ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ ಕವಿತೆ-
ಸಂಚು
ಹೇಳಬಾರದನುಹೇಳಿದ ಆ ನಿನ್ನ ಸಂಚು
ಎಡೆಬಿಡದೆ ನನ್ನನ್ನು ಕಾಡಿತು
ಹೂದೋಟದ ಸಂಧಿಯಲ್ಲಿ ನವಿಲೊಂದು ಹಾದಂತೆ
ನಿನ್ನ ಸಂಚು ಸತ್ಯವನು ರೂಪಿಸಿತು
ದುಡಿದುಡಿದು ಬೇಸತ್ತು ಬಳಲಿ ಬೆಂಡಾದ ಈ ದೇಹ
ರಕ್ತವನು ಕುದಿಸಿ ಬೆವರನ್ನು ಹರಿಸಿತ್ತು
ಉಸಿರನ್ನು ಬಿಗಿಹಿಡಿದು ಶಕ್ತಿಯನ್ನು ಕುಂದಿಸಿ
ನಂಬಿಕೆಯನು ಉಳಿಸಿ ದುಡಿದಿತ್ತು
ಇಂಬು ಕೊಟ್ಟವನು ನಂಬಿಬಿಟ್ಟನು
ನಾ ಹೇಗೆ ಮರಳಲಿ ಗುಡಿಸಲಿಗೆ
ಬೆಳದಿಂಗಳ ಬೆಳಕನ್ನು ನಾ ಹೇಗೆ ಸವಿಯಲಿ
ನನ್ನಾಕಿ ನನ್ನ ಮಕ್ಕಳ ಜೊತೆಯಲ್ಲಿ
ಹೊತ್ತ ಹೊರೆಯಲ್ಲ ಅಂದು ಭಾರವಾಗಿರಲಿಲ್ಲ
ನಂಬಿಕೆ ಕಳಚಿ ಇಂದು ಭಾರವಾಯಿತಲ್ಲ
ಬೆವರನ್ನು ಹರಿಸಿ ಹೂದೋಟ ಕಂಡಿದ್ದೆ
ಮೊಗ್ಗು ಮೂಡುವ ಮೊದಲೇ ಕೊಂಡಿ ಕಳಚಿತಲ್ಲ.
ಮನ್ಸೂರ್ ಮುಲ್ಕಿ