ಕಾವ್ಯ ಸಂಗಾತಿ
ಅಕ್ಕಮಹಾದೇವಿ ತೆಗ್ಗಿ
ಅನುರಾಗ ಅರಳಿತು
ಅನುರಾಗ ಅರಳಿಆನಂದ ಮೂಡಿ
ಹೂಗಳು ಬನದಲ್ಲಿ ಅರಳಿದವು
ಚಲುವೆಯ ಕೈ ಮಾಡಿ ಕರೆದವು
ಅಣು ಅಣುಗಳಲ್ಲಿ ರಾಗ ಸುಧೆ ಹರಡಲು
ಎಲ್ಲೆಲ್ಲೂ ಸಂಗೀತಮಯ
ಬಾಳೆಲ್ಲ ಆನಂದ ಮಯ…
ಪೃಕೃತಿಯ ವೈಭವದಲಿ
ಅನುರಕ್ತರಾಗಿ ಮೈಮರೆತು
ಸಂತೋಷ ಸಾಗರದಲಿ ತೇಲಿದರು
ಜನುಮ ಜನುಮಕೆ
ಈ ಅನುರಾಗ ಸೂಸಲಿ
ಕನಸು ಕಾಣುತಲಿ ಸಂತೋಷದಲಿ
ಆನಂದಭಾಷ್ಪ ಬರುತಲಿ.
ಸಂಗಾತಿಯೊಂದಿಗೆ ಬದುಕಲಿ
ಅನುರಾಗ ಅನುಬಂಧ
ನಮ್ಮದಾಗಲಿ.
ಅದು ಎಂದೆಂದಿಗೂ ಚಿರಾಯುವಾಗಲಿ..
ಅಕ್ಕಮಹಾದೇವಿ ತೆಗ್ಗಿ
ಸೊಗಸಾಗಿದೆ ಕವನ ಮೇಡಂ
ತುಂಬ ಚನ್ನಾಗಿ ಮೂಡಿ ಬಂದಿದೆ.