ಕಾವ್ಯಸಂಗಾತಿ
ಯಶೋದ ಪಿ ರಾವ್-
ಆಸೆ
ವಕೀಲನಾಗುವ ಆಸೆ ಮನೆಯೊಳಗೆ ತರ್ಕ ಮಾಡಿ ಕಳೆಯಿತು
ದರ್ಜಿಯಾಗಬೇಕೆಂಬ ಆಸೆ ಹರಿದ ಬಟ್ಟೆ ಹೊಲಿದೇ ಕಮರಿತು
ಬಾಣಸಿಗನಾಗುವ ಆಸೆ, ತರಕಾರಿ ಹೆಚ್ಚುವಲ್ಲೇ ನಿಂತಿತು
ವೈದ್ಯನಾಗುವ ಆಸೆ ಗುಳಿಗೆ ನುಂಗಿ ನುಂಗಿ , ನುಂಗಿತು
ಇಂಜಿನಿಯರ್ ಆಗುವ ಆಸೆ ನಕ್ಷೆಗೇ ಸೀಮಿತಗೊಂಡಿತು
ನಾಯಕನಾಗಬೇಕೆಂಬ ಆಸೆ ಸಮಾಜಸೇವಕನೆಂದೆನಿಸಿತು
ಮೇಷ್ಟ್ರಾಗಬೇಕೆಂಬ ಆಸೆ ಕಲಿಸಿ ಮಿಕ್ಕೆಲ್ಲವೂ ಫಲಿಸಿದಂತಾಯ್ತು
ಯಶೋದ ಪಿ ರಾವ್