರಿಗೆ ಇಂಜಿನಿಯರಿಂಗ್, ವ್ಯೆದ್ಯ,ಬ್ಯಾಂಕ್ ಅಧಿಕಾರಿಗಳ  ಆಯ್ಕೆಯಲ್ಲಿ ಅಗ್ರಸ್ಥಾನ ನೀಡಲಾಗುತ್ತಿದೆ. ಕನ್ನಡಿಗ ಯುವಜನತೆ ನಿರುದ್ಯೋಗದ ಸುಳಿಯಲ್ಲಿ ಸಿಲುಕಿದ್ದಾರೆ.ಈ ಅಂತಕದ  ಪರಿಸ್ಥಿತಿ ನಿವಾರಿಸಲು ಅಗತ್ಯ ಕ್ರಮ ಕ್ಯೆಗೊಳ್ಳಬೇಕು.

5)ರಾಜ್ಯದಿಂದ ಹೊರರಾಜ್ಯಕ್ಕೆ ತೆರಳುವ ಎಲ್ಲಾ ಅಂತರ್ರಾಜ್ಯ ಬಸ್ಸುಗಳಲ್ಲೂ ಕನ್ನಡ ಭಾಷೆ  ಬಳಸಲು ಸೂಚಿಸಬೇಕು. ಹೊರರಾಜ್ಯದ ಪ್ರಯಾಣಿಕರಿಗೆ ಬಸ್ಸುಗಳ ನಿರ್ವಾಹಕರು ಕನ್ನಡದಲ್ಲೇ ಮಾತನಾಡಿಸಬೇಕು. ಅಂತರ್ರಾಜ್ಯ ಬಸ್ಸುಗಳಲ್ಲಿ ಕನ್ನಡ ನಾಡು -ನುಡಿ  ಬಗ್ಗೆ ತಿಳಿಸುವ ಮಾಹಿತಿ ಅಳವಡಿಸಬೇಕು.

6) ಕರ್ನಾಟಕದಲ್ಲಿ ಇರುವ ಎಲ್ಲಾ ಮಾಲ್ ಗಳು, ವಾಣಿಜ್ಯ ಸಂಕೀರ್ಣಗಳು, ವ್ಯಾಪಾರಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ  ಕನ್ನಡ ಭಾಷೆ ಬಳಸಬೇಕು. ತಮ್ಮ ನಾಮಫಲಕಗಳಲ್ಲಿ, ವ್ಯಾಪಾರ ಮಾಡುವ ತಾಣಗಳಲ್ಲಿ  ಕನ್ನಡ ಭಾಷೆ ಬಳಸದ ವ್ಯಾಪಾರಿ ಸಂಸ್ಥೆಗಳ ರಹದಾರಿಯನ್ನು  ಆಯಾ ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರ ರದ್ದುಪಡಿಸಬೇಕು.

7)  ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಶಾಲಾ ಕಾಲೇಜುಗಳ ನಾಮಫಲಕ ಹಾಗೂ ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸಬೇಕು. ಇದಕ್ಕೆ ನಿರಾಕರಿಸುವ ಸಂಸ್ಥೆಗಳ ಮೇಲೆ ಸರ್ಕಾರ ಕಠಿಣ ಕ್ರಮ ಕ್ಯೆಗೊಳ್ಳಬೇಕು.

8) ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರದ ಅನುಮತಿ ಪಡೆದಿರುವ  ಎಲ್ಲ ಖಾಸಗಿ  ವ್ಯಾಪಾರ ಅಥವಾ ಉತ್ಪಾದನ ಕ್ಯೆಗಾರಿಕೆ, ಉದ್ಯಮಗಳಲ್ಲಿ ಕಡ್ಡಾಯವಾಗಿ ಕನ್ನಡಿಗರಿಗೇ ಕೆಲಸ ನೀಡಬೇಕು.ಇಲ್ಲದಿದ್ದರೆ ಅಂತಹ ಸಂಸ್ಥೆಗಳ ರಹದಾರಿಯನ್ನು ಸರ್ಕಾರ ರದ್ದುಪಡಿಸಬೇಕು.

9) ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಹಾಗೂ ಉನ್ನತ ನ್ಯಾಯಾಲಯಗಳಲ್ಲಿ ಕನ್ನಡ ಭಾಷೆಯಲ್ಲೇ   ವಕೀಲರ ವಾದಗಳು ನಡೆಯಬೇಕು. ತೀರ್ಪು ಸಹ ಕನ್ನಡ ಭಾಷೆಯಲ್ಲಿ ಇರಬೇಕು. ನ್ಯಾಯ ಪಡೆಯಲು ನ್ಯಾಯಾಲಯ ಕ್ಕೆ ಹೋಗುವ ನಾಗರಿಕರಿಗೆ ವಕೀಲರ ವಾದಗಳು, ನ್ಯಾಯಾಲಯದ ತೀರ್ಪು ಕನ್ನಡ ಭಾಷೆಯಲ್ಲಿ ಇದ್ದರೆ ಅನುಕೂಲವಾಗುತ್ತದೆ. ಈ ಬಗ್ಗೆ ನ್ಯಾಯಾಂಗದ  ವರಿಷ್ಟರ ಗಮನಕ್ಕೆ ರಾಜ್ಯ ಸರ್ಕಾರ ತರಬೇಕು.

 10 ) ರಾಜ್ಯದ  ಬಹುತೇಕ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ನಾಮಫಲಕಗಳು ಹಾಗೂ ರಸ್ತೆ ಸೂಚನಾ ಫಲಕಗಳಲ್ಲಿ  ಆಂಗ್ಲ ಹಾಗೂ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದೆ. ಎಲ್ಲಾ ಫಲಕಗಳಲ್ಲೂ ಕನ್ನಡ ಭಾಷೆಗೂ ಆದ್ಯತೆ ನೀಡಬೇಕು. ನಾಮಫಲಕಗಳಲ್ಲಿ ಮೊದಲು ಕನ್ನಡ ಭಾಷೆಗೆ ಆದ್ಯತೆ ನೀಡಿ, ನಂತರ ಆಂಗ್ಲ ಹಾಗೂ ಹಿಂದಿ ಭಾಷೆ ಬಲಸಬೇಕು. ಈ ಬಗ್ಗೆ ರಾಜ್ಯಸರ್ಕಾರ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಬೇಕು.

11):ರಾಜ್ಯದಲ್ಲಿ ಇರುವ ಇರುವ ಎಲ್ಲಾ ಹೆದ್ದಾರಿಗಳ  ಟೋಲ್ ಸಂಗ್ರಹ ಕೇಂದ್ರಗಳ ನಾಮಪಲಕ ಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಬೇಕು.ಜೊತೆಗೆ ಅಲ್ಲಿ ನೀಡಲಾಗುವ ಟೋಲ್ ರಸೀತಿ ಗಳಲ್ಲೂ ಕಡ್ಡಾಯವಾಗಿ ಕನ್ನಡ ಬಳಸ ಬೇಕು.

12) ರಾಜ್ಯದ ಎಲ್ಲಾ ಸಾರ್ವಜನಿಕ ಗ್ರಂಥಾಲಯಗಲ್ಲಿಯೂ ಕಡ್ಡಾಯವಾಗಿ  ಎಲ್ಲಾ  ಕನ್ನಡ ಲೇಖಕ ಲೇಖಕಿಯರ ಪುಸ್ತಕಗಳು  ಕಡ್ಡಾಯವಾಗಿ ಇರುವಂತೆ ಕ್ರಮ ಕ್ಯೆಗೊಳ್ಳಬೇಕು. ಎಲ್ಲಾ ಜಿಲ್ಲೆಗಳ ಮುಖ್ಯ ಗ್ರಂಥಾಲಯದಲ್ಲಿ ಆಯಾ ಜಿಲ್ಲೆಗಳ ಸಾಹಿತಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ  ಸಾಧಕರ ಬಗ್ಗೆ ವಿವರ ಸಂಗ್ರಹಿಸಿ, ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು.

13) ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮ ಆಚರಣೆಯ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ರಾಜ್ಯದ ಎಲ್ಲಾ ಹೋಬಳಿ, ತಾಲೂಕು, ಜಿಲ್ಲೆ ಗಳಲ್ಲಿ ವಿಶೇಷ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಅಗತ್ಯ ಆರ್ಥಿಕ  ಸಹಕಾರ ನೀಡಬೇಕು.

14) ರಾಜ್ಯದ ವ್ಯಾಪ್ತಿಯಲ್ಲಿ ಅಳವಡಿಸುವ ಎಲ್ಲಾ ನಾಮಫಲಕಗಳಲ್ಲಿಯೂ ಕನ್ನಡ ಭಾಷೆಯನ್ನು ಮೊದಲು ಬಳಸಬೇಕು. ನಂತರ ಯಾವುದೇ ಭಾಷೆ ಬಳಸಬಹುದು ಎಂದು ಕಡ್ಡಾಯವಾಗಿ ಸೂಚಿಸಬೇಕು.

15) ಎಲ್ಲಾ ಖಾಸಗಿ ಶಾಲೆಗಳಲ್ಲೂ ಹತ್ತನೇ ತರಗತಿವರೆಗೆ  ಕಡ್ಡಾಯವಾಗಿ ಕನ್ನಡ ಮಾಧ್ಯಮ ಅಳವಡಿಸಬೇಕು. ಕನ್ನಡ ಮಾದ್ಯಮದಲ್ಲಿ  ಹತ್ತನೇ ತರಗತಿವರೆಗೆ ಶಿಕ್ಷಣ ಪಡೆದ ಯುವಜನರಿಗೆ ಮಾತ್ರ ಸರ್ಕಾರಿ ಉದ್ಯೋಗದಲ್ಲಿ ಅವಕಾಶ ಕಲ್ಪಿಸಬೇಕು.

16) ರಾಜ್ಯದ ಚಲನಚಿತ್ರ  ಮಂದಿರಗಳು, ಮಾಲ್ ಗಳು, ಹೋಟೆಲ್ ಗಳು, ವ್ಯಾಪಾರಿ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ನೀಡುವ ರಸೀತಿಗಳು, ನೀಡುವ ವಿವರಣಾ  ಪತ್ರಗಳು  ಕಡ್ಡಾಯವಾಗಿ ಕನ್ನಡದಲ್ಲಿ ಇರುವಂತೆ ಸೂಚಿಸಬೇಕು. ಇದನ್ನು ಪಾಲಿಸದಿದ್ದರೆ ಅವುಗಳ ರಹಧಾರಿ  ರದ್ದುಪಡಿಸಬೇಕು..

17) ರಾಜ್ಯದ ಎಲ್ಲಾ ಚಿತ್ರ ಮಂದಿರಗಳಲ್ಲಿ
ಕನ್ನಡ ಭಾಷಾ ಚಲನ ಚಿತ್ರಗಳನ್ನೇ ಕಡ್ಡಾಯವಾಗಿ ಪ್ರದರ್ಶಿಸಬೇಕು.

18)  ರಾಜ್ಯದ ರಾಜಧಾನಿಯಾದ ಬೆಂಗಳೂರು  ಅನ್ಯಭಾಷಿಗಾರ ಬೀಡಾಗಿದೆ.
ಇಲ್ಲಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ,
ಪೃಮುಖ ಉದ್ಯೋಗ ಕಂಪನಿಗಳು, ರಸ್ತೆಯಲ್ಲಿನ  ಪ್ರಚಾರ ಫಲಕಗಳಲ್ಲಿ ಅನ್ಯ ಭಾಷೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಕನ್ನಡ ಭಾಷೆಗೆ ನಿರ್ಲಕ್ಷ ತೋರಲಾಗಿದೆ. ಪ್ರಮುಖ ಉದ್ಯಮಗಳಲ್ಲಿಯೂ ಸಹ ಹೊರನಾಡಿನ ಜನರಿಗೆ ಆದ್ಯತೆ ನೀಡಲಾಗಿದೆ. ಇವುಗಳನ್ನು ನೀವಾರಿಸಲು ಸೂ ಕ್ತ  ಕ್ರಮ ಅಗತ್ಯ.

19)  ರೈಲ್ವೆ ಆಯ್ಕೆ ಸಮಿತಿ, ಬ್ಯಾಂಕಿಂಗ್ ಆಯ್ಕೆ ಪರೀಕ್ಷೆಗಳಲ್ಲಿ  ರಾಜ್ಯದ ಅಭ್ಯರ್ಥಿಗಳು ಕನ್ನಡ ಮಾದ್ಯಮದಲ್ಲಿ ಪರೀಕ್ಷೆ  ಬರೆಯಲು ಅವಕಾಶ ಕಲ್ಪಿಸಬೇಕು.

20) ಕರ್ನಾಟಕ ಸುವರ್ಣ ಸಂಭ್ರಮ  ಆಚರಣೆಯ ಸಂದರ್ಭದಲ್ಲಿ ಕನ್ನಡ ನಾಡು ನುಡಿಗೆ  ಹೊನ್ನ ಕಳಸ ತಂದುಕೊಟ್ಟ ಎಂಟು ಮಂದಿ ಕನ್ನಡ ಜ್ಞಾನಪೀಠ  ಪ್ರಶಸ್ತಿ ಪುರಸ್ಕೃತ ಕವಿಗಳ ( ಕುವೆಂಪು, ದ . ರಾ. ಬೇಂದ್ರೆ, ಡಾ. ಶಿವರಾಮ ಕಾರಂತ, ಡಾ. ವಿ . ಕೃ.ಗೋಕಾಕ್, ಡಾ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಯು. ಅರ್. ಅನಂತಮೂರ್ತಿ,ಗಿರೀಶ್ ಕಾರ್ನಾಡ್,ಚಂದ್ರಶೇಖರ ಕಂಬಾರ), ರಾಷ್ಟ್ರಕವಿ ಗೌರವಕ್ಕೆ ಪಾತ್ರರಾದ ಕುವೆಂಪು, ಗೋವಿಂದ ಪೈ ಹಾಗೂ ಜಿ. ಎಸ್. ಶಿವರುದ್ರಪ್ಪ
ಇವರ ಭಾವ ಚಿತ್ರಗಳನ್ನು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಅಳವಡಿಸಲು ಸೂಕ್ತ ಕ್ರಮ ಕ್ಯೆಗೊಳ್ಳಬೇಕು.

21) ರಾಜ್ಯದ ಗಡಿ ಜಿಲ್ಲೆಗಳಾಗಿರುವ  ಬೆಳಗಾವಿ, ರಾಯಚೂರು,ವಿಜಯಪುರ, ಬಳ್ಳಾರಿ,ಯಾದಗಿರಿ,ಕಲ್ಬುರ್ಗಿ,ಕೋಲಾರ,ಚಿತ್ರದುರ್ಗ,ಉತ್ತರ ಕನ್ನಡ, ದಕ್ಷಿಣಕನ್ನಡ, ಕೊಡಗು,ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಭಾಗ, ಚಾಮರಾಜನಗರ ಗಡಿ ಭಾಗ, ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ  ತಾಲೂಕುಗಳಲ್ಲಿನ ಗಡಿ  ಗ್ರಾಮಗಳಲ್ಲಿ ಕನ್ನಡ  ನಾಡು -ನುಡಿಗಳ  ಮೇಲೆ ಅನ್ಯ ಭಾಷಿಗಾರ ಪ್ರಭಾವ, ಹಾವಳಿ ತೀವ್ರವಾಗಿದೆ. ಗಡಿ ಪ್ರದೇಶಗಳಲ್ಲಿ ಪಕ್ಕದ ರಾಜ್ಯಗಳ ಭಾಷೆ, ಸಂಸ್ಕೃತಿಗಳು ಹೇರಲ್ಪಡುತ್ತಿವೆ.ಕನ್ನಡ ಶಾಲೆಗಳು ಮಕ್ಕಳಿಲ್ಲದೇ  ಮುಚ್ಚುವ ಪರಿಸ್ಥಿತಿಗೆ ಬಂದಿವೆ. ಕನ್ನಡಿಗರ  ಭಾವನೆಗಳ ಮೇಲೆ ನಿರಂತರ ದಬ್ಬಾಳಿಕೆ ನಡೆಯುತ್ತಿದೆ. ಅಲ್ಲಿನ ಆಡಳಿತ ಹಾಗೂ ಸಂಸ್ಕೃತಿಗಳ ಮೇಲೆ ಕನ್ನಡಿಗರ ಹಿಡಿತ ಕ್ಯೆತಪ್ಪುತ್ತಿದೆ. ಇಂತಹ ಗಡಿ ಪ್ರದೇಶಗಳಲ್ಲಿ ಕನ್ನಡಿಗರಿಗೆ ಸೂಕ್ತ ಕಾನೂನು ರಕ್ಷಣೆ, ನೈತಿಕ   ಬೆಂಬಲ ನೀಡಬೇಕಿದೆ. ಕನ್ನಡ ನಾಡು, ನುಡಿ, ಕನ್ನಡಿಗರನ್ನು ಉಳಿಸಿ ಬೆಳೆಸಬೇಕಿದೆ.

22) ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡ ಪತ್ರಿಕೆಗಳನ್ನು ನಡೆಸುವುದು ಬಹಳ ಕಷ್ಟಕರ ಕೆಲಸವಾಗಿದೆ. ಅನ್ಯ ಭಾಷಿಗರು  ಕನ್ನಡ ಪತ್ರಿಕೆಗಳನ್ನು ಕೊಂಡು ಓದುವುದಿಲ್ಲ.ಕೊಂದು ಓದುವ ಕನ್ನಡಿಗರ ಸಂಖ್ಯೆ ಸಹ ಬಹಳ ಕಡಿಮೆ. ರಾಜ್ಯ ಸರ್ಕಾರ ಗಡಿಜಿಲ್ಲೆಗಳ ಪತ್ರಿಕೆಗಳಿಗೆ  ಹೆಚ್ಚು ಪ್ರಮಾಣದ ಜಾಹಿರಾತು ನೀಡಬೇಕು. ಆ ಮೂಲಕ ಕನ್ನಡ ಪತ್ರಿಕೆಗಳಿಗೆ ಧ್ವನಿ ನೀಡಬೇಕು.

23) ಕರ್ನಾಟಕ ರಾಜ್ಯದ ಸುವರ್ಣ ಮಹೋತ್ಸವದ ಸವಿ ನೆನಪಿನಲ್ಲಿ ರಾಜ್ಯಧ  ಎಲ್ಲಾ ತಾಲೂಕುಗಳಲ್ಲಿಯೂ  ಕನ್ನಡ ಭವನ ನಿರ್ಮಾಣ ಮಾಡಬೇಕು. ಈ ಕನ್ನಡ ಭವನಗಳಿಗೆ  ಆಯಾ ತಾಲೂಕಿನ ಹಿರಿಯ ಸಾಧಕ ಕವಿಗಳು ಅಥವಾ ಕಲಾವಿದರ ಹೆಸರು ನಾಮಕರಣ ಮಾಡಬೇಕು. ಆಯಾ ತಾಲೂಕಿನ ಸ್ಥಳೀಯ ಪ್ರತಿಭೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಕನ್ನಡ ಭವನಗಳನ್ನು  ಕಾರ್ಯಕ್ರಮಕ್ಕೆ ನೀಡಬೇಕು

ಮೇಲ್ಕಂಡ  ಎಲ್ಲಾ ಅಂಶಗಳನ್ನು ಪರಿಗಣಿಸಿ ಕರ್ನಾಟಕದ ಸುವರ್ಣ ಸಂಭ್ರಮದ ಆಚರಣೆಯ ಸಂದರ್ಭದಲ್ಲಿ ಕನ್ನಡ ನಾಡು -ನುಡಿಗೆ  ಸುವರ್ಣ ಖಚಿತ  ಸ್ಥಾನ ಕಲ್ಪಿಸಬೇಕೆಂದು ಕೋರುತ್ತೇನೆ

ವಂದನೆಗಳೊಡನೆ

ಇಂತಿ ತಮ್ಮ ವಿಶ್ವಾಸಿ

ಡಾ.ಭೇರ್ಯ ರಾಮಕುಮಾರ್
ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು,
ಹಿರಿಯ ಪತ್ರಕರ್ತರು

ದಿನಾಂಕ :25-10- 2023
ಸ್ಥಳ : ಮೈಸೂರು


ಡಾ.ಭೇರ್ಯ ರಾಮಕುಮಾರ್

One thought on “ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯ ಸಾರ್ವಬೌಮತ್ವ ಕ್ಕಾಗಿ ಅಗತ್ಯ ಕ್ರಮಕ್ಕೆ ಮನವಿ

  1. ಉತ್ತಮ ಸಲಹೆ ಗಳಿವೆ ಸರ್
    ಸರ್ಕಾರ ಈ ದೆಸೆಯಲ್ಲಿ ಕಾರ್ಯ ತತ್ಪರ್ಯ ವಾಗಬೇಕಿದೆ

Leave a Reply

Back To Top