ಕಾವ್ಯ ಸಂಗಾತಿ
ಡಾ. ಸುನೀಲ್ ಕುಮಾರ್ ಎಸ್-
ಗಜಲ್
ಗೈರ್ ಮುರದಫ್ ಗಜ಼ಲ್
ಸಂಜೆ ಹಾಲ್ಗಡಲಲಿ ಉನ್ಮಾದದ ಅಲೆಗಳು ಕಲೆ ಮೂಡಿಸಿ ಬರಸೆಳೆಯಿತು
ಬಂಜೆ ಒಡಲಲಿ ನಂಜು ಬಸಿದು ಅನುರಾಗದ ಪಂಜು ಮನಬೆಳಗಿತು
ಕನಕಾಂಬರ ಮುಡಿಹಾರ ಮೂಡಿಸಿ ಆಡಂಬರ ಕಣ್ಣಿಗಿಟ್ಟೆ ಆಹ್ಲಾದಕರ ಸೋನೆ
ನೀಲಾಂಬರ ಚಂದ್ರಿಕೆ ಚುಂಬಿಸಲು ಮೋದದಿ ತರುಲತೆಗಳ ಉಯ್ಯಾಲೆ ತೇಲಾಡಿಸಿತು
ನಭದ ನಾಭಿಯಲಿ ಸುಳಿವಿಲ್ಲದ ರಸ ಹರಿದು ಝೇಂಕರಿಸಿತು ತನುವು
ವೃಷಭ ಕ್ಷೀರದಲಿ ಆಜ್ಯ ಮೇಳೈಸಲು ಶೃಂಗಾರ ಕಾವ್ಯ ಕೆನೆಕಟ್ಟಿತು
ಮುಂಜಾನೆ ಮಂಜರಳು ತಾಕಲು ಮುಂಗುರುಳು ಬೆರಳ ಸ್ಪರ್ಶಿಸಿ ಮುತ್ತಿಟ್ಟಿದೆ
ಖಜಾನೆ ಆಯಿತು ಹೃದಯ ಸವಿ ನೆನಪುಗಳ ಸಂಗ್ರಹಿಸಿ ಕುಣಿದಾಡಿತು
ನವತಾರೆ ನೀ ಬಾರೆ ಆಲಿಸು ಕುಮಾರನ ಕರೆ ಬಿಂಕ ಡೊಂಕಾಗಿಸಿ
ಹಸಿಮೋರೆ ತುಸು ತೋರಿ ರವಿಪ್ರಭೆಗೆ ಮುಖಕಾಂತಿ ಚಿಮ್ಮಿ ಹೊನಲಾಯಿತು
ಸುಕುಮಾರ
ಸುಂದರ ಕವನ….
ಧನ್ಯವಾದಗಳು ಸರ್
ಅಬ್ದುತ ಪೋಣಿತ ಭಾವಲಹರಿ
ಧನ್ಯವಾಗಳು ಸರ್