ಮುತ್ತು ಬಳ್ಳಾ ಕಮತಪುರ ಗಜಲ್

ಕಾವ್ಯ ಸಂಗಾತಿ

ಮುತ್ತು ಬಳ್ಳಾ ಕಮತಪುರ

ಗಜಲ್

ಹೂಗಳ ಬಿಡಿಸಿ ಮುಡಿಸದೆ ಬಾಡಿದಂತೆ ಈ ಬದುಕು
ಎಲೆಯ ಮೇಲಿನ ನೀರ ಹನಿ ಜಾರಿದಂತೆ ಈ ಬದುಕು

ಬೆಳೆದ ಬೆಳೆಯ ಋಣವನು ತೀರಿಸದ ದುಶ್ಯಕ್ತಿ ಲೋಕ
ಗಿಡಮರಗಳ ನೆರಳು ಮರೆತು ಸಾಗಿದಂತೆ ಈ ಬದುಕು

ಸವೆದ ದಾರಿಯಲಿ ಮುಳ್ಳಿಟ್ಟು ಸೆಣಸುತಿದೆ ಪರಪಂಚ
ಬೆರೆತು ಬಾಳಿದರೆ ಜಗವನು ಕೂಡಿದಂತೆ ಈ ಬದುಕು

ಕತ್ತಿ ಅಲಗಿನ ಮೇಲೆ ನಡುಗಿ ಹೋಯಿತು ಬಡ ಜೀವ
ಭಂಗುರ ದೇಹಕೆ ಶೃಂಗಾರ ಮಾಡಿದಂತೆ ಈ ಬದುಕು

ಕನಿಕರದ ಕರವು ಧರ್ಮದ ಪರದೆ ಮುಚ್ಚೀತು ಮುತ್ತು
ಎದೆಯ ಕದವ ಮುರಿದು ಪುರ ಕಟ್ಟಿದಂತೆ ಈ ಬದುಕು

—————————–

ಮುತ್ತು ಬಳ್ಳಾ ಕಮತಪುರ

Leave a Reply

Back To Top