ರಾಜೇಶ್ವರಿ ಎಸ್. ಹೆಗಡೆ ಕವಿತೆ-ಹೆಣ್ಣೆಂದರೆ..

ಕಾವ್ಯ ಸಂಗಾತಿ

ರಾಜೇಶ್ವರಿ ಎಸ್. ಹೆಗಡೆ

ಹೆಣ್ಣೆಂದರೆ..

ಹೆಣ್ಣೆಂದರೆ ಅದಿ ಅಂತ್ಯವಿಲ್ಲದ ದೇವತೆಯು
ಹೆಣ್ಣೆಂದರೆ ಸೌಂದರ್ಯವಲ್ಲದ ತಾಯಿಯು
ಹೆಣ್ಣೆಂದರೆ ಸುಲಿದುತಿನ್ನು ಹಣ್ಣಲ್ಲ ಮುನಿವ ಮಾರಿಯು
ಹೆಣ್ಣೆಂದರೆ ಮೋಹಕವಲ್ಲ ಕಥಾ ಮುನ್ನುಡಿಯು.

ಹೆಣ್ಣೆಂದರೆ ಪೂಜ್ಯಳಲ್ಲ ಮಮತಾಮಯಿಯು
ಹೆಣ್ಣೆಂದರೆ ಪ್ರಕೃತಿಯಲ್ಲ ಜಗನ್ಮಾತೆಯು
ಹೆಣ್ಣೆಂದರೆ ಜಗತ್ತನ್ನು ಆಳುವ ದೇಶ ಪ್ರೇಮಿಯು
ಹೆಣ್ಣೆಂದರೆ ಸದ್ಡಿಲ್ಲದೆ ನೋವ ನುಂಗು ಸಬಲೆಯು.

ಹೆಣ್ಣೆಂದರೆ ಬದುಕು ಬವಣೆ ಕಲಿಸು ಸ್ವಾಭಿಮಾನಿಯು
ಹೆಣ್ಣೆಂದರೆ ಅರೆ ಹೊಟ್ಟೆಯಲ್ಲೂ ನಲಿವ ನೈದಿಲೆಯು
ಹೆಣ್ಣೆಂದರೆ ಸುತ್ತೇಲ್ಲ ಸಂಭ್ರಮಿಸು ಪಾತರಗಿತ್ತಿಯು
ಹೆಣ್ಣೆಂದರೆ ಜವಾಬ್ಧಾರಿಗಾಗಿ ನಟಿಸು ಪಾತ್ರದಾರಿಯು.


ರಾಜೇಶ್ವರಿ ಎಸ್. ಹೆಗಡೆ.

Leave a Reply

Back To Top