ಇಮಾಮ್ ಮದ್ಗಾರ ಕವಿತೆ ಲೀಲಾವಿಗಿಲ್ಲ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಲೀಲಾವಿಗಿಲ್ಲ

ಕನಸಿನ ಮಳೆಯಲಿ
ಕಾಮನ ಬಿಲ್ಲನೇ ಸೃಷ್ಟಿಸಿ
ಕಿತ್ತಲಾರದಂತೆ ಕಣ್ಣ
ಕೀಲಿಸಿ ಬಿಟ್ಟೆ

ಮನಸಿನ ಮುನಿಸೂ
ಮಾಸುವಂತೆ..
ಮಿಸುಕುತಿದೆ ಆಸೆ
ಮೀಟುತಿದೆ ಹೃದಯ
ಮುಟ್ಟಿಬಿಡು ಕನಸನ್ನೊಮ್ಮೆ

ಜಗ್ಗದು ಬಗ್ಗದು
ಜಾದು ಮಾಡಬೇಡ
ಜಿಗಿ ಜಿಗಿದು..
ಜೀ..ಕಲೆದೆಯಲಿ ಪ್ರೀತಿ

ಲತೆಯಂತೆ ಮನಸು
ಲಾಲಿ ಹಾಡಿಬಿಡು
ಲಿಖಿತವೆನಗೆ ಬೇಕಿಲ್ಲ
ಲೀಲಾವಿಗಿಲ್ಲ ಪ್ರೀತಿ

ಹನಿಸುತಲಿ ಮಧುವ
ಹಾರೈಸಿಬಿಡು ಮನದುಂಬಿ
ಹಿಗ್ಗಲಿ ಪ್ರೀತಿ ಕುಗ್ಗದಲೇ
ಹೀರಿಬಿಡು ಆರುಮೆಯ ಪೀಯೂಷ

ತೂರಿಸಬೇಡ
ಮಾತಿನ ಚೂರಿ
ಎದೆ ಇರಿಯದೇ
ಚಿಮ್ಮಿಸ ಬೇಡ
ರಕುತದ ಝರಿ


ಇಮಾಮ್ ಮದ್ಗಾರ

Leave a Reply

Back To Top