ಕಾವ್ಯಸಂಗಾತಿ
ಅನಿತಾ ಶೆಟ್ಟಿ ಮೂಡುಬಿದಿರೆ-
ಪ್ರೀತಿ ನೀನೆಂದರೆ.
ಪ್ರೀತಿ ನೀನೆಂದರೆ..
ನನ್ನೊಲವಿನ ಅರಮನೆಯಲ್ಲಿ
ಸರದಾರನೇ ನೀನು
ನಿನ್ನೊಲವಿನ ಮನಪಟಲಕೆ
ಉಡಿದಾರ ನಾನು
ಕನಸೂರಿನ ಕಂಗಳಿಗೆ
ಹೊಸ ಆಸೆಯ ಚುಂಬನದಿ
ಕಾಡಿಗೆ ತೀಡಿದೆ ನೀನು
ನಿನ್ನೂರಿನ ಅಂಗಳದಿ
ನೀ ಬಯಸಿದ ಬಣ್ಣದಲಿ
ರಂಗೋಲಿ ಬಿಡಿಸಿರುವೆ ನಾನು
ಮಧುವನದ ಮನಸಿನಲಿ
ಮಗುವಾಗಿ ಮಲಗಿರುವ
ಮೋಡಿಯ ಮಾಂತ್ರಿಕ ನೀನು
ಹದವಾದ ಎದೆಯೊಳಗೆ
ಮಿದುವಾಗಿ ಕದ ತೆರೆದು
ಬೆಚ್ಚಗೆ ಒಳಗವಿತೆ ನಾನು
ಸಾವಿರ ಜನುಮಕೂ ಸಾಕು
ನಿನ್ನೆದೆಯಲ್ಲಿ ಬರೆದಿಹೆ ಸಾಲು
ನನ್ನ ಪ್ರೀತಿಯ ಪ್ರೀತಿಯೇ ನೀನು
ನಿನ್ನ ಉಸಿರಿಗೆ ಕಾವಲು ನಾನು
ಅನಿತಾ ಶೆಟ್ಟಿ ಮೂಡುಬಿದಿರೆ
ಸೊಗಸಾಗಿ ಮಡಿಬಂದಿದೆ..
ವ್ಯಾಖ್ಯೆಯಿರದ ಪದಕ್ಕೊಂದು ಸುಂದರ ವ್ಯಾಖ್ಯಾನ…..