ಇಂದಿರಾ ಮೋಟೆಬೆನ್ನೂರ-ಅನುಬಂಧ

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ-

ಅನುಬಂಧ

ಬಾನು ಭುವಿಯ
ಬೆಸೆಯಿತಿಂದು
ಬಣ್ಣದ ಮಳೆ ಬಿಲ್ಲೊಂದು…

ಮೋಡ ತೆರೆಯ ಸರಿಸಿ
ಮೊಗವ ತೋರಿನಿಂದ
ಚಂದಿರನಿಂದು….

ಕರಿಯು ಕರಗಿ
ಹೊನಲು ಹರಿದು
ಎದೆಗೂಡ ಬೆಳಗಿತಿಂದು…

ದೂರ ಬಾನು ಬಾಗಿ
ತಾನು ಭುವಿಯ ಸವಿಯ
ಕಾಣಲೆಂದು…

ಕಪ್ಪು ಕರಗಿ ಮೌನ
ಚಿಪ್ಪು ಬಿರಿಯೆ
ಹರುಷ ಹೊಮ್ಮಿತಿಂದು….

ಮುಗಿಲು ನಲಿಯೆ
ನೆಲದ ಚಿಗುರು
ಉಸಿರು ಪಡೆಯಿತಿಂದು…


ಇಂದಿರಾ ಮೋಟೆಬೆನ್ನೂರ.

Leave a Reply

Back To Top