ಕಾವ್ಯ ಸಂಗಾತಿ
ಡಾ.ಸುರೇಶ ನೆಗಳಗುಳಿ
ಗಜಲ್
ಸುಹಾಸ ಕಡಲತಡಿ ಭಾರ್ಗವನ ನೆಲೆಯು
ಹಸನ ಮುಖಿ ಕಾರಂತರ ನೆಲೆಯು
ಹಲವು ಕಡೆ ಕರ ಚಾಚುವ ತಾಕತ್ತು ಸುಲಭವೇ
ಸಕಲ ಸಾಹಿತ್ಯ ಪ್ರಕಾರದಲಿ ಇವರ ನೆಲೆಯು
ನೇರ ನುಡಿ ದಿಟ್ಟ ಪದ ಸರ್ವ ಸೋದರ ಭಾವ
ಕಡ್ಡಿ ತುಂಡಾದಂತೆ ವರಸೆ ಹೊತ್ತವರ ನೆಲೆಯು
ಬೇಸರವೆ ಬರದಂಥ ಮಾತು ಬರಹಗಳಂದ
ಸಕಲಜನರನುರಾಗಿಯಾದವರ ನೆಲೆಯು
ಬಾಲವನದಲಿ ಬಾಲ ಮುತ್ಸದ್ದಿಗಳ ರಾಜ ಸುರೇಶ
ಸಕಲಕಲೆಗಳ ಒಡೆಯರಾದವರ ನೆಲೆಯು
ಡಾ ಸುರೇಶ ನೆಗಳಗುಳಿ
ಭಾರ್ಗವರ ಎಂದು ಮೊದಲ ಸಾಲಲ್ಲಿ ತಿದ್ದಿ ಓದಿ