ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….?

ಕಾವ್ಯ ಸಂಗಾತಿ

ಸುರೇಶ್ ಕಲಾಪ್ರಿಯಾ

ಮತ್ತೇನು….?

ಮತ್ತೇನು……?
ಎನ್ನುತ್ತಾ ಶುರುವಾಗುತ್ತದೆ ಹೊಸ ಮಾತು
ಮುಗಿಸಿದರು ಮುಗಿಯದ ಮನದ ಮಾತು
ಹೃದಯಕ್ಕೆ ಹೊಕ್ಕ ಹೃದ್ಯ ಮಾತು
ಮನವ ಗೆದ್ದ ಮಧುರ ಮಾತು

ಇರಲೇ ಇಲ್ಲ ಹೀಗೆ
ಈ ಮೊದಲು ಎಂದೂ
ಕಣ್ಣ ದೃಷ್ಟಿಗೆ ನೋಟ
ದೂರ ಸರಿದದ್ದೇ ಹೆಚ್ಚು
ಮಾತಿಗೆಲ್ಲಿಯ ಜಾಗ……. ಬರೀ ಮೌನರಾಗ.
ನಡುವಲ್ಲಿ ಅರಳಿದ್ದು ಹೃದಯಗಳ ಅನುರಾಗ..

ಅಂದು ಯಾರಿಗೆ.. ಯಾರೋ…..
ಪರಿಚಯದ ಅರಿವಿಲ್ಲ….
ಮಾತಿಗೂ ಮದ್ಯದಲಿ ಜಾಗವಿಲ್ಲ……
ಮೌನದ್ದೇ ದರ್ಬಾರು…. ಸರಿದದ್ದೇ ಜೋರು
ಇಂದಿಗಿಲ್ಲವೊ ಹೀಗೆ…
ಮರೆಯಾದರರೆಕ್ಷಣ…. ಹುಡುಕುವವು ಕಂಗಳು
ಕಾತರಿಸುವವು ಮಾತು…
ಮನದ ಬಯಕೆಯ ಹರವಿ…

ಮಾತಿಲ್ಲದ ಮಾತು.. ಕಳೆಯುವವು ತಾಸು..
ಸಮಯದ್ದೇ ದರ್ಬಾರು… ಮಾತಲ್ಲಿ ಲೀನ
ಮತ್ತೇನು ಎಂದಲ್ಲಿ….ಅಂತ್ಯವಲ್ಲವದು
ಹೊಸಮಾತು ಶುರುವಲ್ಲಿ…ಮನವು ಸೋತು
ನಂಬಲಾಗುತ್ತಿಲ್ಲ… ಇದು ಏನು ಬರಿ ಕನಸೇ…
ಮರೆಯಲಾರೆನು ನಿನ್ನ… ಬೆರೆತ ಮನಸೇ….


ಸುರೇಶ್ ಕಲಾಪ್ರಿಯಾ

One thought on “ಸುರೇಶ್ ಕಲಾಪ್ರಿಯಾ ಕವಿತೆ -ಮತ್ತೇನು….?

  1. ಸಂಗಾತಿ ಬಳಗಕ್ಕೆ ಧನ್ಯವಾದಗಳು ಸಂಗಾತಿಯ ಪ್ರಕಟಣೆ ಅತ್ಯಂತ ಹೆಮ್ಮೆಯ ಸಂಗತಿ

Leave a Reply

Back To Top