ಕಾವ್ಯಯಾನ

ಗಝಲ್

ಎ.ಹೇಮಗಂಗಾ

ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ
ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ

ವಚನ ಮೀರದವ ಇಂದು ವಚನ ಮೀರಿದನೇಕೋ
ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ

ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು
ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ

ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ
ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ

ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು
ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ

********

Leave a Reply

Back To Top