ಕಸ್ತೂರಿ ಡಿ ಪತ್ತಾರ ಗಜಲ್

ಕಾವ್ಯ ಸಂಗಾತಿ

ಕಸ್ತೂರಿ ಡಿ ಪತ್ತಾರ

ಗಜಲ್

ಕಾಯುವುದನು ಉಚಿತವಾಗಿ ಕಲಿಸಿತು ಈ ಪ್ರೀತಿ
ಬೇಯುವುದನು ಅಭ್ಯಾಸ ಮಾಡಿಸಿತು ಈ ಪ್ರೀತಿ

ನನ್ನ ವಿರಹಿ ಮಾಡಿದ್ದು ಕೆಟ್ಟದ್ದಲ್ಲ ಬಿಡು ಆತ್ಮ ಶುದ್ದಿಸಿದೆ
ಕ್ಷಣ ಸುಖಕ್ಕೆ ಸಿಲುಕಿಸದ ಹಾಗೆ ಎಚ್ಚಿರಿಸಿತು ಈ ಪ್ರೀತಿ

ಕೋಗಿಲೆ ಅರಸುವುದು ಗಂಡೋ ಹಣ್ಣೋ ತಿಳಿದಿದೆಯೇ
ನಿನಗೂ ನನ್ನ ನೆನಹು ಕಾಡಿರ ಬೇಕು ಅನಿಸಿತು ಈ ಪ್ರೀತಿ

ಹಗಲೆಲ್ಲ ಜಗಮಗಿಸಿ ಮರೆಯಾಗುವ ರವಿಯಂತಾದೆ ನೀ
ಕನವರಿಸಿರಬೇಕು ನೀನೂ ನಿದಿರೆಯಲ್ಲಿ ಹೇಳಿತು ಈ ಪ್ರೀತಿ

ಕಾಲಕಾಲದಿಂದ ಪ್ರೇಮಿಗಳು ಒಂದಾದದ್ದು ವಿರಳ ಗೆಳೆಯ
“ಕಸ್ತೂರಿ “ಗೆ ಮನವರಿಕೆಯಾದದ್ದು ಒಳ್ಳೆಯದೆ ಆಯಿತು ಈ ಪ್ರೀತಿ


ಕಸ್ತೂರಿ ಡಿ ಪತ್ತಾರ.

One thought on “ಕಸ್ತೂರಿ ಡಿ ಪತ್ತಾರ ಗಜಲ್

  1. ಚಂದ ಗಜಲ್ ಮೇಡಂ. ಇಷ್ಟವಾಯಿತು. ಧನ್ಯವಾದ

Leave a Reply

Back To Top