ಡಾ ಅನ್ನಪೂರ್ಣ ಹಿರೇಮಠ-ರೈತ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ರೈತ

ಬೆಳಗು ಮುಂಜಾನೆದ್ದು ರಾಗಿ ಮುದ್ದೆ ಮೆದ್ದು
ಜೋಡ ಎತ್ತಿನ ಗಾಡಿ ಹೂಡಿ ವಾರಿ ಹೋಲಕ್ಕೊಗಿ
ರೆಂಟೆ ಕುಂಟಿ ಹೋರಿ ಜಂಟಿಯಾಗಿ ಹೊಡೆದು
ಕಸ ಕಡ್ಡಿ ಕಲ್ಲು ತೆಗೆದು ಹೊಲವ ಹಸನ ಮಾಡುತ ಶ್ರಮದಿ ಸಾಗಿ//

ಚಿನ್ನದ ಮಣ್ಣಲಿ ಮುತ್ತಿನ ಕಾಳು ಚೆನ್ನಾಗಿ ಬಿತ್ತಿ
ಹೊನ್ನಿನ ಬೆಳೆಯನೆ ತೆಗೆಯುವನು ಉತ್ತಿ ಉತ್ತಿ
ಕಣ್ಮಣ ತಣಿಸೋ ಹಸಿರ ಬೆಳೆ ಬೆಳೆಯುತ
ಮಣ್ಣಿನ ಮಗನಾಗಿ ನಿಸ್ವಾರ್ಥ ಸೇವೆ ಗೈಯುವ ಜೋಗಿ//

ತಣ್ಣನೆಯ ತಂಗಾಳಿಯಲಿ ಸುಖ ಪಡುವನು
ಬಣ್ಣನೆಯ ಬಯಕೆಗಳಲಿ ಮನ ಇರಿಸನಿವನು
ಅಣ್ಣ ಬಸವಣ್ಣನ ನೆನೆಯುತ ದುಡಿವನಿವನು
ಸಣ್ಣ ಸಣ್ಣ ಸಂತೋಷಗಳಲಿ ತಣಿಯೋ ಸಂಪನ್ನ ತ್ಯಾಗಿ//

ವರ್ಷಕ್ಕೊಮ್ಮೆ ಸುಗ್ಗಿ ಕಾಲ ತೆನೆ ಕೊಯ್ದು
ಹಂತಿ ಹೂಡಿ ಕಾಳ ತೂರಿ ಮಾಡುವನು ರಾಶಿ
ಬಳ್ಳ ಬಳ್ಳ ತುಂಬಿ ಸಂತಿ ಪ್ಯಾಟಿ ಮಾಡಿ
ಊಟಕ್ಕ ಅನ್ನ ನೀಡಿ ಬಂದದ್ದರಲ್ಲೆ ಬಾಳು ಸಾಗಿಸೊ ಯೋಗಿ//

ದೇಶದ ಬೆನ್ನೆಲುಬು ಎಂಬ ಕೀರ್ತಿ ಇವನದು
ದೇಶದೆಳ್ಗೆಯಲಿ ಇವನ ಪಾಲು ಅಪಾರ ಅಪಾರ
ಇವನಿಲ್ಲದ ಬಾಳು ಉಹಿಸಲು ಸಾಧ್ಯವೇ ಇಲ್ಲಾ
ಬೆಡಗು ಬಿನ್ನಾಣ ಅರಿಯದ ಸರಳ ಜೀವಿ ನಿತ್ಯ ವಿರಾಗಿ//


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top