ಕಾವ್ಯಸಂಗಾತಿ
ಮಂಜುಳಾ ಪ್ರಸಾದ್ ದಾವಣಗೆರೆ
“ಒಡೆದ ಮನೆಯ ಕಥೆ,
ನಾಳೆ ನಮ್ಮದೂ ಅದೇ ವ್ಯಥೆ”
ಜೋಡಿಸಿ ಕಟ್ಟಿದ ಇಟ್ಟಿಗೆಯ ಗೋಡೆ ಕುಸಿಯುತ್ತಿದೆ,
ಜೆಸಿಬಿಯ ಹೊಡೆತ ತಾಳಲಾಗದೆ.
ಮನೆಯೊಂದು ನೆಲಸಮವಾಗುತ್ತಿದೆ,
ಅರಿತು ಬೆರೆತು ಕಲ್ಲು ಮಣ್ಣು ಕಾಂಕ್ರೀಟ್ ಗಳ ಸಮಾಗಮದಿ ಹೊಸದೊಂದು ರೂಪ ಪಡೆದ
ಮನೆಯ ಚಿತ್ತಾರದ ಚಿತ್ರವಳಿಸಿ,ಮನವ ಕಲುಕಿದೆ.
ತರಗಾರನಿಗೆ ವರುಷ ಜೆಸಿಬಿಗೆ ನಿಮಿಷ,
ಆಸೆ ಆಮಿಷಗಳ ಲೋಕದಲ್ಲಿ ,ಕಷ್ಟ ಕಾರ್ಪಣ್ಯಗಳಿಗೆ ತಲೆಬಾಗದೆ,
ಉರುಳಿತು ಮನೆ,ಕಮರಿತು ಮನ.
ಹಿಂದೆ ಕಟ್ಟಿದ ಮನೆ ಈಗ ಬೇಡ,ಸೊಗಸು ಹೋಯಿತು,ಹಳೆಯದಾಯಿತು
ಮನುಜ ಮನ ಬಯಸುತ್ತಿದೆ ನಾವೀನ್ಯ.
ಹೇ ಹುಲು ಮಾನವ!ನಿನ್ನ ಕಥೆಯೂ ಇದುವೇ..
ಇಂದು ನಿನ್ನ ದಿನವಾದರೆ,ನಾಳೆಯೂ ನಿನ್ನದೇ ಎಂದೆಣಿಸದಿರು! ಪ್ರಕೃತಿಯೂ ಬಯಸುತ್ತಿದೆ ಹೊಸತನ!!ಅದರ ಪಾಡಿಗೆ ಅದರ ನರ್ತನ!!
ನಾವೋ, ಜೆಸಿಬಿಯ ಚಕ್ರದಡಿ ಸಿಲುಕಿಹ ಅವಶೇಷ!ನಾಳೆಯ ದಿನ ನಮ್ಮದಾಗಿಲ್ಲ,
ಪ್ರಕೃತಿಯ ಕೈಯಲ್ಲಿ ಎಲ್ಲವೂ ಇರುವುದಲ್ಲ!!
ಹೇ ಮನುಜ….. ಒಳಿತು ಮಾಡೋಣ ಕೆಡುಕ ಮರೆತು,
ಇರುವಷ್ಟು ದಿನ ನೆಮ್ಮದಿಯಾಗಿರೋಣ,
ಒದ್ದು ಜಾಡಿಸಿ,ಬೀಳಿಸುವುದ ಮರೆತು,
ಎಬ್ಬಿಸಿ, ನಿಲ್ಲಿಸಿ ಒಟ್ಟಾಗಿರೋದು ಕಲಿಯೋಣ!
ಯಾಕೆಂದರೆ ನಾಳೆ ನಮ್ಮದೂ ಒಡೆದ ಮನೆಯ ಕಥೆ!!
ಮಂಜುಳಾ ಪ್ರಸಾದ್ ದಾವಣಗೆರೆ
Nice
Thank you
Very nice thought
Thank you
Wonderful writing