ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿ-
ಬೀಜ ಬಿತ್ತ ಮ್ಯಾಲ.
1.
ಧರಿಯ ಮ್ಯಾಲ
ಹೊತ್ತ ಬೀಜ
ಬಿತ್ತ ಮ್ಯಾಲ
ಹೊತ್ತು ನಿಲ್ಲುತಾವ //
2.
ತತ್ತಿ ಬಿಟ್ಟಮ್ಯಾಲ
ಹಿಟ್ಟು ಕರೆಯುತಾವ
ಹಸಿವು ನೀಗುತಾವ
ನಗುವು ಮೂಡುತಾವ//
3.
ಒಲೆಯ ಉರಿಸೋಕ
ಬೆಟ್ಟ ಹತ್ತಬೇಕು
ದಾರಿಕಾಯೋ ಮಕ್ಲ
ಹಸಿವು ತನಿಸಬೇಕು.//
4.
ಹೊರೆಯ ನೋಡುವಾಗ
ನಗುವು ಮೂಡುತಾವ
ಜೊತೆಗೆ ಕೂಡಿ ನಲಿದು
ರೊಟ್ಟಿ ಉಣ್ಣುತಾವ//
5.
ಬಡವನಾದರೇನ
ಬಾಳು ಚಂದ ನೋಡ
ತಿಳಿಯಲೇನು ಬೇಕ
ದುಡಿಮೆ ಒಂದೇ ಸಾಕ.//
ಮನ್ಸೂರ್ ಮುಲ್ಕಿ