ಕಾವ್ಯ ಸಂಗಾತಿ
ಸವಿತಾ ಮುದ್ಗಲ್
ಇಬ್ಬನಿ
ಇಬ್ಬನಿ ತಬ್ಬಿಕೊಂಡು ಮಲಗಿರಲು ಇಳೆ
ಅರುಣೋದಯ ಕಂಡರು ಕರಗದಂತೆ
ನಾಚಿಕೆಯಿಂದ ನೀರಾಗಲು ಭುವಿಯು
ಹಸಿರಿನ ಮೇಲೆ ಮುತ್ತೊಂದು ಬಿದ್ದಂತೆ
ಚಿಗುರಲೆ ಮೇಲೆ ಹೊಳೆಯುವ ಮುತ್ತಂತೆ
ಮುಟ್ಟಲು ಹೋದರೆ ಕೈಗೆ ಎಟಕುವುದೇ
ಕಣ್ಣಿಗೆ ಕಾಣುವ ಈ ಸುಂದರ ಹನಿಗಳು
ಬಹಳ ಕಾಲ ಹಾಗೆಯೇ ಉಳಿಯುವುದೇ
ಇಬ್ಬನಿಯು ಬಿದ್ದಿರಲು ಪರಿಸರದಿ ಇಂದು
ತಬ್ಬಿಬ್ಬಾಗಿ ನೋಡುತ ನಿಂತಿರಲು ಮುಂದು
ಸಾಲುಸಾಲಾಗಿ ಬರುತ್ತಿರಲು ಕಾರ್ಮೋಡವಿಂದು
ಆರ್ಭಟವು ಕೇಳುತಿದೆ ದೂರದಿಂದ ಸಿಡಿಲೊಂದು
ಬಾನು ಭುವಿಗೆ ಸಂಪರ್ಕ ಕಲ್ಪಿಸಿದಂತೆ
ಸುರಿಯುವ ಮಳೆಯೂ ಭುವಿಯ ತಣಿಸಿದಂತೆ
ಎಲ್ಲೋ ಸುರಿದ ಮಳೆ ಹನಿಯು ಹೊಳೆಯಾದಂತೆ
ಸಿಗುವ ದಾರಿಯ ಹಿಡಿದು ನದಿಯಾಗಿ ಹರಿದಂತೆ
ಸವಿತಾ ಮುದ್ಗಲ್
ಕವಿತೆಯನ್ನು ಪ್ರಕಟಿಸಿದ ಸಂಪಾದಕರಿಗೆ ಮತ್ತು ಪತ್ರಿಕೆ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು
ಚೆಂದ ಕವಿತೆ.
ಕುವೆಂಪು ಸಹ ಇಬ್ಬನಿ ಎಂಬ ಕವಿತೆ ಬರೆದಿದ್ದಾರೆ . ಗಮನಿಸಿ.
ತುಂಬಾ ಚೆನ್ನಾಗಿದೆ ಮೇಡಂ. ಶರಣಗೌಡ ಮಸ್ಕಿ.