ಕಾವ್ಯ ಸಂಗಾತಿ
ಸುಧಾ ಪಾಟೀಲ್ ಕವಿತೆ
ನಾನು ಯಾರು?
ಪರಿಧಿಯ ಮೀರದೆ
ಮನಸಿನ ಗೂಡಲಿ
ಬೆಚ್ಚಗೆ ಹುದುಗಿರುವ
ಭಾವಜೀವಿಯೆ
ಕಲ್ಮಷವಿಲ್ಲದ ಬಾಳಲಿ
ನೂರಾಸೆಗಳ ತುಂಬಿ
ಅದ ಸಾಕಾರಗೊಳಿಸುವ
ಇಚ್ಛೆಯುಳ್ಳವಳೆ
ಬೇಕುಬೇಡಗಳ ಇತಿಮಿತಿಯಲಿ
ಸಾವಧಾನವಾಗಿ
ಹೆಜ್ಜೆಯಿಡುವ ಪ್ರೀತಿಯ
ಜೀವಿಯೆ
ನಕಾರಾತ್ಮಕತೆಯನು ಇಂಚಿ0ಚಾಗಿ ಕಿತ್ತೊಗೆಯುತ್ತಾ
ಸಕಾರಾತ್ಮದೆಡೆಗೆ
ಹೆಜ್ಜೆ ಹಾಕುವ
ಉದಾತ್ತ ಜೀವವೆ
ಬೆಂಬಿಡದ ವಿಚಾರಗಳ
ಹತ್ತಿಕ್ಕಿ ಭರವಸೆಗಳ
ಬೆಳಕಾಗಿ
ಜಗಕೆ ದೀಪವಾಗಿ
ದಾರಿ ತೋರಬೇಕೆಂಬ
ನಿಲುವುಳ್ಳವಳೆ
ಆಧ್ಯಾತ್ಮದೆಡೆಗೆ
ಮುಖ ಮಾಡಿ
ಶರಣರ ತತ್ವ ಪಾಲಿಸುತ
ವಚನ ಸಾರವ ತಿಳಿಯುತ
ಬಸವಣ್ಣನ
ಅನುಯಾಯಿಯಾಗ ಹೊರಟ
ಬಸವ ಪ್ರೇಮಿಯೆ
ಸುಧಾ ಪಾಟೀಲ್
ಸುಂದರ ಆತ್ಮಾವಲೋಕನ ಕವನ ಮೇಡಂ ಉತ್ಕೃಷ್ಠ ಸಾಹಿತ್ಯ ನಿಮ್ಮದು
ಅಶೋಕ ಕುಮಾರ
Excellent poem by you Dr Sudha madam
ಕವನವನ್ನು ಮೆಚ್ಚಿ ತಮ್ಮ ಅಮೂಲ್ಯ ಪ್ರತಿಕ್ರಿಯೆ ನೀಡಿದ ಕವಿಮನಸುಗಳಿಗೆ ಧನ್ಯವಾದಗಳು