ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ
ಹೀಗೊಂದು ಆಸೆ
ಸಾಗರದಾಳದಲ್ಲಿ ಕಳೆದು ಹೋಗುವಾಸೆ
ಅಲೆಗಳ ಮೊರೆತಗಳಿಗೆ ದನಿಯಾಗುವಾಸೆ
ಉಬ್ಬರವಿಳಿತಗಳ
ಉಛ್ವಾಸ ನಿಷ್ವಾಸಗಳಿಗೆ
ಉಸಿರಾಗುವ ಪರಿ ಭಾಷೆ
ಸಪ್ತ ಸಾಗರದ ಮಧ್ಯದಿಂದೆದ್ದ
ಬಿರುಗಾಳಿಯ ದುರುಳಾಟಕ್ಕೆ
ನರಳಾಟಕ್ಕೆ ನಲುಗಿದವರ
ದಡ ಸೇರಿಸುವ ದಾಹ
ಅಲೆಗಳೇ ಮುನ್ನುಗ್ಗಿ
ಮುತ್ತಿಕ್ಕಿ
ಮುಕ್ತಿ ಕಾಣಿಸುವ
ಸತ್ಯ ದರ್ಶನ!
ಹುಟ್ಟಿಂದ ಶುರುವಾದ
ಹೋರಾಟ
ತಳ್ಳಾಟ
ನೂಕಾಟಗಳಿಂದ
ಬಂಡೆಯಾಗುವ ಬಂಧ
ಉಪ ಸಂಹಾರ
——–
“ಯಾರಿಗೆ ಯಾರುಂಟು
ಎರವಿನ ಸಂಸಾರ “!!
ಹೀಗೇ
ಒಂದು ಹಳೇ ಗಾದೆ ನೆನಪು
“ಅತಿಯಾಸೆ ಗತಿಗೇಡು “
ಡಾ ಡೋ.ನಾ.ವೆಂಕಟೇಶ
Suuperr
Thanq Sona
ಬಹಳ ಸುಂದರವಾಗಿ ಸಂಯೋಜಿಸಿದ ನಿಮ್ಮ ಈ
ಗೀತೆ ಅರ್ಥಪೂರ್ಣವಾಗಿದೆ ವೆಂಕಣ್ಣನವರೆ.
Thanq very much Manjanna!
ಜೀವನ ಚರಿತ್ರೆಯ ಉತ್ತಮ ಕವನ
ಡಾ. ಸೂರ್ಯ ಕುಮಾರ್
ಧನ್ಯವಾದಗಳು ಸರ್
ಧನ್ಯವಾದಗಳು!!