ಡಾ. ಸುಮತಿ ಪಿ-ಗುರುನಮನ

ಕಾವ್ಯ ಸಂಗಾತಿ

ಡಾ. ಸುಮತಿ ಪಿ-

ಗುರುನಮನ

ಗುರುವನು ನೆನಪಿಸಬೇಕು ಭಕ್ತಿಭಾವದಿ ಮನದಲಿ
ನಿತ್ಯವೂ ನೆನಪಿಸುವೆ ಗುರುಗಳ ನಾನಿತ್ಯದಲಿ
ಗುರುಗಳಿಗಿಂತ ಬೇರಿಲ್ಲ ನನ್ನ ಜೀವನದಿ ಬಂಧು
ಗುರುವೇ ದೇವ,ಗುರುವೇ ದೈವ,ಧೀನಬಂಧು

ಪ್ರತಿ ದಿನವು ಬರೆಯುವರು ನಮ್ಮ ಗುರುಗಳು
ಕರಿಹಲಗೆಯಲ್ಲಿ ಬಿಳಿಯ ಕೋಲು ಸುಣ್ಣದಲಿ
ಅಜ್ಞಾನದ ಕತ್ತಲೆಯಾವರಿಸಿದ ಕಪ್ಪು ಮನದಲಿ
ಸುಜ್ಞಾನದ ಧಾರೆಯಿಂದ ಬೆಳಕು ಬೆಳಗಲೆಂದು

ಗುರುವೆ ನೀ ಧಾರೆಯೆರೆದ ಜ್ಞಾನದ ಈ ಚೈತನ್ಯ
ನಿನ್ನ ಶಿಷ್ಯನಾಗಿ,ಬೆಳೆದವಳು ನಾನೇ ಇಂದು ಧನ್ಯ
ಬೆಂಚಿನ ಮೇಲೆ ಕುಳಿತು ಪಾಠ ಕೇಳುವ ನಾನು
ಕರಿಹಲಗೆ ಮೇಲೆ ಬರೆಯಲನುವಾದೆನು ಕಾಣು.

ನಿನ್ನಂತೆಯೆ ಆಗಬೇಕು ನಾನೂ ಆದರ್ಶ ಶಿಕ್ಷಕ
ಶಾಲೆ ವಂಚಿತ ಮಕ್ಕಳ ಜ್ಞಾನದ ಪೋಷಕ,ರಕ್ಷಕ
ಸಾರುವೆ ಜಗಕೆ ನನ್ನ ಶಿಕ್ಷಕರ ಹಿರಿಮೆಯ ಗರಿಮೆ
ಆಶೀರ್ವದಿಸು ಗುರುವೆ ಈಡೇರಲೆಂದು ಬಯಕೆ.


ಡಾ. ಸುಮತಿ ಪಿ

Leave a Reply

Back To Top