ಕಾವ್ಯ ಸಂಗಾತಿ
ಡಾ ಸಾವಿತ್ರಿ ಕಮಲಾಪೂರ ಕವಿತೆ
ಮೌನವಾದ ಬುದ್ಧ
ಅವಳೆದಯ ನೋವೆಲ್ಲಾ
ಪಾಚಿಗಟ್ಟಿದೆ ಕಲ್ಲು ಬಂಡೆ
ಮೌನದಲಿ ನಿಂತ ಬುದ್ಧನಂತೆ
ಕಂಡ ದೃಶ್ಯ ಚೆನ್ನ ಒಲವ ಸ್ನೇಹ
ಮುಪ್ಪು ರೋಗ ಶವ ಸನ್ಯಾಸ
ಒಳಗೆ ಕೊರೆದ ಪ್ರಶ್ನೆಗಳಿಗೆ ಎದ್ದ
ಜಗವ ಬೆಳಗಲು ಧರೆ ಗೆದ್ದ
ಅದೆಷ್ಷು ತಗ್ಗು ದಿನ್ನೆಗಳಲಿ ಬಿದ್ದ
ಆಸೆಯೇ ದುಃಖಕ್ಕೆ ಕಾರಣವೆಂದ
ಮಡಿಲ ಕಂದನ ತೊರೆದು
ತೊಡರು ಬದುಕಿಗೆಂದು
ಮೋಹ ಮಡದಿ ದೂಡಿ
ಮಮತೆಯಲಿ ಜಗವ ನೆಚ್ಚಿದ
ಮನದ ಕರಿಯ ನೆರಳು
ವಿಷದ ಮಾತುಗಳ ಮುಳ್ಳು
ತವಕದಿ ದೇವ ಹುಡುಕುತ
ದುಃಖ ಮರೆಸಲು ಮೌನವಾದ
*****
ಡಾ ಸಾವಿತ್ರಿ ಕಮಲಾಪೂರ