ಕಾವ್ಯಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಕವನವಾಯಿತು”
ಸಿಹಿ ಕೊಳದ
ತಿಳಿ ಗಾಳಿ
ಮನದಲ್ಲಿ ತಲ್ಲಣ
ಭಾವದಲ್ಲಿ ಗುಡುಗು
ಸ್ನೇಹದೊಲುಮೆಯ
ಮೋಡ ಮೇಲೆ ಕವಿದು
ಮುಗುಳುನಗೆಯ
ಮಿಂಚಿನಲಿ
ಹುಯ್ಯೆಂದು ಹೊಡೆಯುತ್ತಿದೆ
ಪ್ರೀತಿ ಮಳೆಯು
ಕಳವಳದ ಕೊಚ್ಚೆ
ಕಿತ್ತು ಹೋಯಿತು ಕೊಸರಿ
ಸ್ವಚಂದದ ತಂಪು
ನೆಲದ ಕಂಪು
ನೆಲ ಮುಗಿಲು
ಮಧ್ಯದಲ್ಲಿ
ಎಳೆಯ ಮಳೆ ಹನಿಯು
ಕವನವಾಯಿತು ಪ್ರೇಮ
ಎದೆಯ ಗೂಡು
ಡಾ ಶಶಿಕಾಂತ ಪಟ್ಟಣ ರಾಮದುರ್ಗ
Very nice poem
Geeta
ಮುಗುಳ್ನಗೆಯ ಮಿಂಚಿನಲಿ
ಎಲ್ಲವನೂ ಮೀರಿ
ಪ್ರೇಮ ಕವನವಾಯಿತು
ಎನ್ನುವ ಕವನದ ಸಾರ ಬಹಳ ಚೆನ್ನಾಗಿ ಮೂಡಿ ಬಂದಿದೆ
ಸುಶಿ ( ಸುಧಾ ಶಿವಾನಂದ )
ಸುಂದರ ಕವನ ಸರ್
ಲಕ್ಷ್ಮಿ ಗದಗ
ಏಷ್ಟು ಸುಂದರ ಸರಳ ಭಾವ.ಮೋಡ ಮಳೆ ನಗೆ ಪ್ರೀತಿ ಕವನವಾಯಿತು ವಾವ್
ಡಾ ವೀಣಾ ಹೂಗಾರ
ಅತ್ಯಂತ ಅದ್ಭುತ ಭಾವ ಸುಂದರ ಕವನ ಸರ್
ಜಯಶ್ರೀ ಪಾಟೀಲ ಧಾರವಾಡ
ಅರ್ಥಪೂರ್ಣ ಕವನ ಕಾವ್ಯದ ಹುಟ್ಟು ಉಗಮ ಮಳೆ ನೀರು ಕೊಯ್ಲು ಹಸಿರು ಬೆಳೆಯುವ ಪೈರು ಕವಿಯೊಬ್ಬ ರೈತ
ಡಾ ಶರಣಮ್ಮ ಗೋರೆ ಬಾಳ
ಉತ್ತಮ ಕಾವ್ಯ ಶೈಲಿ ಕಲ್ಪನೆ ಸೃಷ್ಟಿಯ ಬದಲಾವಣೆ ಮನದ ಭಾವಗಳ ಗೊಂಚಲು ಒಂದು ಸುಂದರ ಕವನ ಸರ್
ವಿಜಯ ಗೌಡ ಮುಂಬೈ