ಕಾವ್ಯ ಸಂಗಾತಿ
ಸುಕನಸು
ಗಜಲ್
ನಿನ್ನೊಲವಿಂದ ಅರಳಿದ ಸುಮ ನಾನು
ನಿನ್ನಕ್ಕರೆಯಲಿ ಚಿಗುರಿದ ಸುಮ ನಾನು
ನಿನ್ನ ಗಮನ ಅರೆಕ್ಷಣ ಅತ್ತಿತಾದರೆ ಭಯ
ನಿನ್ನಾನಸಕ್ತಿಗೆ ಮುದುಡಿದ ಸುಮ ನಾನು
ಮುದ್ದಾಡುವ ಪರಿಗೆ ಮಂತ್ರ ಮುಗ್ಧಳಾದೆ
ನಿನ್ನಾನುರಾಗಕೆ ನಳಿಸಿದ ಸುಮ ನಾನು
ನಿನ್ನ ಸಲುಗೆ ಇತರರೊಡನೆ ಸಾವಿಗೆ ಸಮ
ನಿನ್ನಾನಾದರಕೆ ಒಣಗಿದ ಸುಮ ನಾನು
ನಿನ್ನ ಸೆಳೆಯಲಿ ಮಲ್ಲಿಗೆ ಸುಮದ ಕಂಪು
ನಿನ್ನಾಸ್ತೆಯಲಿ ಮಿಣುಕಿದ ಸುಮ ನಾನು
ಸುಕನಸು