ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ಕಾಮವೆಂಬ ಕೂಪದಿ ಜೀವವು ಮೋಹದಲಿ
ಹೊರಳಿತಲ್ಲ
ಭ್ರಮೆಯಲಿ ತೇಲುತ ನರಕಕೆ ಏಕಾಂಗಿಯಾಗಿ
ತೆರಳಿತಲ್ಲ

ಭ್ರಮರದಂತೆ ಅಲೆದು ತೃಷೆಯ ಅರಸುತ
ನಿಂತಿತೇಕೆ
ಕಮನೀಯ ಸುಮದಂತೆ ನಲ್ಲೆಯಲಿ ಪ್ರೇಮವು
ಅರಳಿತಲ್ಲ

ಸಮವಿರದ ಒಲವಯಾನ ಕೊನೆಯಲಿ ನಿನಗೆ
ಸಿಕ್ಕಿದ್ದೇನು
ತಮದಲಿ ಸಿಲುಕಿದ ತನುವಿದು ನರಕದೊಳು
ನರಳಿತಲ್ಲ

ಕ್ರಮಕ್ರಮದಿ ಅಂತಕನ ಲೋಕದ ಸೋಪಾನ
ಏರಿದೆಯಲ್ಲ
ಅಮಲೇರಿದ ಗಜದಂತೆ ಉನ್ಮತ್ತ ಆತ್ಮವಿದು
ಉರುಳಿತಲ್ಲ

ಜಮೆಯಾಗದ ಪುಣ್ಯವ ಬಯಸೀತು ಅಭಿನವನ
ಕವಿತೆ
ಶಮನವಾಗದ ವೈಚಿತ್ರ ಮರುಜನ್ಮದ ಜೊತೆಗೆ
ಮರಳಿತಲ್ಲ


ಶಂಕರಾನಂದ ಹೆಬ್ಬಾಳ

Leave a Reply

Back To Top