ಚೈತ್ರಾ ತಿಪ್ಪೇಸ್ವಾಮಿ-ನಾ ಕಂಡಂತೆ ಬಾಪು

ಕಾವ್ಯ ಸಂಗಾತಿ

ಚೈತ್ರಾ ತಿಪ್ಪೇಸ್ವಾಮಿ-

ನಾ ಕಂಡಂತೆ ಬಾಪು

ದೇಶದ ಮಹಾತ್ಮ ನಮ್ಮ ಬಾಪು
ಹೋರಾಟದಿ ಅರಳಿದ ಅವರ ಬದುಕು
ಸತ್ಯಅಹಿಂಸೆಯ ಮಾರ್ಗ ತುಳಿದು
ದೇಶಕೆ ತಂದರು ಸ್ವಾತಂತ್ರ್ಯದ ಬೆಳಕು

ಬಾಲ್ಯದಿ ತುಂಟಾಟಗಳ ಮಾಡುತ ಕಳೆದರು
ಸುಳ್ಳು ಹೇಳಿ ದುಶ್ಯ್ಚಟ ಮಾಡಿದರು
ತಪ್ಪಿಗೆ ತಾ ಮನದಲ್ಲೆ ತೊಳಲಾಡಿದರು
ತಂದೆಗೆ ಕ್ಷಮಾಪಣೆ ಪತ್ರವ ಬರೆದರು

ಮಾಡು ಇಲ್ಲವೆ ಮಡಿ  ಕರೆ ನೀಡಿದರು
ಬ್ರಿಟಿಷರನು ದೇಶದಿಂದಲೆ  ತೊಲಗಿಸಿದರು
ವಿದೇಶಿ ವಸ್ತ್ರ ಬಹಿಷ್ಕರಿಸಿ
ತಮ್ಮ ಉಡುಪನ್ನೆ ಸರಳೀಕರಿಸಿದರು

ಚಳುವಳಿ ಸತ್ಯಾಗ್ರಹ ಮಾಡುತ ಬಂದರು
ಬ್ರಿಟಿಷರ ದಬ್ಬಾಳಿಕೆಗೆ ಕಡಿವಾಣ ತಂದರು
ಸ್ವದೇಶಿ ವಸ್ತುವಿಗೆ ಜೈಕಾರ ಎಂದರು
ಖಾದಿವಸ್ತ್ರವೆ ಶ್ರೇಷ್ಠವೆಂದು ಸಾರಿದರು

ಸ್ವಚ್ಚತೆ ಉತ್ತಮವೆಂದ ಗಾಂಧಿ ತಾತ
ದೇಶಕ್ಕಾಗಿ ಉಪವಾಸ ವತ್ರ ಕೈಗೊಂಡರು
ಸತ್ಯ ಅಹಿಂಸೆಯ ಉಸಿರಾಗಿಸಿಕೊಂಡು
ರಾಷ್ಟಪಿತರಾಗಿ ಜನಮಾನಸದಲ್ಲಿ ಉಳಿದಿಹರು


  ಚೈತ್ರಾ ತಿಪ್ಪೇಸ್ವಾಮಿ.

Leave a Reply

Back To Top