ಕಾವ್ಯ ಸಂಗಾತಿ
ಮನ್ಸೂರ್ ಮುಲ್ಕಿಯವರ
ಅರಿವು
ಮನವು ತನನಕೆ ತನುವು ಮನನಕೆ
ಓದು ಅರಿವಿಗೆ ಅರಿವು ಬದುಕಿಗೆ
ಹೊಸ ಗಿಡದಲಿ ಮೊಗ್ಗು ಅರಳಿದೆ
ಬಾವ ಕೂಡಿ ಮಾತು ಮೂಡಿದೆ.
ಅದಿರು ಕಣದಲಿ ಬೆಳಕು ಹರಿದಿದೆ
ಉಸಿರು ಸೆಳೆಯಲು ಗಾಳಿ ಬೇಕಿದೆ
ಬಾನು ಕೆಂಪೇರಿ ಮೋಡ ಕವಿದಿದೆ
ಮಳೆ ಸುರಿಯಲು ಫಲವು ಸಿಗಬೇಕಿದೆ
ಉಂಡ ಅನ್ನದಲ್ಲಿ ಕಂಡ ಸಿಹಿಯೊಳು
ಬೆಳಗುತಿಹುದು ಬದುಕಿನ ಕಿಂಡೀ..
ರೈತನೊಳಗಿನ ನೋವ ತಿಳಿಯದೆ
ಬದುಕನು ನೀ ಹೇಗೆ ಕಂಡೀ..
ಪ್ರೀತಿಯಲಿ ನಡೆಯುತ ಅಹಂ ಚೆಲ್ಲಿ
ಮಾತಿನಲ್ಲಿ ವೀಣೆಯನ್ನೇ ನುಡಿಸಿಬಿಡು
ಬೆದರಿಕೆ ಗದರಿಕೆ ನಂಜು ಅಳಿಸಿ
ಸ್ವಾದ ಇರುವ ಬದುಕಿನಲ್ಲಿ ಸಿಟ್ಟು ಬಿಟ್ಟುಬಿಡು.
ಮನ್ಸೂರ್ ಮುಲ್ಕಿ