ಬದುಕುವೆ……
ಆ ಮುಂಜಾನೆ ನನಗಿನ್ನೂ ನೆನಪಿದೆ
ಎಳೆ ಗರಿಕೆಯ ಮೇಲೆ ಕೂತ ಇಬ್ಬನಿಯಂತೆ ನೀನಿದ್ದೆ ನನ್ನೆದುರು!
ಆ ಮದ್ಯಾಹ್ನ ನನಗಿನ್ನೂ ನೆನಪಿದೆ
ಊರಾಚೆಯ ಚಿತಾಗಾರದಲ್ಲಿ ಬೇಯುತ್ತಿದ್ದ ಹೆಣದಂತೆ ನೆನಪಾಗಿದ್ದೆ ನನ್ನೊಳಗೆ!
ಆ ಸಂಜೆ ನನಗಿನ್ನೂ ನೆನಪಿದೆ
ದೂಳು ಬಿದ್ದ ಕಣ್ಣೊಳಗೆ ಬಾಣಂತಿ ಎದೆಹಾಲ ಹನಿಸಿದಂತಿದ್ದೆ ನನ್ನುಸಿರೊಳಗೆ!
ಈಗೆಲ್ಲ ಮರೆತು ಹೋಗಿದೆ
ನೀನಿದ್ದದ್ದು
ನೀ ಹೋದದ್ದು!
ನಿಜ ಬಿಡು ಸುಳ್ಳು ಹೇಳಲೂ ಮಿತಿಯಿರಬೇಕು
ಎನ್ನುವ ಮಾತೇ ಮರೆತು ಹೋಗಿದೆ——!
ನೀನಿರುವೆ ನೀನಿಲ್ಲಗಳ ನಡುವೆ
ಬದುಕಿದೆ
ಬದುಕಿರುವೆ
ಮುಂದೆಯೂ ಬದುಕವೆ!
*****
ಕು.ಸ.ಮಧುಸೂದನ್
ಉತ್ತಮವಾದ ಕವಿತೆ ಸರ್ ಅಭಿನಂದನೆ
ಬ್ಯುಟಿಫುಲ್ …
ಹೊಸತನವಿದೆ