ಕಾವ್ಯ ಸಂಗಾತಿ
ಶೃತಿ ಮೇಲುಸೀಮೆ
ನಾ ಕಂಡ ಗಾಂಧಿ
ಕೋಲು ಹಿಡಿದು ಬಂದು
ಅಹಿಂಸೆ ತತ್ವ ಸಾರಿ
ಸ್ವತಂತ್ರತೆಯ ಬೀಜ ಬಿತ್ತಿದ
ಮೊದಲ ಬದಲಾವಣೆ ನಿನ್ನಿಂದಲೇ ಎಂದ
ರಾಮ ರಹೀಮನ ಭಜಿಸಿ
ದೇಶವ ಕಟ್ಟುವಾಗ
ಹಿಂಸೆಯ ಗೋಡೆಯ ಉರುಳಿಸಿ
ಭ್ರಾತೃತ್ವದ ಸಂಕೋಲೆಯ ರಚಿಸಿ
ಬದುಕಿದ್ದರೂ ಸತ್ತಂತಿರುವ
ಲೋಕದ ಜನರ ಮದ್ಯ,
ಮರಣಿಸಿದರೂ ಬದುಕಿರುವ
ಮಹಾನ್ ದಿವ್ಯ ಚೇತನ
ಕಾಯ ಅಳಿದರೂ ಕಾಯಕ ಉಳಿಸಿರುವ,
ಉಸಿರು ನಿಂತರು ಹೆಸರು ಬೆಳಗುತಿರುವ
ಅವರೇ ನಮ್ಮ ಬಾಪೂ
ಅವರೇ ನಮ್ಮ ಗಾಂಧಿ
ಶೃತಿ ಮೇಲುಸೀಮೆ
ಸರಳವಾಗಿ,,ಚೆಲೋ ಬರೆದಿರಿ