ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ತಳಮಳ
ಅವಳು ಬಿಟ್ಟು ಹೋದಳೇಕೆ
ಯಾವ ಕೋಪ ಬಂದಿತೋ
ಕರೆಯು ಇಲ್ಲ ಬರವು ಇಲ್ಲ
ಯಾಕೆ ಮನವು ನೊಂದಿತೋ
ಒಂದು ಕಾಲವಿತ್ತು ಸಲಿಗೆ
ಚಂದದಿಂದ ಜೊತೆಗೆ ನಡಿಗೆ
ಇಂದು ಗ್ರಹಣ ಹಿಡಿದ ಚಂದ್ರ
ಮುಖಿಯು ಇರದ ಕೊರಗಿದೆ
ಮುಚ್ಚುಮರೆಯನಿಡದ ಮಾತು
ಹುಚ್ಚು ಹಿಡಿಸುವಂಥ ಒನಪು
ಹಗಲು ಇರುಳು ಬೇಧವಿಲ್ಲ
ಭಾವವಿಲ್ಲ ಸೊರಗದೆ
ಮನದಲೇನು ಕಹಿಯ ಭಾವ
ಯಾರು ಬೇವು ತಿನಿಸಿ ನೋವ
ನೀಡಿ ಮಾಡಲೆಂದು ದೂರ
ನನ್ನನೆಂದು ಅರಿಯೆನು
ಸಿಹಿಯ ಸವಿಯ ಸವಿದು ನಲಿವ
ಮಹಿಯಲಿರಲು ಸೇರು ಎನುವ
ಕರೆಯ ಕೊಡುತಲಿರುವೆ ಬೇಗ
ಬೀಗ ತೆಗೆದು ಬಾರೆಯಾ
ಡಾ ಸುರೇಶ ನೆಗಳಗುಳಿ