ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ ಕವಿತೆ
ನಿನ್ನ ದ್ಯಾನಿಸಿ
ಹೊಳೆವ ಕಂಗಳಲಿ ನೋವಿದೆ ಗೆಳತಿ
ನಾಳೆಯ ಕನಸಿಗೆ ಜೀವ ತುಂಬ ಬೇಕಿದೆ ಗೆಳತಿ
ಅರಿವಿನ ಅದರದ ತುಂಬಾ
ಸಾಕ್ಷಿ ಹುಡುಕುತ್ತಿದ್ದೇನೆ
ಘಾಸಿಯಾದ ಹೃದಯದ ವೇದನೆ ತಿಳಿಯ ಬೇಕಿದೆ ಗೆಳತಿ
ಮರೆತು ಮಣ್ಣಾಗುವ ಕಣದಲೂ ನಿನ್ನ ದ್ಯಾನಿಸಿ
ನೋವ ಮರೆವ ಹಾದಿಯ
ತುಳಿಯ ಬೇಕಿದೆ ಗೆಳತಿ
ಚರಾಚರ ವಸ್ತುವಿನಲಿ ಲೀನವಾಗಿರುವ ನಿನ್ನ
ಕ್ಯಾನವಾಸಿನ ಚಿತ್ರ
ಮನದಿಂದ ಅಳುಕಿಸಬೇಕಿದೆ ಗೆಳತಿ
ಹುಸಿ ಮಾತಿನ ಚಾಟಿ ಏಟಿಗೆ ಮೈಯೆಲ್ಲ ಹಣ್ಣಾಗಿ
ದಿನ ದೂಡುವುದು ದುಸ್ತರವಾಗಿ ಭಾರವೆನಿಸಿದೆ ಗೆಳತಿ.
ಮರುಳಸಿದ್ದಪ್ಪ ದೊಡ್ಡಮನಿ