ಕಾವ್ಯ ಸಂಗಾತಿ
ಇಂದಿರಾ ಮೋಟೆಬೆನ್ನೂರ
ಭಾವವೊಂದು ನೊಂದಾಗ
ಮುಗಿಲಲಲೆವ ಚಂದ್ರನೆದೆಯಲಿ
ನಾನು ಮಿಡಿದ ಮಾತ್ರಕೆ
ಮಿಡಿದ ಭಾವ ನಾನು ಮುಗ್ಧವೇ..?
ನೆಲದಲಿರುವ ಹೂವ ಹೃದಯದಲಿ
ನಾನು ಮಿಡಿದ ಮಾತ್ರಕೆ
ಮಿಡಿದ ಭಾವ ನಾನು ಕಳಪೆಯೇ..?
ಯಾವ ಎದೆಯ ಮೀಟಿ ಮಿಡಿದರೂ
ನುಡಿದರೂ ನಾನು ನಾನೇ
ಒಲವ ಚೆಲುವ ಮಗು ಮನದ ಭಾವ….
ಎಲ್ಲಿ ಅರಳಿದರೂ ರೂಪ ಬಣ್ಣ ಗುಣ
ಬದಲಿಸದ ನೇಹದೊಲುಮೆ
ಪರಮ ಪವಿತ್ರ ಭಾವ ಪ್ರೀತಿ ನಾನು…..
ಯಾರ ಮನದಿ ಜೀವ ತಳೆದರೂ
ಮಧುರ ಸ್ನೇಹ ಸುರಮ್ಯ ಹೃದಯ
ಸೊಗದ ಜಗದೊಲುಮೆ ಭಾವ ನೇಹ ನಾನು…
ಪ್ರೀತಿ ಹೃದಯದಲರಳೇ ಸೃಷ್ಠಿ ಸೊಬಗು
ಭಾವ ಸಂಚಲನ..ನಾನಿದ್ದರೇ ಎಲ್ಲ ಬೆಡಗು..
ಪ್ರೀತಿಯೊಂದೇ ದಿವ್ಯ ಬೆಳಕು ಎದೆಯ ಬೆಳಗು….
ಇಂದಿರಾ ಮೋಟೆಬೆನ್ನೂರ.