ಕವಿತೆ ಕಾರ್ನರ್

ಸರಳುಗಳು

Barbed . Wires

ಸರಳುಗಳು

ನನ್ನತ್ತ ತೂರಿಬಂದ ಕಲ್ಲುಗಳನ್ನು
ಹೂ ಮಾಡಿಕೊಳ್ಳುವ ಕಲೆ ಸಿದ್ದಿಸಿರಲಿಲ್ಲ ನನಗೆ


ಹಲವು ಹಣೆಗೆ ಬಡಿದವು ಕೆಲವು ಎದೆಗೆ ಬಡಿದವು
ಒಟ್ಟಿನಲ್ಲಿ ರಕ್ತಸಿಕ್ತವಾಯಿತು ಮೈ


ತಂದು ಕೂಡಿ ಹಾಕಿದ ದವಾಖಾನೆಯೇ
ಕಾರಾಗೃಹವಾಗಿ
ಬಿಸಿಲಿಗೆ ಸರಳುಗಳು ಹೆದರಿಸುವ ಕಪ್ಪು ನೆರಳುಗಳಾಗಿ
ನನ್ನ ಹಗಲುಗಳು ನರಕಸದೃಶವಾದವು


ಇರುಳುಗಳು ಬಂದವೊ ಹೋದವೊ ಅರಿವಾಗದೆ
ಸುಮ್ಮನೇ ಕೂರುತ್ತೇನೆ ದ್ಯಾನಸ್ಥನಾಗಿ ಪದ್ಮಾಸನ ಹಾಕಿ


ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದು
ಸೆರೆಮನೆಯಂತಹ ದವಾಖಾನೆ ಬಯಲೂ ಅಗಬಹುದು


ಅಂತಹದೊಂದು ದಿನ
ನಾನು ಮತ್ತೆ ಬರುತ್ತೆನೆ ನಿನ್ನ ಕಾಣಲು
ಹಳೆಯ ಕನಸುಗಳನು ನನಸಾಗಿಸಲು
ಕಾಯುವೆಯಾದರೆ ಅಲ್ಲಿಯವರೆಗೂ
ಸಹಿಸಬಲ್ಲೆ ಸರಳುಗಳ ಹಿಂದಿನ ಯಾತನೆಗಳ ಅಷ್ಟೂ ಕ್ಷಣಗಳನ್ನು
ಹಲ್ಲು ಕಚ್ಚಿ!ನಿನಗಾಗಿ ಮಾತ್ರ—-

********

ಕು.ಸ.ಮದುಸೂದನ್

One thought on “ಕವಿತೆ ಕಾರ್ನರ್

  1. ಯಾವತ್ತಾದರೂ ಒಂದು ದಿನ ಸರಳುಗಳು ಇಲ್ಲವಾಗಬಹುದು
    ಅಂಥದೊಂದು ದಿನ…….
    ನಿಜಕ್ಕೂ ಬಂದರೆ!?!
    ಅಬ್ಬಬ್ಬಾ !!
    ಸುಂದರ ಭಾವ
    ಅತಿ ಸುಂದರ ಕವಿತೆ

Leave a Reply

Back To Top