ಲಲಿತಾ ಪ್ರಭು ಅಂಗಡಿ-ಭವಿಷ್ಯದ ರೂವಾರಿ.

ಕಾವ್ಯಸಂಗಾತಿ

ಲಲಿತಾ ಪ್ರಭು ಅಂಗಡಿ

ಭವಿಷ್ಯದ ರೂವಾರಿ.

ಗುರುವೆಂಬ ಶಬುದ
ಅರಿವೆಂಬ ಭಾವನೆಯಲಿ
ಶಿಷ್ಯನೊಲುಮೆಯ ಹರಸಿ
ತಿದ್ದಿ ತೀಡಿ ಬೆನ್ನು ತಟ್ಟಿ
ಸಾರ್ಥಕ ನುಡಿಗಳ ನಿಜರೂಪದಲಿ
ಕ್ರೃತಾರ್ಥ ಸೇವೆಯ ಗುರುವಿನ
ಅಂತಃಕರಣ
ಕೆಲವೊಮ್ಮೆ ಒಲುಮೆಯ ದೇವವಾಣಿಯಾಗಿ
ಮಗದೊಮ್ಮೆ ನಲುಮೆಯ
ಭವಿಷ್ಯವಾಣಿಯಾಗಿ
ಶಿಷ್ಯರಾತ್ಮ ಶಕ್ತಿಯ ಜಾಗ್ರತೆಗೊಳಿಸಿ
ಶಿಸ್ತು ಕ್ಷಮೆ ಕರುಣೆಯ ಭಾವದಿ
ನೂಲು ನೂಲಿನಂತೆ ಹೊಸೆದು
ಆಟಪಾಟ ಸಂಗೀತ ಸಾಹಿತ್ಯದ
ಹಲವು ಬಗೆಯ ಎಳೆಗಳ ವಿಚಾರದಿ
ಅಲೆಯಾಗಿ
ಅಚಾರಕೆ ಆಳವಾದ ನಾವಿಕನಂತೆ
ಜೀವನದ ನೆನಪಿನ ಪಟದಲಿ
ಪುಟ ಪುಟಗಳನ್ನು ಛಾಪಿಸಿ
ತರಂಗಗಳ ತೇಲಿಸುವ
ಭವಿಷ್ಯದ ರೂವಾರಿ,.


ಲಲಿತಾ ಪ್ರಭು ಅಂಗಡಿ

Leave a Reply

Back To Top