ಡಾ ಸಾವಿತ್ರಿಕಮಲಾಪೂರ ಅವರ ಕವಿತೆ-ಬುದ್ದನೇಕೆ ?ನಕ್ಕ

ಕಾವ್ಯ ಸಂಗಾತಿ

ಡಾ ಸಾವಿತ್ರಿಕಮಲಾಪೂರ

ಬುದ್ದನೇಕೆ ?ನಕ್ಕ

ಬುದ್ದನೇಕೆ ನಕ್ಕ ?ಅಕ್ಕ
ನೂರು ನೋವುಗಳ ಲೆಕ್ಕ
ಮರೆತು ಸಾಗುವ ಜೀವ ಒಡೆಯ
ಅರಮನೆಯ ಅಕ್ಕರೆಯ ಸಿದ್ದಾರ್ಥ
ಮಗುವ ರಾಹುಲ ನ ನಾಮವು
ಅಂತಃಪುರದ ಜೈಕಾರವು
ವಾದ್ಯ ಮೇಳಗಳ
ಶ್ರವ್ಯ ಗಾಣ ಸುಧೆಯು
ಒಲವಿನ ಕುವರ
ಚೆನ್ನ ಸ್ನೇಹ ದಲಿ ಚೆಲುವ ಕಂಡಾತ
ಮುಪ್ಪು ರೋಗ ಸಾವು ಯೋಗಿಯ ನೋಡಿ ನೊಂದಾತ
ಯಶದ ಮೋಹ
ಮೋಕ್ಷದಲಿ ಗುದ್ದಾಟ
ಇರುಳುಗಳೇ ಬರುವೆ
ಇಂದು ಕೊನೆ
ಹುಡುಕಿ ಕೊಡಿ
ಆಸೆಯೇ ದುಃಖ ಮರೆಸುವ
ಯೋಗ ಪರಿ
ಸುಖದ ನಿದ್ರೆಗೆ ಇಲ್ಲ ಚಿಂತೆ
ಮೋಹ ಜಡ ಲಾಲಿತ್ಯ
ಅರಿವಿನ ಜೇನ ಹೊಳೆ
ಮುಯ್ಯದಲಿ ಮೋಹ ಮರೆಸುವ
ನಗ ನಾಣ್ಯದಲಿ ಮೈ ಪುಳಕಿಸುವ
ನಿದಿರೆ ಬಾರದ ಹೊತ್ತೆ
ಬರುವೆ ನಿಮ್ಮ ಜೊತೆ
ಅರಿವಿನ ನಗ ಹೊತ್ತು
ನಗದಿರಲು ಸಾಧ್ಯವೇ ?
ಒಳಗೊಳಗೆ ಹುಸಿ

ನಗೆಯ ಮೋಕ್ಷ ದಿ ಮೈದಡವಿ ಮರೆಯಾಯಿತು ಮಾಯ ಮೋಡಿ ..

ಡಾ ಸಾವಿತ್ರಿಕಮಲಾಪೂರ

ಡಾ ಸಾವಿತ್ರಿಕಮಲಾಪೂರ

Leave a Reply

Back To Top