ಪುಸ್ತಕ ಸಂಗಾತಿ
ಗೋಪಾಲಕೃಷ್ಣಭಟ್ ಮನವಳಿಕೆ
“ನಂದಿಗೇಶನ ಮುಕ್ತಕಗಳು”
ವಿಮಲಾರುಣ ಪಡ್ಡoಬೈಲ್
ಕನ್ನಡ ಸಾಹಿತ್ಯ ಲೋಕಕೆ ಹೊಸದಾಗಿ ಪಾದಾರ್ಪಣೆ ಮಾಡಿದ”ನಂದಿಗೇಶನ ಮುಕ್ತಗಳು” ಇತೀಚಿಗೆ ನಾನು ಓದಿದ ವಿಶಿಷ್ಟವಾದ ಹೊತ್ತಗೆ.ಇದರ ಕೃತಿಕಾರರಾದ ಗೋಪಾಲಕೃಷ್ಣ ಭಟ್ ಮನವಳಿಕೆ ಕೃಷಿಕರು, ಕವಿಗಳು ಆಗಿರುವ ಇವರ ಬರಹ ಬಹಳ ಉತ್ತಮವಾಗಿದೆ.
“ನಂದಿಗೇಶನ ಮುಕ್ತಕಗಳು”ಈ ಕೃತಿಯಲ್ಲಿ 500 ಮುಕ್ತಕಗಳು ಇದ್ದು. ಸಹೃದಯ ಓದುಗರಿಗೆ ಕೈಗೆಟಕ್ಕುವಂತೆ ನೀಡಿದೆ. ಹಾಗೆ ನನ್ನ ಮನಸ್ಸನ್ನು ತಣಿಸಿ, ಬದುಕಿಗೆ ಮಾದರಿಯಾಗಿದೆ. ಮುಕ್ತಕದ ಬಗ್ಗೆ ಹೆಚ್ಚಿನ ಅರಿವಿರಲಿಲ್ಲ. ಆದರೆ ಈ ಕೃತಿ ಇರುಳಿನಲಿ ಪ್ರಜ್ವಲಿಸುವ ಜ್ಯೋತಿಯಂತೆ ಜ್ಞಾನದ ಹೊಳಹುಗೆ ಸ್ಫೂರ್ತಿಯಾಗಿದೆ.
ಈ ಕಿರಿದಾದ ನಾಲ್ಕು ಸಾಲುಗಳಲ್ಲಿ ಹಿರಿದಾದ ಅರ್ಥಗಳು ಬದುಕಿಗೆ ಯೋಗ್ಯ ಸಂದೇಶವನ್ನು ನೀಡುತ್ತದೆ.ಇದನ್ನು ರಚಿಸಲು ಅಪಾರವಾದ ಜ್ಞಾನದ ಅರಿವಿರಬೇಕು ಎಂಬುದು ಓದಿನಿಂದ ಅರಿವಾಗುತ್ತದೆ.ಮುತ್ತಿನಂತಹ ಸಾಲುಗಳು ವಿಶಾಲ ಅರ್ಥವನ್ನು ನೀಡುವ ಈ ಮುಕ್ತಗಳು ಓದುಗನಿಗೆ ನಿರಾಶೆ ಮೂಡಿಸುವುದಿಲ್ಲ. ಓದಿಸಿಕೊಂಡು ಹೋಗುತ್ತದೆ.
ಬಿಸಿಯಾದ ಕಬ್ಬಿಣವು ಬಾಗುವುದು ಸರಿಯಾಗಿ
ಹಸಿ ಮಣ್ಣು ಪಡೆಯುವುದು ಬೇಕಾದ ರೂಪ
ಕಸವಾಗಿ ಕಳೆಯದಿರು ಜೀವನದ ದಿನಗಳನು
ವಶವಾಗು ದೇವನಿಗೆ ನಂದಿಗೇಶ
ಈ ಮುಕ್ತಕವು ಎಳೆವೆಯಲಿ ಮುಗ್ದ ಮನಸಿಗೆ ಸಕಾರಾತ್ಮಕ ರೂಪ ಕೊಟ್ಟು ಸನ್ನಡತೆಯಿಂದ ಬದುಕಿ ನಿನ್ನ ಆದರ್ಶ ಗುರಿಗೆ ರೂಪವನ್ನು ಕೊಟ್ಟು ಸಮಯ ವ್ಯಯಿಸದಂತೆ ಸತ್ಕಾರ್ಯದಲ್ಲಿ ತೊಡಗಲು ಲೇಖಕರು ತಮ್ಮ ಅಭಿಪ್ರಾಯವನ್ನು ನಮ್ಮ ಮುಂದಿಟ್ಟಿದ್ದಾರೆ.
ಹಾಗೆಯೇ ದೀನರಲಿ ದೇವರನ್ನು ಕಂಡು ದಾನದಲ್ಲಿ ಸಂತೃಪ್ತಿ ಕಾಣುವುದರರೊಂದಿಗೆ ಹಿರಿಯರಿಗೆ ಗೌರವಿಸಬೇಕೆಂದು,ಸುಂದರವಾದ ಪರಿಸರದ ಬಗ್ಗೆ, “ಪರಿಪೂರ್ಣರಾರಿಹರು ಬಹಳವಿದೆ ಕಲಿಯುವುದು” ಎಂದು ಅರಿವು ಮೂಡಿಸುವ ಕಾರ್ಯವನ್ನು, ಮುಕ್ತಕದ ಮುತ್ತುಗಳು ತಿಳಿಯಪಡಿಸುತ್ತದೆ.
ಕೀಟಗಳು, ಹಕ್ಕಿಗಳು, ಗೆಳೆತನ, ರೈತ,ವಾನರನ ಉಪಟಳದ ಬಗ್ಗೆ.
“ವಾನರನ ಉಪಟಳವ ಸಹಿಸುವುದು ಹೇಗಿಂದು
ಸೇನೆಯ ತೆರನಾಗಿ ಬರುತಲಿವೆ ಮುಂದು
ಆನೆಯೂ ಮಾಡದಿಹ ತೊಂದರೆಯ ನೀಡುತಿವೆ
ಏನು ಪೇಳಲಿಯಿದಕ್ಕೆ ನಂದಿಗೇಶ”.
ಇಂಥಹ ಗಮನ ಸೆಳೆಯುವಂತಹ ಮುಕ್ತಕಗಳು ಹಾಸು ಹೊಕ್ಕಾಗಿವೆ.
ಚಂದನದ ಪರಿಮಳ, ಅನ್ನ.ನೆಮ್ಮದಿ, ವಾದ, ತಾರತಮ್ಯ , ಕರ್ಮ, ಹಿರಿಯರ ಆಚರಣೆ, ಕೃತಿಚೌರ್ಯ,ಮಾತು,.ಬುದ್ದಿವಂತಿಕೆ,ಆಸೆ ದುಗುಡ,ಸರಳತೆ,ಕನಸು,ಸೆಗಣಿ,ಮಹಿಳೆ,ನೋವು, ಹತಾಶೆ ಹೀಗೇ ಬರೆಯುತ್ತಾ ಹೋದಂತೆ,ಮಕ್ತಕ ದಲ್ಲಿನ ಸಾರ ಚಿಗುರುತಲೆ ಇರುವುದರಲಿ ಸಂಶಯವಿಲ್ಲ.
“ನೀರೊಳಗೆ ನಡೆದವನ ಹೆಜ್ಜೆಗಳು ಕಾಣುವುದೇ
ತೋರುವುದೆ ಕತ್ತಲಲಿ ಅವರವರ ನೆರಳು
ಭಾರವನು ಹೊರುವವನ ನೋವಾದವು ತಿಳಿಯುವುದೇ
ತೋರುವುದು ವಿಧಿಯಾಟ ನಂದಿಗೇಶ”
ನೋವಿಗೊಂದು ಉತ್ತಮ ನಿದರ್ಶನ ಕೊಟ್ಟಿದ್ದಾರೆ. ಹೀಗೇ ಓದುತ್ತ ಹೋದಂತೆ ಓದಿಸಿಕೊಂಡು ಹೋಗುವ ಮುಕ್ತಕಗಳು ಸಂಕಷ್ಟ ಪರಿಸ್ಥಿತಿಗೆ ಸಂಜೀವಿನಿ ಯಂತೆ.
ನುಡಿಮುತ್ತುಗಳ ಹಾರವಿರುವ ಮುಕ್ತಕ ಆಕಾರದಲ್ಲಿ ಚಿಕ್ಕದಾಗಿದ್ದು ಒಂದೇ ಭಾವವನ್ನು ಅರ್ಥಗರ್ಭಿತವಾಗಿ ಅಭಿವ್ಯಕ್ತಪಡಿಸುವ ಬಿಡಿ ಪದ್ಯ.
ಚಿಕ್ಕದಾಗಿದ್ದರು ಚೊಕ್ಕವಾಗಿದ್ದು ಕಡಿಮೆ ಪದಗಳಲಿ ವಿಶಾಲಾರ್ಥಕೊಡುವ ಮತ್ತು ಆತ್ಮ ಸ್ಥೈರ್ಯವನ್ನು ನೀಡುತ್ತದೆ ‘ನಂದಿಗೇಶನ ಮುಕ್ತಗಳು’. ಈ ಮುಕ್ತಕಗಳಿಗೆ ಮುನ್ನುಡಿಯನ್ನು ನಾರಾಯಣ ಭಟ್ ಹಿಳ್ಳೆಮನೆ ರವರು ಚೆನ್ನುಡಿಯನ್ನು ಮಧುರಕಾನನ ಗಣಪತಿ ಭಟ್ಟ ರವರು ಬಹಳ ಅರ್ಥಗರ್ಭಿತವಾಗಿ ಅಭಿವ್ಯಕ್ತ ಪಡಿಸಿದ್ದಾರೆ. ಮುಕ್ತಕದ ಕೃತಿಕಾರರಾದ ಗೋಪಾಲಕೃಷ್ಣ ಭಟ್ ಮನವಳಿಕೆ ರವರಿಂದ ಇನ್ನಷ್ಟು ಬರಹಗಳು ಲೇಖನಿಯಿಂದ ಹೊರಬಂದು ಕನ್ನಡ ಸಾರಸ್ವತಲೋಕಕೆ ಅರ್ಪಣೆಯಾಗಲಿ. ಇಂಥ ಅಪೂರ್ವ ಕೃತಿಯನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ನೀಡಿದ ತಮಗೆ ಅಭಿನಂದನೆಗಳು.
—————————————–
ವಿಮಲಾರುಣ ಪಡ್ಡoಬೈಲ್
ಶುಭದೊಸಗೆ
Nice