ಮಹಾಂತೇಶ ಕಮತ-ಹೂವಿನಿಂದ ಎಲ್ಲವೂ ಅಂದ||

ಕಾವ್ಯ ಸಂಗಾತಿ

ಮಹಾಂತೇಶ ಕಮತ-

ಹೂವಿನಿಂದ ಎಲ್ಲವೂ ಅಂದ||

ಇರುವಳು ನನ್ನ ಚಲುವೆ ತೆಳ್ಳಗೆ
ಬೆಳಗಿನ ಜಾವ ಅರಳಿತು ಮಲ್ಲಿಗೆ
ಸುತ್ತಿದಳು ಮಲ್ಲಿಗೆಯನ ತುರುಬಿಗೆ
ಇಟ್ಟಳು ಗುಲಾಬಿಯೊಂದು ಜಡೆಗೆ

ನೋಡಲಿರುವಳು ನನ್ನವಳು ಕುಳ್ಳಿ
ಅವಳಿಗಾಗಿಯೇ ಹಬ್ಬಿಸಿದೆ ಹೂ ಬಳ್ಳಿ
ಬೆಳಸಿದೆ ಅವಳಿಗಾಗಿ ನನ್ನ ಮನೆ ಅಂಗಳದಲ್ಲಿ
ಹೂವಿನಿಂದೆ ಅವಳಂದ ಕಾನಿಸುವುದಿಲ್ಲಿ

ನನ್ನಾಕಿ ನಂಗೆ ಕಾಣುತಿಹಳು ಚಂದ
ಜಾಜಿ ಮಲ್ಲಿಗೆಯಷ್ಟು ಅಂದ
ತರ ತರದ ಕುಸುಮವ ಬೆಳೆಸಿ ನೋಡು
ಕುಸುಮದಿ ಇಲ್ಲಾ ನಿನಗ್ಯಾವದು ಕೇಡು

ಬಲುಸುಂದರವಿದೆ ನನ್ನವಳ ನೋಟ
ಮನೆಮುಂದಿರಲೊಂದು ಹೂವಿನ ತೋಟ
ನಡೆಯುವುದೆಲ್ಲಿ ಯಾವುದಿದಿಲ್ಲದೆ
ಹೆಣ್ಣಿಗೆ,ಪೂಜೆಗೆ,ಕೊನೆಗಳಿಗೆಯ ಶವಗೆ

ಪತಿಯಾದೆನಾ ಅವಳ ಪ್ರೀತಿನ ಗಳಿಸಿ
ಅರಿವಿಲ್ಲದವಳಿಗೆಲ್ಲವ ತಿಳಿಸಿ
ಮನೆಅಂಗಳದಿ ಪುಷ್ಪವ ಬೆಳೆಸಿ,
ಹಿತ-ಅಹಿತಕ್ಕೆ ಮಿತವಾಗಿ ಬಳಸಿ
ಬಳ್ಳಿಯ ಉಳಿಸಿ ಪುಣ್ಯವ ಗಳಿಸಿ


ಮಹಾಂತೇಶ ಕಮತ





Leave a Reply

Back To Top