ಬಲವಂತ ಸಿದ್ದಪ್ಪ ಮೋರಟಗಿ (ಬಸವ ಪ್ರಿಯ)ರವರ ಕೃತಿ ಅವ್ವನ ಸೀರೆ ಸೆರಗಿನ್ಯಾಗ ಪರಿಚಯ ಸವಿತಾ ಮುದ್ಗಲ್

ಪುಸ್ತಕ ಸಂಗಾತಿ

ಬಲವಂತ ಸಿದ್ದಪ್ಪ ಮೋರಟಗಿ (ಬಸವ ಪ್ರಿಯ)ರವರ ಕೃತಿ

ಅವ್ವನ ಸೀರೆ ಸೆರಗಿನ್ಯಾಗ

ಪುಸ್ತಕ ಪರಿಚಯ
ಅವ್ವನ ಸೀರೆ ಸೆರಗಿನ್ಯಾಗ
 (ಕವನ ಸಂಕಲನ )
ಲೇಖಕರು : ಬಲವಂತ ಸಿದ್ದಪ್ಪ ಮೋರಟಗಿ (ಬಸವ ಪ್ರಿಯ)
ಮೊಬೈಲ್ ಸಂಖ್ಯೆ :9740123673
ಪ್ರಕಾಶನ :ಎಚ್ ಎಸ್ ಆರ್ ಎ
ಬೆಂಗಳೂರು

ಲೇಖಕರು ಮುಖಪುಟದ ಸಾಹಿತ್ಯ ಬಳಗದಿಂದ ಪರಿಚಿತರು. ಇವರು ಮೂಲತಃ ಬಸವನಾಡು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗುತ್ತರಗಿಯವರು.ಇವರ ಮೊದಲ ಕೃತಿ ಹೃದಯ ರಾಗಕವನ ಸಂಕಲನ, ಎರಡನೇ ಕೃತಿ ಶಾಂತಿಯ ಮನ ಶಾಂತಿಕಥಾ ಸಂಕಲನ ಹಾಗೂ ಮೂರನೇ ಕೃತಿ ಇದುವೆ ” ಅವನ ಸೀರೆ ಸೆರಗಿನ್ಯಾಗ”ಕವನ ಸಂಕಲನವು ತನ್ನ ಹೆಸರಿನಲ್ಲೇ ಓದುಗರನ್ನು ಬಾಚಿಕೊಂಡಿದೆ.
“ಒಬ್ಬ ಕಲಾವಿದನಿಗೆ ಚಪ್ಪಾಳೆ ಅದುವೇ ಬಹುಮಾನ ಹಾಗೇ ಒಬ್ಬ ಬರಹಗಾರನಿಗೆ ಓದುಗನ ಮೆಚ್ಚುಗೆ ನುಡಿಗಳೇ ಅವರಿಗೆ ಮತ್ತಷ್ಟು ಬರೆಯಲು ಪ್ರೇರಣೆ ಸಿಗುತ್ತದೆ”.
ಅದೇ ರೀತಿಯಲ್ಲಿ ಇವರ ಮೂರನೇ ಕೃತಿಗೆ ಹಿರಿಯರ ಪ್ರೋತ್ಸಾಹವೆ ಪ್ರಕಟಿಸಲು ಸಾಧ್ಯವೆಂದು ಲೇಖಕರು ಹೇಳಿದ್ದಾರೆ.
ಮನದಲ್ಲಿ ಅಡಗಿರುವ ಎಲ್ಲಾ ಭಾವನೆಗಳನ್ನು ಕವನ ರೂಪದಲ್ಲಿ ಹೊರ ಹಾಕುವುದು ಪ್ರತಿಯೊಬ್ಬ ಕವಿ ಮನಸ್ಸಿನ ಮೂಲವಾಗಿದೆ. ಲೇಖಕರಿಗೆ ತನ್ನ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ತನಗೆ,ತನ್ನವ್ವನೇ ಸರ್ವಸ್ವವೆಂದಾದಾಗ, ಬದುಕು ಬಾಳು ನೋವು ನಲಿವು ಸೋಲು ಗೆಲುವು ಎಲ್ಲಾ ಅವಳಾಗಿದ್ದಾಗ, ಅನಕ್ಷರಸ್ತೆಯಾಗಿದ್ದು ತನ್ನ ಮಗನನ್ನು ಅಕ್ಷರಸ್ಥನಾಗಿ ಮಾಡಿ, ಹಗಲಿರುಳು ದುಡಿದ ತಾಯಿಗೆ ಹಾಗು ತಂದೆಗೆ ಈ ಕೃತಿಯನ್ನು ಗೌರವಪೂರ್ವಕವಾಗಿ ಸಮರ್ಪಿಸಿದ್ದಾರೆ.
” ಆಯಾ ಕಾಲದ ಒಲವಿಗರುಗುಣವಾಗಿ ಬೇರೆ ಬೇರೆ ರೂಪ ಪಡೆದು ಮತ್ತೆ ಮತ್ತೆ ಬರುತ್ತಲೆ ಇರುತ್ತದೆ,ಅಂತೇ ಇದನ್ನು ಸಾವಿರ ವರ್ಷದ ಹಿಂದೆಯೇ ಪಂಪ ಮಹಾಕವಿ ಇದು *ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ  ಎಂದಿರುವ ಮಾತು ನೆನಪಾಗುತ್ತದೆ ಎಂದು ಕೃತಿಗೆ ಮುನ್ನುಡಿ ಬರೆದ ಕನ್ನಡ ಸಾಹಿತ್ಯ ಕ್ಷೇತ್ರದ ಪ್ರಮುಖ ವಿಮರ್ಶಕರು,ಸಾಹಿತಿಗಳು ಮತ್ತು ಪ್ರಾಚಾರ್ಯರಾದ ಡಾಕ್ಟರ್ ವೈ ಎಂ ಯಾಕೊಳ್ಳಿ ಸರ್ ಹಾಗೂ ಕವಿತೆಗಳ ವಸ್ತು ವೈವಿಧ್ಯವಾದದ್ದು,ತಂದೆ ತಾಯಿ ನಾಡು ನುಡಿ ಅಭಿಮಾನ ಪ್ರೀತಿ ಪ್ರೇಮ ನಿಸರ್ಗ ಹೀಗೆ ವಿಬಿನ್ನ ವಸ್ತುಗಳನ್ನು ಕವಿತೆಯಾಗಿಸಿದ್ದಾರೆ, ಮೊದಲ ಸಂಕಲನವೆಂದಾಗ ತುಸು ಹೆಚ್ಚು ಮಾತು, ದುಂದು ವೆಚ್ಚ ಸಾಮಾನ್ಯವೆಂದು, ಪ್ರತಿಯೊಬ್ಬ ಕವಿಯು ಪರಂಪರೆಯೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾ ತನ್ನ ಸ್ವಂತದಾರಿ ಯಾವುದು ಎಂಬುದನ್ನು ಹುಡುಕಿಕೊಳ್ಳಬೇಕೆಂದು  ಚಂದ ದ ಬೆನ್ನುಡಿಯನ್ನು ಶ್ರೀಮತಿ. ಅರುಣಾ ನರೇಂದ್ರ, ಕೊಪ್ಪಳ, ಕವಯಿತ್ರಿ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರು ಬರೆರಿದ್ದಾರೆ.
“ಅವ್ವನ ಸೀರೆ ಸೆರಗಿನ್ಯಾಗ ಈ ಕವನ ಸಂಕಲನದಲ್ಲಿ ಒಟ್ಟು 80 ಕವಿತೆಗಳು ಕೂಡಿವೆ”.
 ನೆರಳಾಗಿರುವೆ,ಸರ್ವಗನ್ನಡ, ಉದ್ಯೋಗಸ್ತೆ ನನ್ನವಳು, ಅವನು ಮತ್ತು ಅವಳು (ಕಥನ ಕವನ), ಮಲೆನಾಡು ಮಲ್ಲಿಗೆ ಕನ್ನಡೋತ್ಸವ,ಬಾ ನೀರೆ ನಮ್ಮೂರಿಗೆ, ಕಿಲ ಕಿಲ ಮೊಬೈಲ್, ನಾ ಶಾಲೆ ಕಲಿಯಬೇಕು, ಮಗ ಕೇಳಿದ ಪ್ರಶ್ನೆ, ಮಾಡಲ್ ಹುಡುಗಿಯರು, ಗುರುವಿನ ಮಹಿಮೆ ಹೀಗೆ ವಿಭಿನ್ನ ಕವನಗಳು ಒಂದಕ್ಕೊಂದು ಪೈಪೋಟಿ ಕೊಟ್ಟಂತೆ ತುಂಬಾ ಸೊಗಸಾಗಿವೆ.
 ಈ ಕವನ ಸಂಕಲನದಲ್ಲಿ ಕವಿಯ ಭಾವನೆಯಲ್ಲಿ ಮೂಡಿದ ಪ್ರೀತಿ, ದೇಶ ಪ್ರೇಮ, ವಾತ್ಸಲ್ಯ, ಗುರು ಪ್ರೇಮ ಹೀಗೆ ಎಲ್ಲ ವಿಭಾಗದಲ್ಲಿಯು ಕವನ ಅರ್ಥಪೂರ್ಣವಾಗಿವೆ.
 ಇದ್ದು ಇಲ್ಲದವರುಕವನದ ಮೊದಲ ಚರಣದಲ್ಲಿ,
“ನೊಂದವರಿವರು ಬಹಳ ನೊಂದವರು,
ಕಷ್ಟದ ಕುಲುಮೆಯಲ್ಲಿ ಬೆಂದವರು, ನೋವಿನ ಮಳೆಯಲ್ಲಿ ಮಿಂದವರು, ದೇಶಕ್ಕೆ ಅನ್ನವನಿತ ಅನ್ನದಾತರು”!
ಈ ಮೇಲಿನ ಸಾಲುಗಳು ಇಂದಿಗೂ ಮುಂದಿಗೂ ಅಷ್ಟೇ ಸತ್ಯವನ್ನು ಒಳಗೊಂಡಿದೆ. ಏಕೆಂದರೆ ನಮ್ಮ ಭಾರತ ದೇಶದ ಬೆನ್ನಲುಬು ಈ ರೈತಾಪಿ ಜನರೇ. ಆದ್ರೆ ಇವರ ಜೀವನ ಹೂವಿನ ಸುವಾಸನೆ ಬೀರುವ ಸುಸುಮಯವಾಗಿರಲ್ಲ, ಇವರು ಹಗಲಿರುಳು ಶ್ರಮವಹಿಸಿ ಬೆವರಿನ ಮುತ್ತುಗಳೊಂದಿಗೆ ಚೆಲ್ಲಾಟ ಆಡುವ ಶ್ರಮಜೀವಿಗಳು ಇವರು,ಕಾದ ಕುಲುಮೆಯಲ್ಲಿ ಕಬ್ಬಿಣ ಹೇಗೆ ಕೆಂಪಾಗಿ ಕಾಣುವುದೋ ಹಾಗೇ ಇವರ ಶ್ರಮವು ಅಷ್ಟೇ ಶಾಖದ್ಬರಿತವಾಗಿರುತ್ತದೆ. ಸಕಲ ಮಾನವರಿಗೆ ಅನ್ನ ನೀಡುವ ಇವರೇ ಸಾಲಕ್ಕೆ ಒಮ್ಮೊಮ್ಮೆ ಶರಣಾಗಿ ಜೀವಕೂಡ ಒತ್ತೆಯಾಗಿರುತ್ತದೆ.
 ಇನ್ನೂ ಉದ್ಯೋಗಸ್ಥೆ ನನ್ನವಳುಕವನದ ” ನನ್ನವಳು ಕರ್ತವ್ಯಕ್ಕೆ ರಜೆಗಳಿಲ್ಲ, ಹಗಲು ರಾತ್ರಿಗಳ ಭೇದವಿಲ್ಲ,ವಿರಾಮ ವಿಶ್ರಾಂತಿಯ ಪಟ್ಟಿ ಇಲ್ಲ, ಭೇದ ಭಾವಗಳು ಗೊತ್ತಿಲ್ಲ,ಅವಳಿರದೆ ಬದುಕು ಬದುಕಲ್ಲ,ಬದುಕಲ್ಲಿ ಅವಳೇ ಎಲ್ಲಾ”ಎನ್ನುವ ಕವಿಗಳ  ಸಾಲುಗಳು ತಾನೊಬ್ಬ ಗೃಹಸ್ಥನಾಗಿ ತನ್ನ ಒಡತಿಯ ಬಗ್ಗೆ ಮನೋಗ್ನವಾಗಿ ಬರೆದು, ಮನೆಯಲ್ಲಿ ಬಿಡುವಿಲ್ಲದ ಕೆಲಸ, ಯಾವುದೇ ರಜೆಯಿಲ್ಲದೆ, ನಿಸ್ವಾರ್ಥ ಸೇವೆ ಮಾಡುವವಳೇ ನನ್ನ ಒಡತಿ ಎನ್ನುತ್ತಾ ಜೊತೆಗೆ ಅವಳಿಲ್ಲದೆ ಬದುಕು ಬದುಕಲ್ಲ ಎನ್ನುವ ಭಾವವೆ ಜೀವನದಲ್ಲಿ ಅವರು ಕೊಡುವ ಗೌರವ, ಪ್ರೀತಿ  ಎದ್ದು ಕಾಣುತ್ತದೆ.
ಹೀಗೆ ಹಲವಾರು ಕವನಗಳು ಓದುಗನ ಮನಸ್ಸಿಗೆ ತುಂಬಾ ಆಪ್ತವಾಗುತ್ತವೆ. ಮುಂದಿನ ಸಾಹಿತ್ಯದ ಪಯಣದಲ್ಲಿ ಇವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಜೊತೆಗೆ ಹಲವಾರು ಕೃತಿಗಳು ಇವರಿಂದ ಹೊರಹೊಮ್ಮಲಿ ಎಂದು ಹಾರೈಸುವೆ.


ಸವಿತಾ ಮುದ್ಗಲ್

One thought on “ಬಲವಂತ ಸಿದ್ದಪ್ಪ ಮೋರಟಗಿ (ಬಸವ ಪ್ರಿಯ)ರವರ ಕೃತಿ ಅವ್ವನ ಸೀರೆ ಸೆರಗಿನ್ಯಾಗ ಪರಿಚಯ ಸವಿತಾ ಮುದ್ಗಲ್

  1. ಸಂಗಾತಿ ಪತ್ರಿಕೆ ಬಳಗಕ್ಕೆ ಹೃತ್ಪೂರ್ವಕ ಧನ್ಯವಾದಗಳು ಕೃತಿ ಪರಿಚಯ ಪ್ರಕಟಿಸಿದ ಸಂಪಾದಕರಿಗೆ ಧನ್ಯವಾದಗಳು

Leave a Reply

Back To Top