ಲಲಿತಾ ಕ್ಯಾಸನ್ನವರ ಕವಿತೆ-ಭಾವನೆಗಳ ಬಿಕರಿ

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ ಕವಿತೆ-

ಭಾವನೆಗಳ ಬಿಕರಿ

ಭಾವನೆಗಳೇ ಬರುತಿಲ್ಲ ಮನಸು
ಬರಿದಾಗುತಿವೆಯಲ್ಲ….

ನಿನ್ನ ನೆನಪು ಕನಸುಗಳ ನಡುವೆ
ಕಣ್ಣುಮುಚ್ಚಾಲೆ ಸಲ್ಲ ಬಿಮ್ಮನೆ
ಧುಮುಕಿ ಬಂದಿರುವ ಸೆಳವಿಗೆ
ಛಿದ್ರ ಛಿದ್ರವಾಗಿ ಹೋಗಿವೆ ಭಾವನೆಗಳೆಲ್ಲ…

ಕಳೆದ ಕ್ಷಣಗಳು ಇಲ್ಲಿವೆ ನೋಡಿ
ಸತ್ಯ ಸುಳ್ಳುಗಳ ಪರದೆಯಲಿ
ಸಂಧಿಗಳಲೂ ಬಿಡದೆ ತುಂಬಿಕೊಂಡಿವೆ
ನಿನ್ನ ಪ್ರೀತಿ ನೆನಪು ಮೋಸಗಳ ಚಿತ್ರ

ಕೈಹಿಡಿದು ನಡೆದಾ ಸುಂದರ ಕ್ಷಣಗಳ
ಬಿಚ್ಚಿ ಹಂಚಿಕೊಂಡಾ ಸುಂದರ ಘಳಿಗೆಗಳ
ಕೈಬೆರಳ ಸಂಧಿಯಲಿ ಕಚಗುಳಿಯಿಟ್ಟಾ ಒಲವಿಗೆ
ಸ್ಮಶಾನ ಮೌನ ಆವರಿಸಿ ಬಿಟ್ಟಿದೆ ಆಗಲೇ

ಸುತ್ತಿದಾ ದಾರಿಯಲಿ ಕಂಡರಿಯದ
ಭದ್ರತೆಯು ನಿನ್ನ ಬಾಹುಬಂಧನದಲಿ
ತುಟಿ ಕಚ್ಚಿ ಹಿಡಿದರೂ ಬಿಡದೆ ನಿನ್ನ ಸಲ್ಲಾಪ
ಮಾಸಿ ಮರೆಯಾಗಿ ಹೋದವು ನಿನ್ನ ತಾಕಲಾಟದಲಿ

ಕೊನೆಯ ಮಾತು ಕೊನೆಯ ಮುತ್ತು
ಕೊನೆಯ ಸಲ್ಲಾಪ ಎಲ್ಲವೂ ವಿಸ್ಮಯ
ಒಂಚೂರು ತಿಳಿಯದಂತೆ ನಿಗೂಢವಾಗಿರಿಸಿದೆ
ಬಿಚ್ಚಿ ಹಂಚಿಕೊಂಡಾ ನನಗೆ  ಬಿಕ್ಕಳಿಕೆ ನೀಡಿದೆ.

ನಿಗೂಢತೆಯಲೂ ನನ್ನತನವ ನೀ ಅರಿಯದೆ
ನಿನ್ನತನವ ನೀ ತೋರಿಸಿ ಕಠೋರಿಯಾದೆ
ಹ್ರದಯದ ಪಿಸುಮಾತಿಗೆ ಭಾಷ್ಯ ಬರೆಯುತಲೆ
ನನ್ನ ಭಾವನೆಗಳ ಮಾರಾಟಕ್ಕೆ ಹಚ್ಚಿದೆ….

—————————

ಲಲಿತಾ ಕ್ಯಾಸನ್ನವರ

One thought on “ಲಲಿತಾ ಕ್ಯಾಸನ್ನವರ ಕವಿತೆ-ಭಾವನೆಗಳ ಬಿಕರಿ

Leave a Reply

Back To Top