ಇಮಾಮ್ ಮದ್ಗಾರ ಕವಿತೆ-ಮಾತನಾಡು

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಮಾತನಾಡು

ಪದಗಳ ಖಜಾನೆ
ಖಾಲಿಯಾಗಿದೆ
ಬರೆಯ ಲಾಗುತ್ತಿಲ್ಲ
ಮಾತನಾಡು
ಮೌನ ಮುರಿದು

ಭಾವನೆಗಳ ಭಂಡಾರ
ಬರಿದಾಗಿದೆ
ಹಂಚಿ ಕೊಳ್ಳಲಾಗುತ್ತಿಲ್ಲ
ಮಾತನಾಡು
ಮೌನ ಮುರಿದು

ಕಣ್ಣ ಕನಸುಗಳೂ
ಕರಗಿ ಹೋಗಿವೆ
ಕಾಣ ಲಾಗುವದಿಲ್ಲ
ಮಾತನಾಡು
ಮೌನ ಮುರಿದು

ನೆನಪುಗಳ ಬುತ್ತಿ
ಕಹಿಯಾಗಿದೆ ಮತ್ತೆ
ಸಿಹಿಯಾಗುವದಿಲ್ಲ
ಮಾತನಾಡು ಮೌನ
ಮುರಿದು

ಒಲವಿ ನೊಲೆಯ
ಝಳದ ಸ್ನಾನ..
ಕನಸಿನಂತಾಗಿದೆ
ಕಣ್ರೆಪ್ಪೆ..ಕನಸೇ
ಕಂಡಿಲ್ಲ ಮಾತನಾಡು
ಮೌನ ಮುರಿದು


ಇಮಾಮ್ ಮದ್ಗಾರ

Leave a Reply

Back To Top