ಅನ್ನಪೂರ್ಣ ಸಕ್ರೋಜಿ ಪುಣೆ-ಅನ್ಯೋನ್ಯ ದಾಂಪತ್ಯ

ಕಾವ್ಯಸಂಗಾತಿ

ಅನ್ನಪೂರ್ಣ ಸಕ್ರೋಜಿ ಪುಣೆ

ಅನ್ಯೋನ್ಯ ದಾಂಪತ್ಯ

ಬಿಸಿಲಾಗಲಿ ಮಳೆಯಾಗಲಿ ಜೊತೆ ಜೊತೆಯಾಗಿ ಎಂದೂ
ನಾನಿಲ್ಲವೇನು ಎಂದುನೀನಂದಾಗ
ನಕ್ಕೆನಲ್ಲ ನಾನಂದು
ಬದುಕಿನಲಿ ಸುಖ ದುಃಖಗಳಲಿ ಆಸರೆಯಾಗಿ ನಿಂದೆ//

ನನಗೆ ನೀನು ನಿನಗೆನಾನು ಎನುತ
ಸಮಸ್ಯೆ ನಿವಾರಿಸುತ
ನನ್ನೊಳಗೆನೀನು ನಿನ್ನೊಳಗೆನಾನು
ಆತ್ಮವೊಂದೇ ಎನುತ
ಇಷ್ಟು ದೂರ ಪಯಣಿಸಿದ ನಮಗೆ
ಪ್ರೀತಿಯೇ ದೈವವಾಗಿದೆ//

ಯಾವ ಜನ್ಮದ ಬಾಂಧವ್ಯ ಬೆಸುಗೆ
ಬಂಧಿಸಿಹುದೊ ನಮ್ಮನು
ಹೋಳಿಗೆ ಹೆರೆತ ತುಪ್ಪದಂತೆ ನಮ್ಮ
ಅನ್ಯೋನ್ಯ ದಾಂಪತ್ಯ
ವಡಾಪಾವದಂತೆಹಾಲುಜೇನಿನಂತೆ
ಒಂದಾಗಿವೆ ಜೀವ//

ಇಳಿಸಂಜೆಇಳಿವಯಸಾಗಿದೆಯೆಂದು
ಅಳುತಳುತ ಕೂಡದೇ
ಇಳೆಯೊಳು ಬೇಕಾಗುತ ಬೆಳಕಿನ
ಪಥದಿ ಮುನ್ನಡೆಯೋಣ
ಪ್ರಜ್ವಲಿಸುವದಾರಿದೀಪವಾಗೋಣ
ಆದರ್ಶವಾಗೋಣ//

ಮನದ ಶೃಂಗಾರ ಭಾವನೆಗಳಲಿ
ಬಂಗಾರ ಬೇಡಾ
ಬಂಗಾರದಂಥ ಸದ್ಗುಣವಿರುತಿರಲಿ
ಸಿಂಗಾರ ಬೇಡಾ
ಹಣೆಗೆ ನಿನ್ನಕುಂಕುಮವೇಸಿಂಗಾರ
ನೀನಿದ್ದರೆ ಬೇರೇನೂ ಬೇಡಾ//

ನಿತ್ಯ ನೂತನ ಭಾವಬಂಧಗಳಲಿ
ಬರೆದ ಈ ಕವನ
ಬಾಳಪಯಣದ ಉತ್ಸಾಹ ಜೀವನ
ನಿತ್ಯ ಹೊಸ ಸಂಚಲನ
ತುಂಬಿ ತುಳುಕುತಿದೆ ಸತ್ಯ ಚೇತನ
ಅಧ್ಯಾತ್ಮ ಸಿಂಚನ//


ಅನ್ನಪೂರ್ಣ ಸಕ್ರೋಜಿ ಪುಣೆ

Leave a Reply

Back To Top