ಮಲ್ಲಿಕಾ ಜೆ ರೈ ಪುತ್ತೂರು-ಆ ಸಂಜೆ

ಕಾವ್ಯ ಸಂಗಾತಿ

ಮಲ್ಲಿಕಾ ಜೆ ರೈ ಪುತ್ತೂರು

ಆ ಸಂಜೆ

ಮಳೆ ಹನಿ ಬಿದ್ದಾಗ ನಾನಿದ್ದೆ ದಾರಿಯಲ್ಲಿ
ಕಚಗುಳಿ ಇಟ್ಟಂತಾಯಿತು ಆಚೀಚೆ
ಎದ್ದೆನೋ ಬಿದ್ದೆನೋ ಎಂದು ಓಡುತ್ತಿದ್ದ
ನಡಿಗೆಯ ನೋಡಲು ಧರಣಿ ನಿಂತ
ಬಸ್ಸುಗಳು ಮುಗಿಲಿಗೂ ನಗುವುಕ್ಕಿ
ತಡೆಯಲಾಗದ ಗಳಿಗೆ ನೇಸರನಿದ್ದರೂ
ಆ ವೇಳೆಗೆ ಹನಿಗಳದೇ ಸಾಮ್ರಾಜ್ಯ
ಬೆಳಗಿನ ಹನಿಗೂ ತಾನೇನು ಕಡಿಮೆ
ಇಲ್ಲ ಸಂಜೆಯ ರಾಗಕೆ ಸ್ವರದೊಂದಿಗೆ
ಭಾಷ್ಯ ಬರೆದ ಪುಳಕ. ಲೆಕ್ಕವಿಟ್ಟವರಾರು
ಹೇಳಿ ಕೊಟ್ಟವರಾರು ಬಣ್ಣಿಸಲಾಗದ
ಸುಮಧುರ ರಸ ತಾಣ .
ಸಂಜೆಯ ಹಾಡು ಮಾಧುರ್ಯ
ಹೊಮ್ಮಿಸುವುದು ಸುಮ್ಮ ಸುಮ್ಮನೆ ಅಲ್ಲ
ಏಳು ಬೀಳುಗಳ ಹೊಡೆತ ತಿಂದ
ಮೇಲೆ ಉಳಿದ ನಾಮಾವಶೇಷ ಸಿಹಿ
ಇಲ್ಲದೇ ಹೋದರೂ ಪಜೀತಿಯಿಲ್ಲ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ
ವೇಳೆಯೂ ಅನುಭವಗಳು ತಪ್ಪಿದ್ದಲ್ಲ.
ಆದೇ ತನನ, ಆದೇ ಹನಿ ಸುಪರ್ದಿಗೆ
ನಿಲ್ಲುವ ಜಂಜಾಟ ಕಾಣದ ಕೈಯಲ್ಲಿದೆ
ಎಲ್ಲಾ ಬರಿದೇ ನಗೆ ಬಾರದೇ ಬಿಗುವಾಗಿದೆ
ಯಾಕೆ?


ಮಲ್ಲಿಕಾ ಜೆ ರೈ ಪುತ್ತೂರು

One thought on “ಮಲ್ಲಿಕಾ ಜೆ ರೈ ಪುತ್ತೂರು-ಆ ಸಂಜೆ

Leave a Reply

Back To Top