‘ನಾನು ಮರಣ ಹೊಂದಿದ್ದರೇ…!?.ಅನುವಾದಿತ ಕವಿತೆ

ಅನುವಾದಿತ ಕವಿತೆ

ನಾನು ಮರಣ ಹೊಂದಿದ್ದರೇ…….!?.

ಮಲಯಾಳಂ ಮೂಲ: ರಾಜೇಶ್ ಕುರುವಂತಲ.

ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

ಈ ಕವಿತೆ ಓದುವ ಮುನ್ನ ಪ್ರಿಯ ಮಿತ್ರರ ಬಳಿ ಒಂದು ಮಾತು….
ಈ ಕವಿತೆ ಮಲಯಾಳಂ ಕವಿತೆಯೊಂದರ ಕನ್ನಡ ಅನುವಾದವಾಗಿದೆ… ಈ ಕವಿತೆಯನ್ನು ‘ರಾಜೇಶ್ ಕರುವಂತಲ’ ಎಂಬ ಕವಿ, ಅಕ್ಟೋಬರ್ 6 2023ರಂದು ರಚನೆ ಮಾಡಿ, ತಮ್ಮ ಫೇಸ್ ಬುಕ್ ಪುಟದಲ್ಲಿ ಸೊಗಸಾಗಿ ಹಾಡಿದ್ದರು.ಆದರೆ ಭಗವಂತನ ಕೆಟ್ಟ ದೃಷ್ಟಿಗೆ ಕೇವಲ 46 ವಯಸ್ಸಿನಲ್ಲಿಯೇ, ಮರುದಿನ ಅಕ್ಟೋಬರ್ 7ರಂದು ನಿಧನರಾಗಿ ಬಿಟ್ಟರು….! ಕವಿತೆಗಳು ಮೌನವಾಯಿತ್ತು… ! ಮರಣದ ಕುರಿತು ಕವನ ರಚನೆ ಮಾಡಿ, ಬೇಗಾನೆ ಭಗವಂತನ ಪಾದ ಸೇರಿಬಿಟ್ಟರು… ಈ ದಿವ್ಯಾತ್ಮಕ್ಕೆ ಭಗವಂತ ಸದಾ ಶಾಂತಿ ಕರುಣಿಸಲಿ ಎಂದು ನಾವು ಎಲ್ಲಾರು ಒಂದು ಕ್ಷಣ ಪ್ರಾಥಿ೯ಸೋಣ.


ಯಾರು ಎಲ್ಲಾ
ಬರಬಹುದು ನಾನು
ಮರಣ ಹೊಂದಿದ್ದರೇ……
ಕೊನೆದಾಗಿ ನನ್ನನ್ನು
ಒಮ್ಮೆ ಒಂದು ಕ್ಷಣ
‘ ಅಂತಿಮ ದಶ೯ನ’ ಮಾಡಲು…?

ಯಾರು ಎಲ್ಲಾ
ನನ್ನ ಮೃದುಲವಾದ
ನೆತ್ತಿಯಲ್ಲಿ ಅಂತಿಮ
‘ಚುಂಬನ’ ನೀಡಿ
ಮರಳಿ ಹೋಗಬಹುದು…..?

ನೆನಪಿನಲ್ಲಿ ನೋವುಯಾಗಿ
ನಾನು ಮರೆಯಾಗುವಾಗ
ಯಾರು ಎಲ್ಲಾರು
ನನ್ನನ್ನು ಮನದಲ್ಲಿ
‘ನೆನಪು’ಯಾಗಿ
ಉಳಿಸಬಹುದು…..?

ಕೊನೆದಾಗಿ ಚಳಿಗೆ ಗಾಢವಾಗಿ
ನಿದ್ರಿಸುತ್ತಿರುವ ಎಲ್ಲಾ ಮನದ
ಮೋಹ – ಅಸೆಗಳನ್ನು
ಆರು ಅಡಿ ಮಣ್ಣಿಗೆ
ಸೇರಿಸಿ ಬಿಡುವೆ
ನಾನು…!

ನೆನಪುಗಳು ಮನದಲ್ಲಿ
ತುಂಬುತ್ತಿದೆ…
ತುಟಿಗಳು ನೋವಿನಿಂದ
ದುಃಖಿಸುತ್ತಿದೆ….
ದೃಷ್ಟಿಗಳು ಮೆಲ್ಲನೆ
ಮಂಕು ವಾಗುತ್ತಿದೆ…!
ಎಲ್ಲಾವು ಒಂದು
ಕಣ್ಣೀರಿಗೆ ಮಾತ್ರ….!

ಪ್ರಿಯೆ ಸಖಿ……,
ನೀನು ಮಾತ್ರ
ನನ್ನ ಬಳಿಯೇ
ಇರಬೇಕು….
ಅಂತಿಮ ಮಣ್ಣು
ನನ್ನ ದೇಹದ ಮೇಲೆ
ಬೀಳುವ ತನಕ….!

ಇನ್ನೂ ನಿನ್ನ
ಕನಸಿನಲ್ಲಿ ಸದಾ
ನಾನು ಬರುವೆ….
ಕರೆಯದೇ ಬರುವ
ಕೆಲ ಅತಿಥಿಗಳ ರೀತಿ…!

ಪ್ರಿಯೆ ಸಖಿ…..,
ನಿನ್ನ ಕಣ್ಣೀರು
ಹನಿಗಳಿಂದ
ನನ್ನ ಮುಖವು
ಪೂಣ೯ವಾಗಿ ಒದ್ದೆಯಾಗಲಿ…!
ಒಂದೊಂದು ಮರಣವು
ಮನುಜ ಕುಲಕ್ಕೆ

ನೀತಿ ಪಾಠ ಕಲಿಸಲಿ….!!!


ಮಲಯಾಳಂ ಮೂಲ: ರಾಜೇಶ್ ಕುರುವಂತಲ.
ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ.

Leave a Reply

Back To Top