ಕಾವ್ಯ ಸಂಗಾತಿ
ಐಗೂರು ಮೋಹನ್ ದಾಸ್
ಮನಸ್ಸು….
ಕೆಲವೊಂದು ದಿನ
ನನ್ನ ‘ಮನಸ್ಸು’ಗೆ
‘ಅಕ್ಷರ’ಗಳ ಮೇಲೆಯೂ
ಮುನಿಸು…!
ಮನದಲ್ಲಿ ಒಂದು
ಅಕ್ಷರವೂ ನುಸುಳಿ
ಬರದ್ದಂತೆ ದೊಡ್ಡ
‘ಬೇಲಿ ‘ಹಾಕಿರುತ್ತದೆ…!!
ಕೈಯಲ್ಲಿ ಲೇಖನಿಯನ್ನು
ಹಿಡಿದುಕೊಂಡು
ಅಕ್ಷರ ಬೇಟೆಗೆ
ಹೆಜ್ಜೆ ಹಾಕಿದ್ದರೇ…..
ಮನದ ಅಕ್ಷರ
ಸಂತೆಯಲ್ಲಿ ತುಸು
ಸದ್ದು – ಗದ್ದಲವೇ ಇರುವುದಿಲ್ಲ…!!
ಆ ಕ್ಷಣವೇ
ನೊಂದ ಮನಸ್ಸಿನಲ್ಲಿ
ಪ್ರಕೃತಿಯ ಮಡಿಲಿನಲ್ಲಿ
ಚಿಂತೆಯಿಂದ ಕುಳಿತು…..
ಅಕ್ಷರಗಳೊಂದಿಗೆ
ಪಿಸುಮಾತಿನಲ್ಲಿ ತೊಡಗುವ
ಮನಸ್ಸಿನ ಆಸೆಗೆ
ಬರಗಾಲದ ಕರಿನೆರಳು….!!
ಅಕ್ಷರಗಳು ಇಲ್ಲಾದ
ಬಾಳಿನಲ್ಲಿ ಹಬ್ಬವೂ
ಇಲ್ಲ…!
ಪ್ರಣಯ ಸಹ
ಇಲ್ಲ…!
ಮೌನ ಆಚರಣೆ
ಮಾತ್ರ…!!
ಐಗೂರು ಮೋಹನ್ ದಾಸ್, ಜಿ.